ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾ.1 ರಂದು ಮಹಾಶಿವರಾತ್ರಿ ಆಚರಣೆ

ಶಿವಮೊಗ್ಗ: ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ ವತಿಯಿಂದ ಮಾ.1 ರಂದು ಮಹಾಶಿವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುವುದು ಎಂದು ಟ್ರಸ್ಟ್ನ ಅಧ್ಯಕ್ಷ ಎಂ.ವಿ.ನಾಗೇಶ್ ಹೇಳಿದರು. 
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವರಾತ್ರಿ ಅಂಗವಾಗಿ ರುದ್ರಾಭಿಷೇಕ, ಭಜನೆ, ರಕ್ತದಾನ ಶಿಬಿರ, ಸನ್ಮಾನ ಕಾರ್ಯಕ್ರಮ ಆರ್ಥಿಕ ಸಂಕಷ್ಟದ ಯುವತಿಗೆ ಸಹಾಯಧನ ಸಂಗ್ರಹ, ಶಿವರಾತ್ರಿಯ ಮಹತ್ವ ಕುರಿತಂತೆ ಕಾರ್ಯಕ್ರಮಗಳು ಇದ್ದು, ಬೆಳ್ಳಗಿನಿಂದ ಸಂಜೆಯವರೆಗೆ ಅಬ್ಬಲಗೆರೆಯ ಈಶ್ವರವನದಲ್ಲಿ ನಡೆಯಲಿವೆ ಎಂದರು.
ಬೆಳಿಗ್ಗೆ 8 ಗಂಟೆಗೆ ರುದ್ರಾಭಿಷೇಕ 9 ಗಂಟೆಗೆ ಭಜನೆ, ನಂತರ 10 ಗಂಟೆಗೆ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ. ವೇದಿಕೆ ಕಾರ್ಯಕ್ರಮ 10 ಗಂಟೆಗೆ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಕೃಷಿ ಮತ್ತು ತೋಟಕಾರಿಕೆ ವಿವಿಯ ಡೀನ್ ಡಾ.ಜಗದೀಶ್, ಮೆಟ್ರೋ ಆಸ್ಪತ್ರೆಯ ಡಾ.ತೇಜಸ್ವಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಸುಮಾರು ೨೦೦ ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್ ಅವರನ್ನು ಸನ್ಮಾನಿಸಲಾಗುವುದು ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಕ್ತದಾನ ಮಾಡಬೇಕು ಎಂದು ಮನವಿ ಮಾಡಿದರು.
ಸಂಜೆಯ ವೇದಿಕೆಯ ಕಾರ್ಯಕ್ರಮದಲ್ಲಿ ಸತ್ಸಂಗ, ಸಾಮೂಹಿಕಗಾನ ಧ್ಯಾನ ಕಾರ್ಯಕ್ರಮವಿದ್ದು, ರವಿಶಂಕರ್ ಗುರುಜಿ ಅವರ ಶಿಷ್ಯಂದಿರು ಈ ಕಾರ್ಯಕ್ರಮ ನಡೆಸಿ ಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ಹೊಯ್ಸಳ ಡಯಾಲಿಸಿಸ್ ಸೆಂಟರ್ಮ ಸಂಸ್ಥಾನಪಕರಾದ ಎಂ.ಶಂಕರ್ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಉಪಸ್ಥಿತರಿರುವರು. ಪರಿಸರ ಚಿಂತಕ ವೃಷಾಂಕ್ ಭಟ್ ಉಪನ್ಯಾಸನ ನೀಡುವರು ಎಂದರು.
ಶಿವರಾತ್ರಿ ಆಚರಣೆ ಕೇವಲ ಆರಾಧನೆ ಅಲ್ಲ. ಪ್ರಕೃತಿಯ ಆರಾಧನೆ ಕೂಡ. ಶಿವನೆಂದರೆ ಪ್ರಕೃತಿಯೇ ಆಗಿದೆ. ಹಾಗಾಗಿ ಈಶ್ವರವನ ಟ್ರಸ್ಟ್ ಕಳೆದ ೫ವರ್ಷದಿಂದ ಶಿವನ ಆರಾಧನೆಯ ಜೊತೆಗೆ ಪ್ರಕೃತಿಯ ಆರಾಧನೆಯನ್ನು ಕೂಡ ಮಾಡುತ್ತಾ ಬಂದಿದೆ. ಇದರೊಂದಿಗೆ ವಿಶೇಷ ಕಾರ್ಯಕ್ರಮಗಳನ್ನು ಜೋಡಿಸಿ ಟ್ರಸ್ಟ್ ವತಿಯಿಂದ ಅಬ್ಬಲಗೆರೆ ಬಳಿ ಇರುವ ಈಶ್ವರವನದಲ್ಲಿ ಈ ಕಾರ್ಯಕ್ರಮಗಳು ನಡೆಯುತ್ತಿವೆ. ಶಿವನಿಗೆ ಜಲಾಭಿಷೇಕ ಜೊತಗೆ ಅಪಘಾತದಲ್ಲಿ ಅಂಗವೈಕಲ್ಯಕ್ಕೆ ತುತ್ತಾಗಿರುವ ಯುವತಿಗೆ ಧನ ಸಂಗ್ರಹ ಹಾಗೂ ನವ್ಯ ಶ್ರೀ ಸಭಾಂಗಣದಿಂದ ಕಾರ್ಯಕ್ರಮಕ್ಕೆ ಬರುವವರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಡಾ.ಶರತ್ ರಕ್ತದಾನದ ಮಹತ್ವದ ಬಗ್ಗೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಣೇಶ್ ಹೆಚ್.ಸಿ., ಜನಾರ್ಧನ ಪೈ, ನಾಗರಾಜ್ ಶೆಟ್ಟಿ, ಗೀತಾ ಪಟೀಲ್, ದಿನೇಶ್ ಶೇಟ್ ಇದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.