ಶಿವಮೊಗ್ಗದಲ್ಲಿ ಹರ್ಷ ಹತ್ಯೆಯ ನಂತರ ನಡೆದ ದಾಂಧಲೆ, ಸರ್ಕಾರಿ ಪ್ರಾಯೋಜಿತ ಘಟನೆ ಎಂ:ಜಾಯಿಂಟ್ ಆ್ಯಕ್ಷನ್ ಕಮಿಟಿಯ ವಕ್ತಾರ ಷಹರಾಜ್ ಸಿದ್ದಿಕ್
ಶಿವಮೊಗ್ಗ: ಶಿವಮೊಗ್ಗದಲ್ಲಿ ಹರ್ಷ ಹತ್ಯೆಯ ನಂತರ ನಡೆದ ಎಲ್ಲಾ ದಾಂಧಲೆ,
ಆಸ್ತಿಪಾಸ್ತಿ ನಷ್ಟಗಳು ಉದ್ದೇಶಪೂರ್ವಕವಾಗಿಯೇ ನಡೆದಿದ್ದು, ಇದೊಂದು ಸರ್ಕಾರಿ
ಪ್ರಾಯೋಜಿತ ಘಟನೆ ಎಂದು ಜಾಯಿಂಟ್ ಆ್ಯಕ್ಷನ್ ಕಮಿಟಿಯ (ಮುಸ್ಲಿಂ ಸಂಘಟನೆಗಳ ಒಕ್ಕೂಟ)
ವಕ್ತಾರ ಷಹರಾಜ್ ಸಿದ್ದಿಕ್ ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆದ ಹರ್ಷ ಹತ್ಯೆಯ ಘಟನೆ
ಖಂಡನೀಯವಾದುದು. ಅವರ ಕುಟುಂಬಕ್ಕೆ ನಾವು ಸಾಂತ್ವನ ಹೇಳುತ್ತೇವೆ. ಮತ್ತು
ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸುತ್ತೇವೆ ಎಂದರು.
ಆದರೆ, ಹರ್ಷ ಹತ್ಯೆಯ ನಂತರ ನಡೆದ ಘಟನೆಗಳು ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮದಂತೆ
ಇದೆ. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕೂಡ ಹರ್ಷ ಶವದ ಮೆರವಣಿಗೆಗೆ ಅವಕಾಶ ನೀಡಿದ್ದು
ಏಕೆ? ಮತ್ತು ಸಚಿವ ಕೆ.ಎಸ್. ಈಶ್ವರಪ್ಪ ಅವರು ಇನ್ನೂ ಯಾವುದೇ ಎಫ್ ಐಆರ್
ದಾಖಲಾಗದಿದ್ದರೂ ಕೂಡ ಪ್ರಚೋದನಾಕಾರಿ ಹೇಳಿಕೆ ನೀಡಿದ್ದೇಕೆ? ಮತ್ತು ಮೆರವಣಿಗೆಯಲ್ಲಿ
ಭಾಗವಹಿಸಿದ್ದೇಕೆ? ಇದರಿಂದಲೇ ಪ್ರಚೋದನೆ ಉಂಟಾಗಿ ಅನೇಕ ಕಿಡಿಗೇಡಿಗಳು ಆಸ್ತಿಪಾಸ್ತಿ
ನಷ್ಟ ಉಂಟು ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಿ ಮಾರಣಾಂತಿಕ ಹಲ್ಲೆ ಕೂಡ ನಡೆಸಿದ್ದಾರೆ.
ಪೊಲೀಸರು ಮತ್ತು ಸಚಿವ ಈಶ್ವರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಎದುರಿನಲ್ಲಿಯೇ
ಈ ಘಟನೆ ನಡೆದಿದೆ. ಇವರ ವಿರುದ್ಧ ಕೇಸು ದಾಖಲಿಸಿಕೊಳ್ಳಬೇಕು ಎಂದರು.
ಘಟನೆಯಲ್ಲಿ ಅನೇಕ ಬಡವರು ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ.
ನಿರಾಶ್ರಿತರಾಗಿದ್ದಾರೆ. ಬದುಕು ಕಳೆದುಕೊಂಡಿದ್ದಾರೆ. ಇದಕ್ಕೆಲ್ಲಾ ಕಾರಣ ಸಚಿವ
ಈಶ್ವರಪ್ಪ ಮತ್ತು ಬಿಜೆಪಿ ಮುಖಂಡರುಗಳ ಹೇಳಿಕೆಯೇ ಆಗಿದೆ. ಇಡೀ ಆಡಳಿತ ಸರ್ಕಾರವೇ
ಒಂದು ಧರ್ಮದ ಪರವಾಗಿ ನಿಂತಿತು. ಘಟನೆಯಲ್ಲಿ ಅನೇಕ ಮುಸ್ಲಿಂ ಯುವಕರಿಗೆ ಹಾಗೂ
ಹಿರಿಯರಿಗೆ ಗಾಯಗಳಾಗಿವೆ. ತೊಂದರೆ ಉಂಟಾಗಿದೆ. ಯಾರೂ ಕೂಡ ಅವರಿಗೆ ಸಾಂತ್ವನ
ಹೇಳಲಿಲ್ಲ. ಇದೇ ಮನುಷ್ಯತ್ವವೇ ಎಂದು ಪ್ರಶ್ನೆ ಮಾಡಿದ ಅವರು. ಆಸ್ತಿ ಪಾಸ್ತಿ
ನಷ್ಟವನ್ನು ಈಶ್ವರಪ್ಪ ಸೇರಿದಂತೆ ಮೆರವಣಿಗೆಯಲ್ಲಿ ಭಾಗವಹಿಸಿದ ಬಿಜೆಪಿ ಮುಖಂಡರೇ
ತುಂಬಿಕೊಡಬೇಕು ಎಂದು ಆಗ್ರಹಿಸಿದರು.
ಇಡೀ ಘಟನೆಯಲ್ಲಿ ಪೊಲೀಸ್ ಇಲಾಖೆ ವಿಫಲತೆ ಕಂಡಿದೆ. ಕಿಡಿಗೇಡಿಗಳು ಮನೆಗೆ ನುಗ್ಗಿ
ದಾಂಧಲೆ ಮಾಡಿದರೂ ಕಲ್ಲು ತೂರಾಟ ನಡೆಸಿದರೂ ವಾಹನಗಳಿಗೆ ಬೆಂಕಿ ಹಚ್ಚಿದರೂ ಕೂಡ
ಸುಮ್ಮನಿದ್ದರು. ಸರ್ಕಾರದ ಒತ್ತಡಕ್ಕೆ ಮಣಿದಂತೆ ಕಂಡ ಇಡೀ ಪೊಲೀಸ್ ಇಲಾಖೆ ಶಾಂತಿ
ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲರಾದರು ಎಂದು ದೂರಿದರು.
ಹತ್ಯೆಗೆ ಸಂಬಂಧಿಸಿದಂತೆ ಇಡೀ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕು. ಅಥವಾ
ನ್ಯಾಯಾಂಗ ತನಿಖೆ ನಡೆಸಬೇಕು. ಇದಕ್ಕೆ ಪೂರಕವಾಗಿ ಘಟನಾವಳಿಗಳ ದೃಶ್ಯಗಳನ್ನು ನಗರದ
ಅನೇಕ ಮನೆಗಳ, ಅಂಗಡಿಗಳ ಮುಂದಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇವುಗಳನ್ನು
ನಾಶಮಾಡಬಾರದು. ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಇಡೀ ಘಟನೆಯಲ್ಲಿ ನಗರದ ಎಲ್ಲ ವರ್ಗದ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ಬದುಕುವುದೇ
ಕಷ್ಟವಾಗಿದೆ. ಇದು ಮತ್ತೆ ಮರುಳಿಸಬಾರದು. ಘಟನೆಗೆ ಕಾರಣರಾದ - ಪ್ರಚೋದನೆಗಿಳಿದ
ಈಶ್ವರಪ್ಪ ತಕ್ಷಣವೇ ರಾಜೀನಾಮೆ ಕೊಡಬೇಕು. ನಿಷೇಧಾಜ್ಞೆಯನ್ನು ಉಲ್ಲಂಘಿಸಿ, ಸಾವಿರಾರು
ಜನರನ್ನು ಸೇರಿಸಿ ಮೆರವಣಿಗೆಯಲ್ಲಿ ನೇತೃತ್ವ ವಹಿಸಿದ ಅವರ ವಿರುದ್ಧ ಕಾನೂನು ಕ್ರಮ
ಕೈಗೊಳ್ಳಬೇಕು. ಹರ್ಷನ ಸಾವಿನ ತಕ್ಷಣ ಮುಸ್ಲಿಂ ಗೂಂಡಾಗಳು ಎಂದು ಪ್ರಚೋದನಾಕಾರಿ
ಹೇಳಿಕೆ ನೀಡಿದ್ದನ್ನು ಆಧಾರವಾಗಿಟ್ಟುಕೊಂಡು ಅವರ ವಿರುದ್ಧ ಪ್ರಕರಣ
ದಾಖಲಿಸಿಕೊಳ್ಳಬೇಕು ಎಂದರು.
ಹರ್ಷನ ಹತ್ಯೆ ಪ್ರಕರಣ ಸಮಗ್ರ ತನಿಖೆಯಾಗಬೇಕು. ಅವರ ಕುಟುಂಬಕ್ಕೆ ಸೂಕ್ತ ಪರಿಹಾರ
ನೀಡಬೇಕು. ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟ ಮಾಡಿದವರ ವಿರುದ್ಧ ಸೂಕ್ತ ಪರಿಹಾರ
ನೀಡಬೇಕು. ಘಟನೆಯಲ್ಲಿ ಹಲವು ಮುಸ್ಲಿಂ ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಅವರಿಗೆ
ಪುನರ್ ವಸತಿ ಕಲ್ಪಿಸಬೇಕು. ಅಮಾಯಕರ ಬಂಧಿಸಬಾರದು. ನಗರದಲ್ಲಿ ಶಾಂತಿ ನೆಲೆಸಲು
ಎಲ್ಲರು ಸಹಕರಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಮಿಟಿಯ ಪ್ರಮುಖರಾದ ಕಲೀಂ ಪಾಶಾ, ಶಾಹುಲ್ ಹಮೀದ್, ಮುಫ್ತಿ
ಮುಜೀಬುಲ್ಲಾಸಾಬ್, ನಿಸಾರ್ ಅಹ್ಮದ್, ಜಫ್ರುಲ್ಲಾ ಸಫರ್ ಖಾನ್, ಮೊಹ್ಮದ್ ಆಸೀಫ್,
ಫಜ್ಲು ಅಹ್ಮಾನ್ ಸಾಬ್, ಅಬ್ದುಲ್ ಮುಜೀಬ್, ನಾಸೀರ್ ಆಹ್ಮದ್, ಮೊಹ್ಮದ್ ಆರೀಫ್

Leave a Comment