ತೋಟದ ಮನೆಯಲ್ಲಿ ದಂಧೆ! ಗಲಾಟೆ-ಕೇಸು,ಏನು ಅಂತಿರಾ? ನೋಡಿ...

ಶಿವಮೊಗ್ಗ; ಶಿವಮೊಗ್ಗ ಹೊರವಲಯದ ತೋಟದ ಮನೆಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಜನವರಿ 19 ರಂದು ಬಂದ ಹಿನ್ನೆಲೆಯಲ್ಲಿ  ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ವೀರೇಶ್ ದಾಳಿ ಮಾಡಿ ಇಬ್ಬರನ್ನು ಈ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಶಿವಮೊಗ್ಗ ತಾಲ್ಲೂಕಿನ ಸೊಗಾನೆ ಬಳಿಯಿರುವ ಬೋಜಪ್ಪ ಕ್ಯಾಂಪ್ ನಲ್ಲಿರುವ ಸೋಮಶೇಖರ್ ಎಂಬುವರಿಗೆ ಸೇರಿದ ತೋಟದ ಮನೆಯಲ್ಲಿ ಇಬ್ಬರು ವ್ಯಕ್ತಿಗಳು ಸೇರಿ ಹೆಣ್ಣುಮಕ್ಕಳನ್ನು ಕರೆಸಿಕೊಂಡು ಅನೈತಿಕ ಚಟುವಟಿಕೆ ಯನ್ನು ನಡೆಸುತ್ತಿದ್ದರು ಎನ್ನಲಾಗಿದೆ.

ದಾಳಿಯ ಸಮಯದಲ್ಲಿ  ವೃದ್ದನೊಬ್ಬ ಓಡತೊಡಗಿದ,ನಂತರ ತೋಟದ ಮನೆಯಲ್ಲಿ ಪರಿಶೀಲನೆ ಮಾಡಿದಾಗ ಮೂರು ಜನ ಹೆಣ್ಣುಮಕ್ಕಳು ಮತ್ತು ಓರ್ವ ವ್ಯಕ್ತಿ ಸಿಕ್ಕಿಬಿದ್ದಿದ್ದಾರೆ. ಸಿಕ್ಕಿಬಿದ್ದ ವ್ಯಕ್ತಿ ಹೆಸರು ಕೆ.ಹೆಚ್.ಶಂಕರ ಈತ ದುರ್ಗಿಗುಡಿ ವಾಸಿಯಾಗಿದ್ದು,ಔಷದಿ ಸಪ್ಲೆ ಮಾಡುವ ಕೆಲಸ ಮಾಡುತ್ತಾನೆ ಎಂದು ಹೇಳಲಾಗುತ್ತಿದೆ. ಸಿಕ್ಕಿಬಿದ್ದ ವಯೋವೃದ್ದನ ಹೆಸರು ಮುನಿಯಪ್ಪ ಬೋಜಪ್ಪ ಕ್ಯಾಂಪ್ ನಿವಾಸಿ ಈತನೇ ತೋಟದ ಮನೆಯನ್ನು ನೋಡಿಕೊಳ್ಳುತ್ತಿದ್ದನು. ಇದೆಲ್ಲಾ ಅನೈತಿಕ ಚಟುವಟಿಕೆ ತೋಟದ ಮಾಲೀಕನಿಗೆ ಗೊತ್ತಿಲ್ಲದೇ ನಡೆಯುತ್ತಿತ್ತು ಎನ್ನಲಾಗಿದೆ.

ಅನೈತಿಕ ಚಟುವಟಿಕೆ ಸಂಬಂದ ಗಂಡಸರಿಂದ ಒಂದು ಸಾವಿರ ರೂ ವಸೂಲಿ ಮಾಡುತ್ತಿದ್ದರು. ಅದರಲ್ಲಿ 500 ರೂ ಯನ್ನು ಹೆಣ್ಣುಮಕ್ಕಳಿಗೆ ಕೊಟ್ಟು ಇನ್ನು ಬಾಕಿ ಉಳಿದ 500 ರೂ. ತಾವೇ ಇಟ್ಟು ಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.
ಮೂವರು ಹೆಣ್ಣುಮಕ್ಕಳ ನ್ನು ಪೊಲೀಸರು ರಕ್ಷಣೆ ಮಾಡಿ ಕಾಪಾಡಿದ್ದಾರೆ.
38 ವರ್ಷದ ಮಹಿಳೆ ಬೆಂಗಳೂರಿನವರು, 28 ವರ್ಷದ ಯುವತಿ ತೀರ್ಥಹಳ್ಳಿ, ಮತ್ತೊರ್ವ ಯುವತಿ 22 ವರ್ಷ ಕುಂದಾಪುರ ತಾಲ್ಲೂಕಿನ ಯುವತಿ ಎಂದು ತಿಳಿದುಬಂದಿದೆ.
ಈ ಸಂಬಂದ ಶಂಕರ್ ಮತ್ತು ಮುನಿಯಪ್ಪ ಎಂಬುವರನ್ನು  ಪೊಲೀಸರು ಬಂದಿಸಿದ್ದಾರೆ. ದ್ವಿಚಕ್ರ ವಾಹನ ಸಹ ವಶಪಡಿಸಿಕೊಳ್ಳಲಾಗಿದೆ. 

ಈ ಸಂಬಂದ ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ವೀರೇಶ್ ರವರು ನೀಡಿದ ದೂರಿನ ಆಧಾರದ ಮೇರೆಗೆ ತುಂಗಾನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಇಬ್ಬರು ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.