ಶಿವಮೊಗ್ಗದಲ್ಲಿ ಯುವಕನ ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ

ಶಿವಮೊಗ್ಗ: ನಗರದಲ್ಲಿ  ಭಾನುವಾರ ಸಂಜೆ ಬಜರಂಗದಳದ ಕಾರ್ಯಕರ್ತನ ಹತ್ಯೆಯನ್ನು ಮಾಡಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಹೊಸನಗರದಲ್ಲಿ ಇಂದು ಹಿಂದೂಪರ ಸಂಘಟನೆಗಳು ಮತ್ತು,ಬಜರಂಗದಳದ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ಮನವಿ ನೀಡಲಾಯಿತು.

ಹಿಂದುಗಳ ಮೇಲೆ ದೌರ್ಜನ್ಯ ಎಸಗುತ್ತಿರುವ ಮತ್ತು ಹಿಜಾಬ್ ಘಟನೆಯಂತಹ ಕೃತ್ಯವನ್ನು ಪ್ರಚೋದಿಸುವಂತಹ ದೇಶದ್ರೋಹಿಗಳ ಮತ್ತು ಸಮಾಜದಲ್ಲಿ ಅಶಾಂತಿ ಕದಡುವಂತವಹರನ್ನು ವಿರೋಧ ಕಾನೂನು ಕ್ರಮ ಜರುಗಿಸುವಂತೆ ಈ ಸಂದರ್ಭದಲ್ಲಿ ಮನವಿ ಸಲ್ಲಿಸಲಾಯಿತು.

 ಪ್ರಮುಖರಾದ  ಹನಿಯಾ ರವಿ,ಶ್ರೀ ಉಮೇಶ್ ಕಂಚುಗಾರ್, ಎ ವಿ ಮಲ್ಲಿಕಾರ್ಜುನ್,  ಎನ್ ಆರ್ ದೇವಾನಂದ್, ಹೆಚ್ ಆರ್ ತೀರ್ಥೇಶ್, ಸುಧೀಂದ್ರ ಪಂಡಿತ್, ಸುಧೀಂದ್ರ ಕೋಟ್ಯಾನ್, ಶಿವಕುಮಾರ್ ಕೋಣೆಮನೆ, ಪುಟ್ಟ  ಸೇರಿದಂತೆ ಪ್ರಮುಖರಿದ್ದರು

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.