ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಮಹೋತ್ಸವ ಮಾ. 22 ರಿಂದ ಆರಂಭ: ದೇವಸ್ಥಾನದ ಮುಂದೆ ಧ್ವನಿವರ್ಧಕ ಾರ
ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಮಹೋತ್ಸವ ಮಾ. 22 ರಿಂದ ಆರಂಭವಾಗಲಿದ್ದು, ಈ ಹಿನ್ನಲೆಯಲ್ಲಿ ಇಂದು ಸಾಂಪ್ರದಾಯಿಕವಾಗಿ ದೇವಸ್ಥಾನದ ಮುಂದೆ ಸಾರ ಹಾಕಲಾಯಿತು.
ಮಾರಿಹಬ್ಬದ ಸಾರ ಹಾಕುವುದು ಅಧಿಕೃತವಾಗಿ ಡಂಗುರ ಸಾರುವುದು ಎಂದು ಅರ್ಥ. ಸಾರ ಹಾಕುವ ಮೂಲಕ ಜಾತ್ರೆ ನಡೆಸುವ ಕುರಿತಂತೆ ಆಟೋಗಳಲ್ಲಿ ಧ್ವನಿವರ್ಧಕಗಳ ಮೂಲಕ ಹಾಗೂ ತಮಟೆ ಬಾರಿಸುವ ಮೂಲಕ ಸಾರ ಹಾಕಲಾಯಿತು.
ಈ ವೇಳೆ ಬೇರೆ ಊರಿನವರು ಶಿವಮೊಗ್ಗಕ್ಕೆ ಬಂದವರು ಜಾತ್ರೆ ಮುಗಿಸಿಕೊಂಡು ಹೋಗಬೇಕು ಎನ್ನುವುದು ಸಾರ ಹಾಕುವುದರ ಉದ್ದೇಶವಾಗಿದೆ. ಮಾರಿಕಾಂಬ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಇಂದು ದೇವಾಲಯದಲ್ಲಿ ಮಾರಿ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಸಾರ್ ಹಾಕಲಾಯಿತು. ಡಂಗುರ ಬಾರಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು.
ಮಾ. 22 ರಿಂದ 26 ರವರೆಗೆ ಜಾತ್ರೆ ನಡೆಯುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ದೇವಿಯ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ.
Leave a Comment