ಭದ್ರಾವತಿ:ಉದ್ಘಾಟನೆ ಮತ್ತು ವಿಶ್ವ ಮಾತೃಭಾಷೆ ದಿನಾಚರಣೆ ಕಾರ್ಯಕ್ರಮ
ಫೆ. ೨೭. ಭದ್ರಾವತಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳ ಉದ್ಘಾಟನೆ ಮತ್ತು ವಿಶ್ವ ಮಾತೃಭಾಷೆ ದಿನಾಚರಣೆ ಕಾರ್ಯಕ್ರಮ ಇಲ್ಲಿನ ರೋಟರಿ ಭವನದಲ್ಲಿ ಏರ್ಪಡಿಸಲಾಗಿತ್ತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ, ಬಿ. ಕೆ ಜಗನ್ನಾಥ, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಗೀತಾ ರಾಜ್ ಕುಮಾರ್, ಕಸಾಪ ತಾ. ಅಧ್ಯಕ್ಷರಾದ ಕೋಗಲೂರು ತಿಪ್ಪೇಸ್ವಾಮಿ, ಬಿ.ಇ.ಓ. ಸೋಮಶೇಖರಯ್ಯ, ಸಾಹಿತಿಗಳು, ಉಪನ್ಯಾಸಕರಾದ ಡಾ. ಮುತ್ತಯ್ಯ, ಕಸಾಪ ಮಾಜಿ ಅಧ್ಯಕ್ಷರಾದ ಕೆ. ಎಂ. ಸತೀಶ್, ಹೊಳೆಹೊನ್ನೂರು ಕಸಾಪ ಅಧ್ಯಕ್ಷರಾದ ಎಸ್. ಬಿ. ಸಿದ್ದಪ್ಪ, ತಾ. ಕಸಾಸಾಂ ವೇದಿಕೆ ಉಪಾಧ್ಯಕ್ಷ ವಿಠಲರಾವ್, ಶಿವಮೊಗ್ಗ ತಾ. ಕಸಾಪ ಅಧ್ಯಕ್ಷರಾದ ಶ್ರೀಮತಿ ಮಹಾದೇವಿ, ಜಿಲ್ಲಾ ಕಾರ್ಯದರ್ಶಿ ಎಂ. ಎಂ. ಸ್ವಾಮಿ ಉಪಸ್ಥಿತರಿದ್ದರು. ಕಾರ್ಯದರ್ಶಿಗಳಾದ ಎಚ್. ತಿಮ್ಮಪ್ಪ ನಿರೂಪಣೆ ಮಾಡಿದರು.
ಎಂ. ಇ. ಜಗದೀಶ್ ಸ್ವಾಗತಿಸಿದರು. ಎಂ. ಅನಿಲ್ ಕುಮಾರ್ ವಂದಿಸಿದರು. ಉರ್ದು ಶಾಲಾ ಮಕ್ಕಳ ಕಂಸಾಳೆ ನೃತ್ಯ, ಉಮರ್ ಕೋಯಾ, ಸಿದ್ದಪ್ಪ ಅವರ ಕವನ ವಾಚನ ಮಾಡಿದರು, ಶಿಕ್ಷಕಿ ತ್ರಿಪುರ ಅವರು ಡಾ. ರಾಜ್ ಚಿತ್ರದ ಹಾಡಿಗೆ ನೃತ್ಯ ಮಾಡಿದರು.
Leave a Comment