ನಗರದ ಎಲ್.ಎಲ್.ಆರ್. ರಸ್ತೆಯಲ್ಲಿರುವ ಕನ್ಸರ್ವೆನ್ಸಿ ರಸ್ತೆ ಸರಿಪಡಿಸಲು ಒತ್ತಾಯಿಸಿ, ಅಣ್ಣಾ ಹಜಾರೆ ಹೋರಾಟ ಸಮಿತಿ ಪ್ರತಿಭಟನೆ

ಶಿವಮೊಗ್ಗ: ನಗರದ ಎಲ್.ಎಲ್.ಆರ್. ರಸ್ತೆಯ ಸಿ.ಎಸ್. ಆಸ್ಪತ್ರೆ ಹಿಂಭಾಗದ ಕನ್ಸರ್ವೆನ್ಸಿ ಅವ್ಯವಸ್ಥೆ ಸರಿಪಡಿಸಲು ಮುಂದಾಗದ ಮಹಾನಗರಪಾಲಿಕೆ ಅಸಹಕಾರದ ವಿರುದ್ಧ ಇಂದು ಅಣ್ಣಾ ಹಜಾರೆ ಹೋರಾಟ ಸಮಿತಿಯಿಂದ ಪಾಲಿಕೆ ಆಯುಕ್ತರ ಕಚೇರಿ ಎದುರು ಧರಣಿ ನಡೆಸಲಾಯಿತು.

ಕಳೆದ ಕೆಲ ತಿಂಗಳುಗಳಿಂದ ಈ ಕುರಿತು ಹಲವಾರು ಬಾರಿ ಮೇಯರ್ ಹಾಗೂ ಆಯುಕ್ತರಿಗೆ ಮನವಿ ಮಾಡಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ರಾಜ್ಯ ರೈತ ಸಂಘದ ಮುಂದಾಳು ಹಾಗೂ 91 ಇಳಿವಯಸ್ಸಿನಲ್ಲೂ ಸಾರ್ವಜನಿಕವಾಗಿ ಅಗತ್ಯ ವೈದ್ಯಕೀಯ ಸೇವೆಯಲ್ಲಿ ತೊಡಗಿರುವ ಡಾ ಚಿಕ್ಕಸ್ವಾಮಿಯವರ ಸತತ ಮನವಿಗಳಿಗೂ ಗೌರವ ನೀಡದ ಮಹಾನಗರಪಾಲಿಕೆ ಆಡಳಿತಗಾರರ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಡಾ. ಬಿ.ಎಂ. ಚಿಕ್ಕಸ್ವಾಮಿ, ಟಿ.ಎಂ.ಅಶೋಕ್ ಯಾದವ್, ಜನಾರ್ಧನ್ ಪೈ, ಪ್ರಭಾಕರ್, ಬಿ.ತಿಪ್ಪಣ್ಣ, ಜನಮೇಜಿರಾವ್, ಕಲ್ಲಪ್ಪ, ನಾಗರಾಜ್, ಚಿದಾನಂದ್ ಇನ್ನಿತರರು ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.