ಪರಿಣಿತಿ ಕಲಾಕೇಂದ್ರದ 7ನೇ ವರ್ಷದ ಸಂಭ್ರಮ, ಪರಿಣಿತಿ ರಾಷ್ಟ್ರಿಯ ನೃತ್ಯ ಸಂಗೀತೋತ್ಸವ 2022

ಸಾಗರ: ಪ್ರತಿಭಾವಂತರಿಗೆ ರಾಷ್ಟ್ರೀಯ ಮಟ್ಟದ ವೇದಿಕೆ ಕಲ್ಪಿಸುವ ಹಾಗೂ ದೇಶದ ಸಂಸ್ಕೃತಿ ಪರಂಪರೆ ಬಿಂಬಿಸುವತಹ ಕಾರ್ಯ ಶ್ರೇಷ್ಠವಾಗಿದೆ. ಯುವ ಕಲಾವಿದರಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವುದು ಸಹ ಅಭಿನಂದನೀಯ ಎಂದು ಹೈಕೋರ್ಟ್ ಹಿರಿಯ ವಕೀಲ ಕೆ.ದಿವಾಕರ ಹೇಳಿದರು.
ಸಾಗರ ನಗರದ ಗಾಂಧಿ ಮೈದಾನದಲ್ಲಿ ಪರಿಣಿತಿ ಕಲಾಕೇಂದ್ರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿದ್ದ 7ನೇ ವರ್ಷದ ಪರಿಣಿತಿ ರಾಷ್ಟ್ರೀಯ  ನೃತ್ಯ ಸಂಗೀತೋತ್ಸವ 2022 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸುತ್ತಿರುವ ದೇಶದ ಪ್ರಮುಖ ಕಲಾಕೇಂದ್ರಗಳಲ್ಲಿ ಸಾಗರದ ಪರಿಣಿತಿ ಕಲಾಕೇಂದ್ರವು ಪ್ರಮುಖವಾಗಿದ್ದು, ಸಂಗೀತ ಮತ್ತು ನೃತ್ಯ ಕ್ಷೇತ್ರಕ್ಕೆ ಈ ಕಲಾಕೇಂದ್ರದ ಕೊಡುಗೆ ಅಪಾರ ಎಂದು ತಿಳಿಸಿದರು.
ರಾಷ್ಟಿçÃಯ ಮಟ್ಟದ ಪ್ರತಿಭಾವಂತ ಕಲಾವಿದರನ್ನು ಸಾಗರಕ್ಕೆ ಕರೆಯಿಸಿ ಪ್ರತಿಭಾ ಪ್ರದರ್ಶನಕ್ಕೆ ಆಯೋಜಿಸುವ ಮೂಲಕ ವೈವಿಧ್ಯ ನೃತ್ಯ ಪ್ರಕಾರಗಳನ್ನು ಸಾಗರದ ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿರುವ ಕಾರ್ಯ ಶ್ಲಾಘನೀಯ. ಇಂತಹ ವೇದಿಕೆಗಳಿಂದ ಯುವ ಕಲಾವಿದರಿಗೆ ಉತ್ತಮ ಅವಕಾಶ ಸಿಗುವ ಜತೆಯಲ್ಲಿ ಪ್ರತಿಭೆ ಪ್ರದರ್ಶಿಸಲು ಅನುಕೂಲವಾಗುತ್ತದೆ ಎಂದರು.
ವಿದ್ವಾನ್ ಎಂ.ಗೋಪಾಲ್ ಮಾತನಾಡಿ, ಸಾಗರದಲ್ಲಿ ಪ್ರತಿ ವರ್ಷ  ರಾಷ್ಟ್ರೀಯ ನೃತ್ಯ ಸಂಗೀತೋತ್ಸವ ಆಯೋಜಿಸಿಕೊಂಡು ಬರುತ್ತಿದ್ದು, ಏಳು ವರ್ಷಗಳಿಂದ ನಿರಂತರವಾಗಿ ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲಾಗುತ್ತಿದೆ. ಯುವ ಪ್ರತಿಭೆಗಳಿಗೆ ಪ್ರದರ್ಶನಕ್ಕೆ ಅವಕಾಶ ನೀಡುವ ಜತೆಯಲ್ಲಿ  ರಾಷ್ಟ್ರೀಯ ಕಲಾವಿದರೊಂದಿಗೆ ಕಲಿಕೆಗೆ ಸಾಧ್ಯವಾಗುವ ರೀತಿಯಲ್ಲಿ ಉತ್ಸವ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ರಾಷ್ಟಿçÃಯ ಉತ್ಸವಗಳು ದೊಡ್ಡ ದೊಡ್ಡ ನಗರಗಳಲ್ಲಿ ನಡೆದರೆ ಬೆಳೆಯುವ ಕಲಾವಿದರಿಗೆ ಅವಕಾಶ ಸಿಗುವುದಿಲ್ಲ. ಆದ್ದರಿಂದ ಸರ್ಕಾರ ತಾಲೂಕು ಕೇಂದ್ರಗಳಲ್ಲಿಯು ರಾಷ್ಟ್ರೀಯ  ಉತ್ಸವ ನಡೆಸಲು ಪ್ರೋತ್ಸಾಹಿಸುತ್ತಿದೆ. ವಿವಿಧ ರಾಜ್ಯಗಳ ಸಂಗೀತ ಮತ್ತು ನೃತ್ಯವನ್ನು ನೋಡುವಂತಹ, ಪರಸ್ಪರ ಸಂವಹನ ಮಾಡುವಂತಹ ಅವಕಾಶ ಒದಗಿಸಲು  ರಾಷ್ಟ್ರೀಯ ಉತ್ಸವ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ಕೆ.ಸಿದ್ದಪ್ಪ ಅವರಿಗೆ ಪರಿಣಿತಿ ಕಲಾಕೇಂದ್ರದ ವತಿಯಿಂದ ಕಲಾಪೋಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಶಕಗಳ ಕಲಾಸೇವೆಯನ್ನು ಪರಿಗಣಿಸಿ ಬೆಂಗಳೂರಿನ ಸಂಚಿತಾ ಲಹೋಟಿ ಅವರಿಗೆ  ರಾಷ್ಟ್ರೀಯ ಕಲಾವಿದೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಬೆಂಗಳೂರಿನ ನಿಧಾಗ್ ಕರುನಾಡು ಬಿ.ಎಂ., ಸಂಚಿತಾ ಲಹೋಟಿ, ಕಶ್ಮೀರಾ ತ್ರಿವೇದಿ, ವಿನೋದ್ ಕೃಷ್ಣ ಶರ್ಮ ಅವರ ನಾಟ್ಯತಂಡಗಳು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ನೃತ್ಯ ಪ್ರಕಾರಗಳು ಎಲ್ಲ ಪ್ರೇಕ್ಷಕರ ಗಮನ ಸೆಳೆದವು. ಚೌಕಬಾರ ಸಿನಿಮಾದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.
ಪರಿಣಿತಿ ಕಲಾಕೇಂದ್ರದ ಗೌರವಾಧ್ಯಕ್ಷೆ ವೀಣಾ ಬೆಳೆಯೂರು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಟಿ.ವಿ.ಪಾಂಡುರಂಗ, ಸಾಗರ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ನಗರಸಭೆ ಸದಸ್ಯ ಗಣೇಶ್ ಪ್ರಸಾದ್, ಧಾರವಾಹಿ ಕಲಾವಿದರಾದ ವಿಕ್ರಂ ಸೂರಿ, ನಮಿತಾರಾವ್, ಉದಯಕುಮಾರ್ ಕುಂಸಿ, ಪವನ್, ವಿಶ್ವಾಸ್, ಶೋಭಾ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.