ಆಕಾಶ್ ಬೈಜು ಸಂಸ್ಥೆಯ ಸಹಯೋಗದಲ್ಲಿ ನೀಟ್ ಮತ್ತು ಜೆಇಇ ತರಬೇತಿ

ಶಿವಮೊಗ್ಗ: ಅರಬಿಂದೋ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಪ್ರಸಕ್ತ ವರ್ಷದಿಂದ ಆಕಾಶ್ ಬೈಜು ಸಂಸ್ಥೆಯ ಸಹಯೋಗದಲ್ಲಿ ನೀಟ್ ಮತ್ತು ಜೆಇಇ ತರಬೇತಿ ನೀಡಲಾಗುವುದು ಎಂದು ಜ್ಞಾನದೀಪ ಕಾಲೇಜಿನ ಪ್ರಾಚಾರ್ಯ ಡಾ.ಕೆ.ನಾಗರಾಜ್ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಷ್ಠಿತ ಆಕಾಶ್ ಬೈಜು ಸಂಸ್ಥೆಯು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವಲ್ಲಿ ದೇಶದಲ್ಲಿ ಮನ್ನಣೆ ಪಡೆದಿದೆ. ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಈಗ ಅತ್ಯುತ್ತಮ ಅವಕಾಶ ಇದಾಗಿದೆ. ವಿದ್ಯಾರ್ಥಿಗಳು ಪಿಯುಸಿ ನಂತರ ಮುಂದೇನು ಎಂಬ ಗೊಂದಲ ನಿವಾರಣೆಗೆ ಮುಂದಾಗಿದೆ. ಮಕ್ಕಳು ದೊಡ್ಡ ನಗರಗಳಿಗೆ ಹೋಗಿ ಲಕ್ಷಾಂತರ ರೂ. ಖರ್ಚು ಮಾಡಿ ನೀಟ್ ,ಜೆಇಇ ತರಬೇತಿಗೆ ಸೇರುತ್ತಾರೆ. ದೂರದ ಊರುಗಳಿಗೆ ಮಕ್ಕಳು ಹೋಗಿ ತರಬೇತಿ ಪಡೆಯುವುದು ಕಷ್ಟ ಎಂದರು.
ಬೆಂಗಳೂರು, ಮಂಗಳೂರು ಸೇರಿದಂತೆ ದೊಡ್ಡ ನಗರಗಳಿಗೆ ಹೋಗಿ ಮಕ್ಕಳು ದುಬಾರಿ ಹಣ ತೆತ್ತು ನಷ್ಟ ಅನುಭವಿಸದಂತೆ ನೋಡಿಕೊಳ್ಳುವ ಉದ್ದೇಶದದಿಂದ ಶಾಲೆ ಮಕ್ಕಳಿಗೆ ವಿನೂತನ ಅವಕಾಶ ನೀಡಲಾಗಿದೆ. ಆಕಾಶ್ ಬೈಜು ಸಂಸ್ಥೆಯ ನುರಿತ ಉಪನ್ಯಾಸಕರು ತರಬೇತಿ ನೀಡಲಿದ್ದಾರೆ. ಆನ್ ಲೈನ್ನಲ್ಲಿಯೂ ನೋಂದಣಿ ಮಾಡಿಕೊಂಡರೆ ಮಕ್ಕಳಿಗೆ ಯಥೇಚ್ಛ ಅವಕಾಶಗಳು ಸಿಗಲಿವೆ ಎಂದು ಹೇಳಿದರು.
ಸಂಸ್ಥೆ ಖಜಾಂಚಿ ಡಾ.ಕೆ.ಆರ್.ಶ್ರೀಧರ್ ಮಾತನಾಡಿ, ಪಿಯುಸಿ ನಂತರ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಅರಬಿಂದೊ ಸಂಸ್ಥೆ ಈ ಸುವರ್ಣ ಅವಕಾಶವನ್ನು ಮಕ್ಕಳಿಗೆ ನೀಡಡುತ್ತಿದೆ ಎಂದು ಹೇಳಿದರು.
ಬೈಜು ಸಂಸ್ಥೆಯ ಪ್ರತಿನಿಧಿ ಸತೀಶ್ ಅವರು ಮಕ್ಕಳಿಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆ ಅಧ್ಯಕ್ಷ ತಲವಾನೆ ಪ್ರಕಾಶ್ ಮಾತನಾಡಿ, ಮಲೆನಾಡಿನಲ್ಲಿ ಅಗತ್ಯವಿದ್ದ ಉತ್ಕೃಷ್ಟ ಗುಣಮಟ್ಟದ ವಿದ್ಯಾಸಂಸ್ಥೆಯನ್ನು ಮಾಡಿರುವ ತೃಪ್ತಿ ನಮಗಿದೆ. ಎಸ್ಎಸ್ಎಲ್ಸಿ ನಂತರ ಮಕ್ಕಳು ಬೇರೆ ಊರಿಗೆ ಹೋಗುವುದನ್ನು ತಪ್ಪಿಸಲು ಸಂಸ್ಥೆ ಮಾಡಿದ ಪ್ರಯತ್ನ ಯಶಸ್ವಿಯಾಗಿದೆ. ಈಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳನ್ನು ಅಣಿಗೊಳಿಸುವ ತರಬೇತಿ ಆಯೋಜಿಸುತ್ತಿರುವುದು ಮತ್ತೊಂದು ಮೈಲುಗಲ್ಲು ಎಂದು ಹೇಳಿದರು.
ಉಪಪ್ರಾಂಶುಪಾಲ ಜೋಸೆಫ್, ಎಸ್.ಎಂ., ರವಿಕುಮಾರ್ ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.