ಶಿವಮೊಗ್ಗ: ಗೋಪಾಳದ ಚಂದನವನದಲ್ಲಿ ಪಾರ್ಕ್ ಸ್ವಚ್ಚಗೊಳಿಸಿ ಪರಿಸರ ಪ್ರೇಮ ಮೆರೆದ ಗೆಳೆಯರು
ಶಿವಮೊಗ್ಗ: ಗೋಪಾಳದ ಚಂದನವನದಲ್ಲಿ ಇಂದು ಬೆಳಗ್ಗೆ ವಾಕ್ ಮಾಡುವ ಗೆಳೆಯರೆಲ್ಲ ಸೇರಿ ಪಾರ್ಕ್ ಅನ್ನು ಸಂಪೂರ್ಣ ಸ್ವಚ್ಚಗೊಳಿಸಿ ಪರಿಸರ ಪ್ರೇಮ ಮೆರೆದರು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಶಿಕ್ಷಕ ಎಂ.ಎಸ್. ಆನಂದರೆಡ್ಡಿ, ಮಾನವೀಯತೆಯೇ ಮರೆಯಾಗುತ್ತಿರುವ ವಿಷಾದದ ಸನ್ನಿವೇಶ ನಮ್ಮ ಮುಂದಿದೆ. ನಾವು ಇರುವಷ್ಟು ದಿನ ಒಳ್ಳೆಯ ಕೆಲಸವನ್ನು ಮಾಡಿ ಗುರುತಿಸಿಕೊಳ್ಳಬೇಕು. ಸಮಾಜಮುಖಿಗಳಾಗಬೇಕು. ಅದರಲ್ಲಿ ಪರಿಸರ ಪ್ರೇಮ ಸಹ ಒಂದು ಎಂದರು.
ಇಲ್ಲಿ ಬರುವ ಎಲ್ಲರೂ ಉತ್ತಮ ಉದ್ಯೋಗದಲ್ಲಿದ್ದಾರೆ, ಆದರೂ, ಶ್ರಮದಾನದ ಮೂಲಕ ಕೆಲಸ ಮಾಡುತ್ತಾರೆ, ಗಿಡ ನೆಡುವುದು, ನೀರು ಹಾಕುವುದು, ಸ್ವಚ್ಚತಾ ಕಾರ್ಯ ಮಾಡುತ್ತಾರೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕಲಗೋಡು ರತ್ನಾಕರ್, ಕಾರ್ಯಪಾಲಕ ಇಂಜಿನಿಯರ್ ಎ. ಹಾಲೇಶಪ್ಪ, ನಿವೃತ್ತ ಶಿಕ್ಷಕರು ಮತ್ತು ಅಧಿಕಾರಿಗಳಾದ ಜಿ. ಕೆಂಚಪ್ಪ, ಶಿವಪ್ಪ, ನವಿಲಪ್ಪ, ಮಂಜುನಾಥ್, ಜಗದೀಶ್, ಸುಮನ್, ಪ್ರೇಮಾ, ಸುರಕ್ಷಾ, ಸುಜಾತ, ಚಿನ್ನು, ಕಿಶೋರ್ ಮುಂತಾದವರಿದ್ದರು.
Leave a Comment