ಶ್ರೀ ನಾರಾಯಣ ಗುರು ವಿಚಾರ ವೇದಿಕೆಯಿಂದ ಸ್ವಾಭಿಮಾನ ನಡಿಗೆ
ಶಿವಮೊಗ್ಗ: ಗಣರಾಜ್ಯೋತ್ಸವ ಪರೇಡ್ ಗೆ ಕೇರಳ ರಾಜ್ಯ ಕೇಂದ್ರಕ್ಕೆ ಕಳಿಸಿದ್ದ ಸಂತ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ಥಬ್ದ ಚಿತ್ರವನ್ನು ಕೇಂದ್ರ ಸರ್ಕಾರ ನಿರಾಕರಿಸಿದ ಕಾರಣ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ವತಿಯಿಂದ ಇಂದು ನಗರದ ಗೋಪಿ ವೃತ್ತದಿಂದ ಪ್ರಾರಂಭಿಸಿ ಪ್ರಮುಖ ಬೀದಿಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರದೊಂದಿಗೆ ಸ್ವಾಭಿಮಾನದ ನಡಿಗೆ ಕಾರ್ಯಕ್ರಮ ನಡೆಯಿತು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೆಇಡಗೋಡು, ದಲಿತ, ಶೋಷಿತ, ಹಿಂದುಳಿದ ಸಮಾಜದ ಗುರುಗಳಾದ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಮತ್ತು ಅವರ ಅನುಯಾಯಿಗಳನ್ನು ಸರ್ಕಾರ ಅವಮಾನಿಸಿದೆ. ಅನ್ಯಾಯ ಮಾಡಿದೆ ಎಂದು ದೂರಿದರು.
ಗೋಪಿ ವೃತ್ತದಿಂದ ನೆಹರು ರಸ್ತೆ, ಅಮೀರ್ ಅಹಮದ್ ವೃತ್ತದ ಮೂಲಕ ಖಾಸಗಿ ಬಸ್ ನಿಲ್ದಾಣ ವೃತ್ತ ಮಾರ್ಗವಾಗಿ ಆರ್ಯ ಈಡಿಗರ ಭವನದವರೆಗೂ ಸಂಘಟನೆ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರ ಸಹಕಾರದೊಂದಿಗೆ ಸ್ವಾಭಿಮಾನದ ನಡಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ನಾರಾಯಣಗುರು ವಿಚಾರ ವೇದಿಕೆ ಕಾರ್ಯಾಧ್ಯಕ್ಷ ಮುಡುಬ ರಾಘವೇಂದ್ರ, ಉಮೇಶ್ ತೀರ್ಥಹಳ್ಳಿ, ಪ್ರಮುಖರಾದ ಕಲಗೋಡು ರತ್ನಾಕರ್, ಜಿ.ಡಿ. ಮಂಜುನಾಥ್, ಪಲ್ಲವಿ, ಬಂಡಿ ರಾಮಚಂದ್ರ, ಶ್ವೇತಾ ಬಂಡಿ, ಗೀತಾ ಲಿಂಗಪ್ಪ, ಕೆ.ಎಲ್. ಉಮೇಶ್, ಸುಧಾಕರ್ ಶೆಟ್ಟಿಹಳ್ಳಿ, ಬಿ. ಯೋಗೇಶ್, ನಟರಾಜ್, ಹೆಚ್. ವಾಸಪ್ಪ, ಶಿವಕುಮಾರ್ ಬಿಳವಗೋಡು, ಚಂದ್ರಶೇಖರ್ ಸೂರಗುಪ್ಪೆ, ವಿಶಾಲ್ ಕುಮಾರ್, ಕೇಶವಮೂರ್ತಿ ಮೊದಲಾದವರಿದ್ದರು.
Leave a Comment