*ರಾಷ್ಟ್ರೀಯ ಕನ್ನಡ ಸಂಶೋಧನಾ ಕಮ್ಮಟಕ್ಕೆ ಪ್ರಬಂಧಗಳ ಆಹ್ವಾನ*

ಶಿವಮೊಗ್ಗ, ಫೆಬ್ರವರಿ 03 :ಕರ್ನಾಟಕ ಸಾಹಿತ್ಯ ಅಕಾಡೆಮಿಯು 2022 ರ ಮಾರ್ಚ್ ತಿಂಗಳಲ್ಲಿ ಐದು ದಿನಗಳ ಕಾಲ ‘ರಾಷ್ಟ್ರೀಯ ಕನ್ನಡ ಸಂಶೋಧನಾ ಕಮ್ಮಟ’ ವನ್ನು ನಡೆಸಲಿದ್ದು ಇಲ್ಲಿ ನಡೆಯುವ ಪರ್ಯಾಯ ಗೋಷ್ಟಿಗಳಿಗೆ ಶಿಬಿರಾರ್ಥಿಗಳು ಕಡ್ಡಾಯವಾಗಿ ಪ್ರಬಂಧ ಮಂಡಿಸಬೇಕು. ಪರ್ಯಾಯ ಗೋಷ್ಟಿಯಲ್ಲಿ ನೀಡಿರುವ ಪಠ್ಯಕ್ರಮದ ಆಧಾರದ ಮೇಲೆ ಶಿಬಿರಾರ್ಥಿಗಳು ತಾವು ಮಂಡಿಸುವ ಪ್ರಬಂಧಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು.
    ಪ್ರಬಂಧ ಸಲ್ಲಿಸಲು ಫೆ.22 ಕಡೆಯ ದಿನವಾಗಿದ್ದು, ಅಕಾಡೆಮಿಗೆ ರಿಜಿಸ್ಟರ್ಡ್ ಅಂಚೆ ಅಥವಾ ಕೊರಿಯರ್ ಮೂಲಕ ನಿಬಂಧನೆಗೊಳಪಟ್ಟು ಅರ್ಜಿಯೊಂದಿಗೆ ಪ್ರಬಂಧಗಳನ್ನು ಸಲ್ಲಿಸಬೇಕು. ಅರ್ಜಿ ನಮೂನೆ, ನಿಬಂಧನೆಗಳು ಹಾಗೂ ಪಠ್ಯಕ್ರಮ ಸೇರಿದಂತೆ ಹೆಚ್ಚಿನ ವಿವರಗಳಿಗಾಗಿ ಅಕಾಡೆಮಿಯ ವೆಬ್‍ಸೈಟ್ http://sahithyaacademy.karnataka.gov.in ನ್ನು ಸಂಪರ್ಕಿಸಬಹುದೆಂದು ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ.ಎನ್ ತಿಳಿಸಿದ್ದಾರೆ.
===

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.