ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರಾದ ಎಂ.ಬಿ. ಚನ್ನವೀರಪ್ಪನವರಿಂದ ಮಾಹಿತಿ:-
ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕ್ ಶಿವಮೊಗ್ಗ ತಾಲ್ಲೂಕಿನಲ್ಲಿ ಒಟ್ಟು 8 ಶಾಖೆಗಳಿದ್ದು, (ಪ್ರಧಾನ ಶಾಖೆ, ಎ.ಪಿ.ಎಂ.ಸಿ. ಶಾಖೆ, ಗೋಪಾಳ ಶಾಖೆ, ವಿನೋಬನಗರ ಶಾಖೆ, ಕೆ.ಎಂ.ಎಫ್. ಶಾಖೆ, ಬಿ.ಹೆಚ್. ರಸ್ತೆ ಶಾಖೆ, ವಿದ್ಯಾನಗರ ಶಾಖೆ ಹಾಗೂ ನಗರ ಶಾಖೆ) ರೈತರಿಗೆ ಹಾಗೂ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಾ ಬರುತ್ತಿದೆ.
· ಶಿವಮೊಗ್ಗ ತಾಲ್ಲೂಕಿನಲ್ಲಿ ಒಟ್ಟು 25 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ 10108 ರೈತರಿಗೆ ರೂ.139.50 ಕೋಟಿ ಕೃಷಿ ಬೆಳೆ ಸಾಲ ವಿತರಿಸಲಾಗಿದೆ ಈ ಪೈಕಿ 787 ಹೊಸಬರಿಗೆ ರೂ.9.25 ಕೋಟಿ ಹಾಗೂ ಹೆಚ್ಚುವರಿ ರೂ.16.22 ಕೋಟಿ ಬೆಳೆ ಸಾಲ ನೀಡಲಾಗಿದೆ.
· ಪ್ರಸಕ್ತ ಸಾಲಿನವರೆಗೆ ಶಿವಮೊಗ್ಗ ತಾಲ್ಲೂಕಿನಿಂದ ಮಧ್ಯಮಾವಧಿ ಕೃಷಿ ಸಾಲ ಒಟ್ಟು 36 ರೈತರಿಗೆ ರೂ.2.90 ಕೋಟಿ ನೀಡಲಾಗಿರುತ್ತದೆ.
· ಜನವರಿ-2022ರ ಅಂತ್ಯಕ್ಕೆ ಶಿವಮೊಗ್ಗ ತಾಲ್ಲೂಕಿನಲ್ಲಿ ಒಟ್ಟು ರೂ.335.42 ಕೋಟಿ ಠೇವಣಿ ಸಂಗ್ರಹಣೆಯಾಗಿರುತ್ತದೆ.
· ಶಿವಮೊಗ್ಗ ತಾಲ್ಲೂಕಿನಿಂದ 2021-22ನೇ ಸಾಲಿಗೆ ಜನವರಿ-2022ರ ಅಂತ್ಯಕ್ಕೆ ರೂ.4.67 ಕೋಟಿ ಲಾಭ ಗಳಿಸಿರುತ್ತದೆ.
· ಶಾಖೆಯ ಸಾಲ ವಸೂಲಾತಿ ಪ್ರಮಾಣ ಕೃಷಿ ಸಾಲ ಶೇ.96.00 ಮತ್ತು ಕೃಷಿಯೇತರ ಸಾಲ ಶೇ.97.00 ರಷ್ಟಿರುತ್ತದೆ.
· ತಾಲ್ಲೂಕಿನಲ್ಲಿ ಒಟ್ಟು 1611 ಸ್ವಸಹಾಯ ಗುಂಪುಗಳಿದ್ದು, ಈ ಪೈಕಿ 1511 ಮಹಿಳಾ ಗುಂಪುಗಳಾಗಿದ್ದು, 100 ಪುರುಷ ಸ್ವಸಹಾಯ ಸಂಘಗಳಾಗಿರುತ್ತದೆ.
· ತಾಲ್ಲೂಕಿನ ಶಾಖೆಗಳ ಮೂಲಕ 433 ಮಹಿಳಾ ಸ್ವಸಹಾಯ ಸಂಘಗಳಿಗೆ ರೂ.11.26 ಕೋಟಿ ಹಾಗೂ 57 ಪುರುಷ ಸ್ವಸಹಾಯ ಸಂಘಗಳಿಗೆ ರೂ.1.39 ಕೋಟಿ ಸಾಲ ನೀಡಿದ್ದು, ಒಟ್ಟಾರೆ 490 ಸ್ವಸಹಾಯ ಗುಂಪುಗಳಿಂದ ರೂ.12.64 ಕೋಟಿ ಸಾಲ ನೀಡಲಾಗಿರುತ್ತದೆ. ವಸೂಲಾತಿ ಪ್ರಮಾಣ ಶೇ.97 ರಷ್ಟಿರುತ್ತದೆ.
· ರಾಜ್ಯ ಸರ್ಕಾರದ ಕಾಯಕ ಯೋಜನೆಯಡಿ 9 ಸಂಘಗಳಿಗೆ ರೂ.36.90 ಲಕ್ಷಗಳ ಸಾಲ ನೀಡಲಾಗಿರುತ್ತದೆ. ವಸೂಲಾತಿ ಪ್ರಮಾಣ ಶೇ.100 ರಷ್ಟಿರುತ್ತದೆ.
· ಶಿವಮೊಗ್ಗ ತಾಲ್ಲೂಕಿನ ಶಾಖೆಗಳ ಮೂಲಕ ವಾಹನ ಖರೀದಿ, ವೇತನಾಧಾರ, ಗೃಹ ನಿರ್ಮಾಣ, ಕಟ್ಟಡ/ ನಿವೇಶನ ಅಡಮಾನ, ಬಂಗಾರದ ಅಡವು, ಸಂಬಳಾಧಾರ ಸಾಲ, ಓವರ್ ಡ್ರಾಫ್ಟ್, ವೇರ್ ಹೌಸ್ ರಶೀದಿ ಸಾಲ ಹಾಗೂ ಸಿ.ಸಿ.ಎಲ್. ಸಾಲ ಮುಂತಾದ ಕೃಷಿಯೇತರ ಸಾಲಗಳನ್ನು ನೀಡುತ್ತಿದ್ದು, 4194 ಸಾಲಗಾರರಿಗೆ ರೂ.219.60 ಕೋಟಿ ಸಾಲ ನೀಡಲಾಗಿದೆ.
· ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಹು ಸೇವಾ ಕೇಂದ್ರಗಳನ್ನಾಗಿ ಮಾರ್ಪಡಿಸುವ ನಬಾರ್ಡ್ ಯೋಜನೆಯಂತೆ (PACS as MSC) ಶಿವಮೊಗ್ಗ ತಾಲ್ಲೂಕಿನ 3 ಸಂಘಗಳಿಂದ ಒಟ್ಟು ರೂ.2.68 ಕೋಟಿ ಪ್ರಸ್ತಾವನೆ ಸಲ್ಲಿಸಿ ನಬಾರ್ಡ್ ನಿಂದ ಮಂಜೂರಾಗಿರುತ್ತದೆ.
· ಶಿವಮೊಗ್ಗ ತಾಲ್ಲೂಕಿನ ಶಾಖೆಗಳ ಮೂಲಕ ಕೇಂದ್ರ ಸರ್ಕಾರದ ಯೋಜನೆಯಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಶೂನ್ಯ ಬಡ್ಡಿದರದಲ್ಲಿ ಹೈನುಗಾರಿಕೆ ಉದ್ದೇಶಕ್ಕಾಗಿ 26 ಸದಸ್ಯರಿಗೆ ರೂ.4.39 ಲಕ್ಷ ಕೆ.ಸಿ.ಸಿ. ಸಾಲವನ್ನು ನೀಡಲಾಗಿರುತ್ತದೆ.
· ವಿಶೇಷ ವಾಹನ ಸಾಲದ ಯೋಜನೆಯಡಿ 51 ರೈತ ಸದಸ್ಯರಿಗೆ ರೂ.4.36 ಕೋಟಿ ಸಾಲ ಹಂಚಿಕೆ ಮಾಡಲಾಗಿದ್ದು, ವಸೂಲಾತಿ ಪ್ರಮಾಣ ಶೇ.99 ರಷ್ಟಿರುತ್ತದೆ.

Leave a Comment