ನೋಂದಣಿ ಇಲಾಖೆಯ ಕಚೇರಿ ವೇಳೆ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೂ ಕರ್ತವ್ಯ ನಿರ್ವಹಿಸುವಂತೆ ಆಯುಕ್ತರ ಹೊಸ ಆದೇಶ

ಬೆಂಗಳೂರು :- ನೋಂದಣಿ ಮತ್ತು ಮುದ್ರಣ ಇಲಾಖೆಯ ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರ ಕಛೇರಿಯ ಜ್ಞಾಪನಾ ಪತ್ರ ಸಂಖ್ಯೆ RGN /614/2011-22 ದಿನಾಂಕ 25-02-2022 ರಂತೆ ಸಾರ್ವಜನಿಕ ಹಿತದೃಷ್ಟಿಯಿಂದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಚೇರಿಗಳ ವೇಳೆಯನ್ನೂ ಬೆಳಿಗ್ಗೆ 10 ಗಂಟೆಯಿಂದ 05:30 ರವರಿಗೆ ಕಾರ್ಯ ನಿರ್ವಹಿಸುತ್ತಿದ್ದರು.

ಈಗ ಹೊಸ ಆದೇಶದಂತೆ ಬೆಳಿಗ್ಗೆ 08:00 ರಿಂದ ರಾತ್ರಿ 08:00 ಗಂಟೆಯವರೆಗೂ ಕರ್ತವ್ಯ ನಿರ್ವಹಿಸುವಂತೆ ಆದೇಶದೊಂದಿಗೆ ತಿಂಗಳ ಎಲ್ಲಾ ಶನಿವಾರ ದಿನದಂದು ರಾಜ್ಯದ ಎಲ್ಲಾ ಉಪ ನೋಂದಣಿ ಕಚೇರಿಗಳು ಕರ್ತವ್ಯ ನಿರ್ವಹಿಸುವಂತೆ ನೋಂದಣಿ ಉಪ ಮಹಾ ಪರಿವೀಕ್ಷಕರು (ಆಡಳಿತ ಮತ್ತು ಕಾನೂನು ) ಬೆಂಗಳೂರು ಆದೇಶ ಹೊರಡಿಸಿರುತ್ತಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.