ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ
ಶಿವಮೊಗ್ಗ, ಫೆಬ್ರವರಿ 25: ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣ ಇಲಾಖೆಯು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಶಿವಮೊಗ್ಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ರೋಟರಿ ಸಂಸ್ಥೆ ಶಿವಮೊಗ್ಗ ಪೂರ್ವ ಹಾಗೂ ಎಲ್ಲಾ ಸರ್ಕಾರೇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ದಿ: 27/02/2022 ರಿಂದ ಜಿಲ್ಲೆಯಾದ್ಯಂತ 0-5 ವರ್ಷದ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ತುಂಗಾನಗರದ ನಗರ ಪ್ರಸೂತಿ ಕೇಂದ್ರದಲ್ಲಿ ಫೆ.27 ರಂದು ಬೆಳಗ್ಗೆ 8.00ಕ್ಕೆ ಪಲ್ಸ್ ಪೋಲಿಯೋ ಲಸಿಕೆಯ ಚಾಲನಾ ಕಾರ್ಯಕ್ರಮ-2022ನ್ನು ಆಯೋಜಿಸಿದೆ.
ಫೆ. 27 ರಿಂದ ಮಾ.02 ರವರೆಗೆ ಭದ್ರಾವತಿ, ತೀರ್ಥಹಳ್ಳಿ, ಸಾಗರ, ಶಿಕಾರಿಪುರ, ಸೊರಬ, ಹೊಸನಗರ ತಾಲೂಕುಗಳು ಹಾಗೂ ಶಿವಮೊಗ್ಗ ಗ್ರಾಮಾಂತರ ಪ್ರದೇಶದಲ್ಲಿ ಲಸಿಕೆ ಹಾಕಲಾಗುವುದು.
ಶಿವಮೊಗ್ಗ ನಗರದಲ್ಲಿ ಸೆಕ್ಷನ್-144 ಜಾರಿಯಲ್ಲಿರುವುದರಿಂದ ಫೆ. 27ರ ಭಾನುವಾರದಂದ ನಗರದಲ್ಲಿರುವ ಎಲ್ಲಾ ನಗರ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಲಾಗುವುದು. ಪುನಃ ಮಾ.06 ರಿಂದ ನಗರದಲ್ಲಿರುವ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ನೀಡಿ ಮಾ. 07 ರಿಂದ 09 ರವರೆಗೆ ಮನೆಮನೆ ಭೇಟಿ ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ರಮದ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
-----------------
ಪೊಲೀಸ್ ಇಲಾಖಾ ನಿರುಪಯುಕ್ತ ವಾಹನಗಳ ಹರಾಜು
ಶಿವಮೊಗ್ಗ, ಫೆಬ್ರವರಿ 25 (ಕರ್ನಾಟಕ ವಾರ್ತೆ): ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ಜಿಲ್ಲೆಯ 06 ನಿರುಪಯುಕ್ತ ವಾಹನಗಳನ್ನು ಮಾರ್ಚ್ 02 ರ ಬೆಳಿಗ್ಗೆ 12 ಗಂಟೆಗೆ ಎಂಎಸ್‍ಟಿಸಿ ಆನ್‍ಲೈನ್ ತಂತ್ರಾಂಶದ ಮೂಲಕ ವಿಲೇವಾರಿ ಮಾಡಲಾಗುವುದು. ಬಿಡ್‍ನಲ್ಲಿ ಭಾಗವಹಿಸಲು ಇಚ್ಚಿಸುವವರು ಎಂಎಸ್‍ಟಿಸಿ ಆನ್‍ಲೈನ್ ತಂತ್ರಾಂಶದ ಮೂಲಕ ಬಿಡ್ ಮಾಡಬಹುದು. ಹೆಚ್ಚಿನ ಮಾಹಿತಿಗೆ ಸಶಸ್ತ್ರ ಮೀಸಲು ಕಚೇರಿ, ಡಿ.ಎ.ಆರ್, ಸಾಗರ ರಸ್ತೆ, ದೂರವಾಣಿ ಸಂಖ್ಯೆ : 08182-261412, 9480803306/ 9480803388 ಗಳನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------------
Leave a Comment