ಶಿವಮೊಗ್ಗದಲ್ಲಿ ಗುಪ್ತಚರ ಇಲಾಖೆ ವಿಫಲ: ಚಕ್ರವರ್ತಿ ಸೂಲಿಬೆಲೆ

ಶಿವಮೊಗ್ಗ: ಶಿವಮೊಗ್ಗದಲ್ಲಿ ಗುಪ್ತಚರ ಇಲಾಖೆಯಿಂದ ಮಾಹಿತಿ ಸಂಗ್ರಹಿಸುವಲ್ಲಿ ವಿಫಲವಾಗಿದೆ ಎಂದು ಯುವ ಬ್ರಿಗೇಡ್ ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.
ಇಂದು ಮೃತ ಹರ್ಷನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತರ ಹಲ್ಲೆ ಕೊಲೆಯಾಗಿದೆ. ಕೊಲೆಯ ಹಿಂದೆ ಸರ್ಕಾರ ಹಾಗೂ ಗುಪ್ತಚರ ಇಲಾಖೆಯ ವಿಫಲವಾಗಿದೆ ಎಂದರು.
ಶಿವಮೊಗ್ಗ ಯಾವತ್ರು ಶಾಂತವಾಗಿಲ್ಲ. ಮುಸ್ಲಿಂ ಸಂಘಟನೆಗಳು ಯಾವಾಗಲೂ ಆಕ್ಟಿವ್ ಆಗಿರುವ ಜಿಲ್ಲೆ ಶಿವಮೊಗ್ಗ ಸರ್ಕಾರ ಕಣ್ಣು ಹೊರೆಸುವ ಕೆಲಸ ಮಾಡುತ್ತಿದೆ. ಈ ಹಿಂದೆ ಇರುವ ವ್ಯವಸ್ಥೆಯನ್ನ ಬೇರು ಸಮೇತ ಕಿತ್ತಾಕಬೇಕಿದೆ. ಮೂರು ಜನರ ಬಂಧನವಾಗಿದೆ, ಇದರ ಹಿಂದೆ ಇರುವವರನ್ನ ಮಟ್ಟ ಮಾಡಬೇಕಿದೆ. ಇದು ಹೋಮ್ ಮಿನಿಸ್ಟರ್ ತವರು ಜಿಲ್ಲೆ ಇಲ್ಲಿ ಕೋಮುಗಲಭೆ ನಡೆದಿರುವುದು. ಅದರಲ್ಲಿ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ಆಗಿರುವುದು ದುರಂತವೆಂದರು.
ಸರ್ಕಾರದಲ್ಲಿ ನಾನು ಕೇಳಿಕೊಳ್ಳುತ್ತೇನೆ, ಹಿಂದೂಗಳ ರಕ್ಷಣೆ ನೀವೇ ಮಾಡುತ್ತೀರೋ, ನಾವೇ ಮಾಡಿಕೊಳ್ಳಬೇಕಾ ಹೇಳಿ ಎಂದ ಸೂಲಿಬೆಲೆ ಅಕ್ಟರ್, ಬಾಬರ್ ನ ಕಾಲಕ್ಕೆ ನಾವು ತೆರಳುತ್ತಿದ್ದೇವೋ ಎಂಬ ಅನುಮಾನ ಶುರುವಾಗಿದೆ. ಸರ್ಕಾರದ ನಿರ್ವೀಯ್ರತೆ ಬಹಳಷ್ಟು ಇದೆ ಎಂದರು.
ಗಾಜನೂರಿನಲ್ಲಿ ವಿಶ್ವನಾಥ್ ಎಂಬ ಹಿಂದೂ ಯುವಕನ ಕೊಲೆಯಾಯ್ತು, ಗಣೇಶನ ಗಲಾಟೆಗಳಲ್ಲೂ ಹಿಂದೂ ಯುವಕರ ಕೊಲೆಯಾಗಿದೆ. ಈ ಘಟನೆಗಳ ಹಿಂದೆಲ್ಲಾ ಪಿಎಫ್ಐ ಸಂಘಟನೆ ಕೈವಾಡವಿದೆ. ಹೀಗಿದ್ದರೂ, ಸರ್ಕಾರಗಳು ಹಿಂದೂಗಳಿಗೆ ರಕ್ಷಣೆ ನೀಡಿಲ್ಲ, ನೀಡುತ್ತಿಲ್ಲ. ಹರ್ಷನ ಕೊಲೆಯ ಹಿಂದೆ ಸರ್ಕಾರ ಹಾಗೂ ಗುಪ್ತಚರ ಇಲಾಖೆ ಸಂಪೂರ್ಣ ವಿಫಲತೆ ಎದ್ದು ಕಾಣುತ್ತಿದೆ. ಹಿಜಾದಿ ಭೂತ ಮುಸ್ಲಿಂ ಯುವಕರನ್ನು ಕಾಡುತ್ತಿದೆ. ಇದು ತುಂಬಾ ಅಪಾಯಕಾರಿ ಬೆಳವಣಿಗೆ ಯುವಕರಲ್ಲಿರುವ ರ್ಯಾಡಿಕಲ್ ಮೈಂಡ್ ನಿಂದ ಹೊರತರಬೇಕಾಗಿದೆ. ಕೊಲೆಗೆ ಸಂಬಂಧಿಸಿದಂತೆ ಕೆಲವರನ್ನು ಬಂಧಿಸಿದರೆ ಸಾಲದು, ನಿಷ್ಪಕ್ಷ ತನಿಖೆಯಾಗಿ ಇದರ ಹಿಂದೆ ಇರುವ ಸಂಘಟನೆಗಳನ್ನು ಬಯಲಿಗೆಳೆಯಬೇಕು ಎಂದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.