ಶಿವಮೊಗ್ಗ ಕೊಲೆ ಪ್ರಕರಣ: ಮೃತ ಹರ್ಷನ ಮೊಬೈಲ್ ಪತ್ತೆ! ಮಹತ್ವದ ಮಾಹಿತಿಗಳು ಪೊಲೀಸರಿಗೆ ಲಭ್ಯ!!
ಶವಮೊಗ್ಗ: ನಗರದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರಿಹಾನ್ ಷರೀಫ್, ಆಸಿಫ್ ಉಲ್ಲಾ ಖಾನ್, ನಿಹಾನ್, ಅಬ್ದುಲ್ ಅಫ್ನಾನ್ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಮಧ್ಯೆ, ಬಜರಂಗದಳ ಕಾರ್ಯಕರ್ತ, ಮೃತ ಹರ್ಷನ ಮೊಬೈಲ್ ಪತ್ತೆಯಾಗಿದೆ. ವಿಶೇಷ ತಂಡ ಹರ್ಷನ ಮೊಬೈಲ್ ಪತ್ತೆಹಚ್ಚಿದೆ. ಬಲ್ಲ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಹರ್ಷ ಕೊನೇ ಕ್ಷಣದಲ್ಲಿ ಮಾಡಿದ್ದ ಕರೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಹರ್ಷ ಹತ್ಯೆ ಪ್ರಕರಣದಲ್ಲಿ ಈವರೆಗೆ 8 ಆರೋಪಿಗಳ ಬಂಧನ ಮಾಡಲಾಗಿದೆ. ಮೊದಲು 6 ಆರೋಪಿಗಳು, ಈಗ ಇಬ್ಬರು ಆರೋಪಿಗಳು ಸೆರೆಯಾಗಿದ್ದಾರೆ. ಫರಾಜ್ ಪಾಷಾ (24), ಅಬ್ದುಲ್ ಖಾದರ್ ಜಿಲಾನ್ (25) ಸೆರೆ ಆಗಿದ್ದಾರೆ. ಈಗಾಗಲೇ 6 ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇಂದು ಬಂಧಿಸಿದ ಫರಾಜ್ ಮತ್ತು ಜಿಲಾನ್ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ನಾಳೆಯೊಳಗೆ ಆರೋಪಿಗಳನ್ನು ಪೊಲೀಸರು ಜಡ್ಜ್ ಮುಂದೆ ಹಾಜರುಪಡಿಸಲಿದ್ದಾರೆ. ಇಡೀ ದಿನ ಹರ್ಷ ಚಟುವಟಿಕೆ ಮೇಲೆ ನಿಗಾ ಇಟ್ಟಿದ್ದ ಫರಾಜ್, ಹತ್ಯೆ ನಡೆಸಲು ಸೆಕೆಂಡ್ ಹ್ಯಾಂಡ್ ಕಾರು ತಂದಿದ್ದ ಜಿಲಾನ್ ಎಂಬಾತನನ್ನು ಬಂಧಿಸಲಾಗಿದೆ.
*ಹರ್ಷ ಹತ್ಯೆಗೆ ಸ್ಕೆಚ್ ಹೇಗಿತ್ತು ನೋಡಿ..*
ನಗರದಲ್ಲಿ ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ವಿಚಾರಗಳು ಬುಧವಾರ ಇಂದು ಲಭ್ಯವಾಗಿದೆ. ಹರ್ಷ ಕೊಲೆ ನಡೆಯುವ ಕೆಲ ಗಂಟೆ ಮೊದಲು, ಹತ್ಯೆಗೆ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ. ಸೆಕೆಂಡ್ ಹ್ಯಾಂಡ್ ಸ್ವಿಫ್ಟ್ ಕಾರ್ನಲ್ಲಿ ಬಂದಿದ್ದ ಹಂತಕರು ಕೊಲೆಗೆ ಸ್ಕೆಚ್ ಹಾಕಿದ್ರು ಎಂದು ಮಾಹಿತಿ ಹೇಳಲಾಗುತ್ತಿದೆ.
ಕಾರಿನಲ್ಲಿದ್ದ 6 ಜನ ಒಟ್ಟಿಗೆ ಭಾರತಿ ಕಾಲೋನಿಗೆ ಎಂಟ್ರಿ ಕೊಟ್ಟಿದ್ದರು. ಕಾರು ಡೀಲರ್ ಬದ್ರುದ್ದೀನ್ ಮಗ ಜಿಲಾನ್ ಸಹ ಬಂದಿದ್ದ. ಪ್ರಮುಖ ಆರೋಪಿ ರಿಯಾನ್ ಬಾಲ್ಯ ಸ್ನೇಹಿತ ಜಿಲಾನ್ ಬಂದಿದ್ದ. ಹರ್ಷಗೂ ಜಿಲಾನ್ಗೂ ಯಾವುದೇ ರೀತಿ ವೈರತ್ವ ಇರಲಿಲ್ಲ. ಆದರೆ ರಿಯಾನ್ ಸಹಾಯಕ್ಕೆಂದು ಜಿಲಾನ್ ಬಂದಿದ್ದ ಎಂದು ತಿಳಿದುಬಂದಿದೆ.
ಹಿಂದೂ ಕಾರ್ಯಕರ್ತ ಹರ್ಷ ಕೊಲೆ ನಂತರ ಎಲ್ಲರ ಮೊಬೈಲ್ ಆಫ್ ಆಗಿತ್ತು. ಕಮ್ಯೂನಿಕೇಷನ್ಗಾಗಿ ಹಂತಕರ ಒರ್ವನ ಮೊಬೈಲ್ ಮಾತ್ರ ಆನ್ ಇತ್ತು. ಭದ್ರಾವತಿ ಮೂಲಕ ರೈಲಿನ ಮೂಲಕ ಹಂತಕರು ಪರಾರಿಯಾಗಿದ್ದರು. ರಾತ್ರಿ 10.30 ಗಂಟೆಯ ಶಿವಮೊಗ್ಗ ದಿಂದ ಬೆಂಗಳೂರು, ಶಿವಮೊಗ್ಗ ದಿಂದ ಮೈಸೂರುಗೆ ಹೊರಡುವ ರೈಲಿನ ಮೂಲಕ ಪರಾರಿ ಆಗಿದ್ದರು.
ಭದ್ರಾವತಿ ರೈಲ್ವೆ ಸ್ಟೆಷನ್ವರೆಗೂ ಕಾರಿನಲ್ಲಿಯೇ ಬಂದಿದ್ದ ಹಂತಕರು ಬಳಿಕ, ಮೊದಲನೇ ಫ್ಲ್ಯಾನ್ನಂತೆ ಎಲ್ಲರೂ ಒಂದೊಂದು ಕಡೆ ಪರಾರಿಯಾಗಿದ್ದರು ಆಗಿದ್ದರು ಎಂದು ಹೇಳಲಾಗುತ್ತಿದೆ.
Leave a Comment