ಕೃಷಿ ಇಲಾಖೆಯಿಂದ ಸಹಾಯಧನ ಸೌಲಭ್ಯ ಪಡೆಯಲು ರೈತರಲ್ಲಿ ಮನವಿ

2021-22 ನೇ ಸಾಲಿನಲ್ಲಿ ಕೃಷಿ ಇಲಾಖೆ ವತಿಯಿಂದ ಈ ಕೆಳಕಂಡ ಯೋಜನೆಗಳಲ್ಲಿ ಸಹಾಯಧನದಡಿ ವಿವಿಧ ಘಟಕಗಳನ್ನು ರೈತರು ಪಡೆದುಕೊಳ್ಳಬಹುದಾಗಿರುತ್ತದೆ.
1) ಸೂಕ್ಷ್ಮ ನೀರಾವರಿ ಯೋಜನೆಯಡಿ ಪರಿಶಿಷ್ಟ ಜಾತಿಯ ರೈತರಿಗೆ ಶೇ. 90% ರ ಸಹಾಯಧನದಡಿ ಸ್ಪ್ರಿಂಕ್ಲರ್‌ ಸೆಟ್‌ ವಿತರಣೆ.
2) ಕೃಷಿ ಸಂಸ್ಕರಣೆ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ಶೇ. 50/% ರ ಸಹಾಯಧನದಡಿ ಹಿಟ್ಟಿನಗಿರಣಿ, ಪಲ್ವರೈಸರ್‌, ರಾಗಿ ಕ್ಲೀನಿಂಗ್‌ ಯಂತ್ರಗಳ ವಿತರಣೆ.
3) ಕೃಷಿ ಸಂಸ್ಕರಣೆ ಯೋಜನೆಯಡಿ ಸಾಮಾನ್ಯ ವರ್ಗದಡಿ ಶೇ. 75% ರ ಸಹಾಯಧನಲ್ಲಿ ಸಣ್ಣ ಯಂತ್ರ ಚಾಲಿತ ಎಣ್ಣೆ ಗಾಣಗಳ ವಿತರಣೆ
ಮೇಲ್ಕಂಡ ಘಟಕಗಳನ್ನು ಪಡೆಯಲು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಿ. ಕನಿಷ್ಟ 1 ಎಕರೆ ಜಮೀನು ಇರಲೇಬೇಕು, ಈ ಹಿಂದಿನ 7 ವರ್ಷದಲ್ಲಿ ಸದರಿ ಘಟಕವನ್ನು ಸಹಾಯಧನದಡಿ ಪಡೆದಿರಬಾರದು. ಪ.ಜಾ. ರೈತರು ಕಡ್ಡಾಯವಾಗಿ ಆರ್‌.ಡಿ. (RD) ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರವನ್ನು ಲಗತ್ತಿಸುವುದು. ಕೂಡಲೇ ಈ ಸೌಲಭ್ಯಗಳನ್ನು ರೈತರು ಪಡೆದುಕೊಳ್ಳಲು ಸಹಾಯಕ ಕೃಷಿ ನಿರ್ದೇಶಕರು, ಶಿಕಾರಿಪುರ ಇವರು ವಿನಂತಿಸಿರುತ್ತಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.