ಶಿವಮೊಗ್ಗದಲ್ಲಿ ಬಲವರ್ಧನೆಯಾಗುತ್ತಿರೋ ಎ.ಎ.ಪಿ -ಹಲವರು ಪಕ್ಷ ಸೇರ್ಪಡೆ:ಜಿಲ್ಲಾ ಸಂಚಾಲಕರಾದ ಮನೋಹರ್ ಗೌಡ ಹೇಳಿಕೆ

ಶಿವಮೊಗ್ಗ: ಶಿವಮೊಗ್ಗದಲ್ಲಿ ಬಲವರ್ಧನೆಯಾಗುತ್ತಿರೋ ಎ.ಎ.ಪಿ ಪಕ್ಷ ನೂರಾರು ಸಂಖ್ಯೆಯಲ್ಲಿ ಜನರು ಪಕ್ಷ ಸೇರ್ಪಡೆಯಾಗುತ್ತಿದ್ದಾರೆ.ಬರುವ ಕಾರ್ಯಕರ್ತರಿಗೆ ಪ್ರಮುಖ ಹುದ್ದೆಗಳನ್ನು ನೀಡಿ ಪಕ್ಷ ಮುನ್ನೆಡೆಸಲು ಸೂಚನೆ ನೀಡಲಾಗುತ್ತಿದೆ ಎಂದು ಜಿಲ್ಲಾ ಸಂಚಾಲಕರಾದ ಮನೋಹರ್ ಗೌಡ ಹೇಳಿದ್ದಾರೆ.

ಹೌದು ರಾಜ್ಯದ ಜನರು ಬಹುತೇಕ ಎಲ್ಲಾ ಪಕ್ಷಗಳ ಆಡಳಿತವನ್ನು ನೋಡಿದ್ದಾರೆ. ಆದರೆ ಯಾವುದೇ ಪಕ್ಷವು ಜನರ ಮೂಲಭೂತ ಅಗತ್ಯಗಳ ಕಡೆಗೆ ಗಮನ ನೀಡದೆ ಕೇವಲ ತಮ್ಮ-ತಮ್ಮ ಅಭಿವೃದ್ದಿಯನ್ನಮಾತ್ರ ಮಾಡಿಕೊಂಡಿದೆ ಅನ್ನೋದು ರಾಜ್ಯದ ಬಹುತೇಕ ಜನರ ಅಬಿಪ್ರಾಯವಾಗಿದ್ದು ಇಂಥ ಸಮಯದಲ್ಲಿ ದೆಹಲಿ ಅಭಿವೃದ್ದಿ ಮಾದರಿಯನ್ನು ಮುಂದಿಟ್ಟುಕೊಂಡು ಕರ್ನಾಟಕ್ಕೆ ಕಾಲಿಟ್ಟಿರೋ ಎ.ಎ.ಪಿ ಪಕ್ಷ ದಿನೆ-ದಿನೆ ಬಲಗೊಳ್ಳುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ಸಂಜೆ ಶಿವಮೊಗ್ಗ ನಗರದ ಗಾಂಧಿಬಜ಼ಾರ್‌ನಲ್ಲಿರೋ ಎ.ಎ.ಪಿ ಪಕ್ಷದ ಕಛೇರಿಯಲ್ಲಿ ನಡೆದ ಕಾರ್ಯಕರ್ತರ ಪದಗ್ರಹಣ ಕಾರ್ಯಕ್ರಮದಲ್ಲಿ ಸೇರಿದ ನೂರಾರು ಸಂಖ್ಯೆ ಜನರು ಸೇರಿದ್ದಾರೆ.

ನಿನ್ನೆ ಸಂಜೆ ನಡೆದ ಈ ಕಾರ್ಯಕ್ರಮದಲ್ಲಿ ಎ.ಎ.ಪಿ ಪಕ್ಷದ ಬೆಳವಣಿಗೆಯನ್ನು ಗುರಿಯಾಗಿಟ್ಟುಕೊಂಡು ಹಲವಾರು ಕಾರ್ಯಕರ್ತರಿಗೆ ಪದಗ್ರಹಣವನ್ನು ನೀಡಲಾಯಿತು. ಕಿರಣ್‌.ಕೆ ಇವರಿಗೆ ಜಿಲ್ಲಾ ಯುವಘಟಕದ ಜವಾಬ್ದಾರಿಯನ್ನು ನೀಡಿದ್ರೆ ಸುರೇಶ್‌ ಕೋಟೆಕಾರ್‌ರಿಗೆ ಶಿವಮೊಗ್ಗ ನಗರ ಉತ್ತರ ಬ್ಲಾಕ್‌ ಸಂಚಾಲಕರಾಗಿದ್ದಾರೆ. ಇನ್ನೂ ಲಕ್ಷ್ಮಿಶ(ಡಿ.ಜೆ.ಲಕ್ಕಿ) ಶಿವಮೊಗ್ಗ ನಗರ ಕಾರ್ಯದರ್ಶಿ ಜವಾಬ್ದಾರಿಯನ್ನ ನೀಡಲಾಗಿದೆ, ಅಮೃತ್‌.ಎಂ ಶಿವಮೊಗ್ಗ ನಗರ ಯುವಘಟಕದ ಸಂಚಾಲಕರ ಜವಾಬ್ದಾರಿ ನೀಡಲಾಗಿದ್ದು ಚೇತನ್‌ರಿಗೆ ನಗರ ಯುವ ಸಹ ಸಂಚಾಲಕರನ್ನಾಗಿ ನೇಮಿಸಲಾಗಿದೆ. ದನಂಜಯ್‌ ರಿಗೆ ಶಿವಮೊಗ್ಗ ನಗರ ದಕ್ಷಣ ಬಾಕ್‌ ಜವಾಬ್ದಾರಿ ನೀಡಲಾಗಿದೆ. ವಿಠ್ಠಲ್‌ ಶೇಟ್‌ ರಿಗೆ ಅಡ್ವಕೇಟ್‌ ಬಳಗದ ಸಂಚಾಲಕರಾಗಿ ನೇಮಿಸಲಾಗಿದ್ದು,ಶಶಿಧರ್ ಶಿವಮೊಗ್ಗ ಉತ್ತರ ಬ್ಲಾಕ್‌ ಕಾರ್ಯದರ್ಶಿ ಹಾಗೂ ವಿನಯ್‌ ಶಟ್ಟಿ ಶಿವಮೊಗ್ಗ ಜಿಲ್ಲಾ ಸಹಕಾರ್ಯದರ್ಶಿ ಹರೀಶ್‌ ಕೂಡ ಶಿವಮೊಗ್ಗ ಜಿಲ್ಲಾ ಸಂಘಟನಾ ಸಹಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಇದೇವೇಳೆ ಮಹಿಳೆಯರಿಗೆ ಹಲವು ಜವಾಬ್ದಾರಿಯನ್ನು ನೀಡಲಾಗಿದ್ದು ಕುಮಾರಿ ಸಾವಂತಿ ಇವರಿಗೆ ಮಹಿಳಾ ಘಟಕದ ಸಂಚಾಲಕರಾಗಿ ಹರ್ಷಿತ ರಾಣಿ ಮಹೇಂದ್ರಕರ್‌ ಇವರಿಗೆ ಶಿವಮೊಗ್ಗ ನಗರ ಮಹಿಳಾ ಪ್ರಧಾನ ಕಾರ್ಯದರ್ಶಿಯಾಗಿ ಇವರೊಂದಿಗೆ ಕುಮಾರಿ ಪೂಜಾರಿಗೆ ಶಿವಮೊಗ್ಗ ನಗರ ಮಹಿಳಾ ಸಹಸಂಚಾಲಕರನ್ನಾಗಿ ನೇಮಿಸಲಾಗಿದೆ. 

ಇಷ್ಟು ಮಾತ್ರವಲ್ಲದೇ ವಾರ್ಡ್‌ ಮಟ್ಟದಲ್ಲೂ ಜವಾಬ್ದಾರಿ ನೀಡಲಾಗಿದ್ದು ಅನ್ಸರ್‌ ಪಾಷಾರಿಗೆ ವಾದೇ ಹುದಾ ವಾರ್ಡಿನ ಜವಾಬ್ದಾರಿ ನೀಡಲಾಯಿ. ಒಟ್ಟಾರೆ ನಿನ್ನೆ ನಡೆದ ಎ.ಎ.ಪಿ ಪಕ್ಷದ ಕಾರ್ಯಕ್ರಮದಲ್ಲಿ ಪಕ್ಷದ ಬೆಳವಣೆಗೆ ದೃಷ್ಟಿಯಿಂದ ಜವಾಬ್ದಾರಿಯನ್ನ ವಹಿಸಿಕೊಂಡವರು, ಜಿಲ್ಲಾ ಸಂಘಟನಾ ಸಂಚಾಲಕರಾಗಿರೋ ಮನೋಹರ್‌ ಗೌಡರಿಗೆ ಪಕ್ಷವನ್ನು ಸದೃಡವಾಗಿ ಬೆಳೆಸುವುದಾಗಿ ಭರವಸೆಯನ್ನು ನೀಡಿದರು.

ಇಂದು ಸಂಜೆ ನಗರದ 35ನೇ ವಾರ್ಡಿನ ಅಧ್ಯಕ್ಷರಾದ ಅನ್ಸರ್ ಪಾಷ ಅವರ ನೇತೃತ್ವದಲ್ಲಿ  ಹೌದಾ ನಗರದ 15 ಹೆಚ್ಚುಯುವಕರು ಮತ್ತು ವಯಸ್ಕರು ಪಕ್ಷಕ್ಕೆ ಸೇರ್ಪಡೆಯಾದರು.
 ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಮನೋಹರ್ ಗೌಡ ರವರು ಪಕ್ಷದ ಉದ್ದೇಶಗಳನ್ನು ಮನವರಿಕೆ ಮಾಡಿಕೊಟ್ಟರು.
ಮುಖಂಡರಾದ ಸುರೇಶ್ ಕೋಟೆಕಾರ್ ಯುವ ಸಂಚಾಲಕರಾದ ಕಿರಣ್ ಕುಮಾರ್ ಹರೀಶ್ ಅರವಿಂದ್ ವಿನಯ್ ಶೆಟ್ಟಿ ಮತ್ತು ನವಲೇಶ ಪ್ರಶಾಂತ್ ಉತ್ಸವ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.