ಎ.ಎ.ಪಿ ಯಿಂದ ಜನಸಹಕಾರ ಆಂದೋಲನ :ಅವೈಜ್ಞಾನಿಕ ನೀರಿನ ಮೀಟರ್ ಅಳವಡಿಕೆ-ನೀರಿನ ಬಿಲ್ ವಿರುದ್ದ ಹೋರಾಟ
ಶಿವಮೊಗ್ಗ: ಸದ್ಯ ಅಧಿಕಾರದಲ್ಲಿರೋ ಬಿ.ಜೆ.ಪಿ ಸರ್ಕಾರ ಹೇಳುವುದೊಂದು ಮಾಡುವುದೊಂದು ಇದರ ದ್ವಿಮುಖ ನೀತಿಗಳಿಂದ ಜನರು ಬೇಸತ್ತಿರೋದರ ಜೊತೆಯಲ್ಲಿ ಆರ್ತಿಕವಾಗಿಯೂ ಸೋತು ಹೋಗುತ್ತಿದ್ದಾರೆ...!
ಇದಕ್ಕೆ ಜೀವಂತ ಸಾಕ್ಷೀ ಎಂದರೆ ಸಧ್ಯ ಶಿವಮೊಗ್ಗ ನಗರದಲ್ಲಿ ಅಧಿಕಾರಕ್ಕಿರೋ ಬಿ.ಜೆ.ಪಿ ನೂತವಾಗಿ ಜಾರಿಗೆ ತಂದಿರೋ 24 ಗಂಟೆಗಳಗ ನೀರಿನ ಯೋಜನೆ.
ಈ ಯೋಜನೆಯ ಹೆಸರಿನಲ್ಲಿ ಪರೋಕ್ಷವಾಗಿ ಜನರಿಂದ ಸರ್ಕಾರ ಹಣ ಲೂಟಿಮಾಡುತ್ತಿದೆ. ಸಧ್ಯ ಈ ಯೋಜನೆಯ ಅಡಿಯಲ್ಲಿ ಸಾಕಷ್ಟು ಮನೆಗಳಿಗೆ ನೀರಿ ಮೀಟರ್ ಅಳವಡಿಸಿದ್ದು ಇಂಥ ಮನೆಗಳಿಗೆ ಬರುತ್ತಿರೋ ನೀರಿನ ಬಿಲ್ ಪ್ರಮಾಣ ಎಂಥವರಿಗೂ ಬಯಹುಟ್ಟಿಸುವಂತಿದೆ.
ಹೀಗೆ ಮನೆಗಳಿಗೆ ನೀರಿಗಾಗಿ ಅಳವಡಿಸಿರೋ ಮೀಟರ್ ಬಿಲ್‌ಗಳು ೩ ತಿಂಗಳಿಗಳಿಗೆ ೬ ರಿಂದ ೮ ಸಾವಿರದ ವರೆಗೆ ಬಂದಿದ್ದು ಇದರಿಂದ ತಿಳಿಯುತ್ತೆ ಸರ್ಕಾರ ಅಭಿವೃದ್ದಿ ಹೇಸರಿನಲ್ಲಿ ಜನರನ್ನು ಸುಲಿಗೆಮಾಡುತ್ತಿದೆ.
ಈ ಕಾರಣಕ್ಕೆ ಎ.ಎ.ಪಿ ಪಕ್ಷ ಜನರೊಂದಿಗೆ ನಾವು ಹೋರಾಟವನ್ನು ಹಮ್ಮಿಕೊಂಡಿದ್ದು ಅವೈಜ್ಞಾನಿಕ ನೀರಿನ ಮೀಟರ್ ಅಳವಡಿಕೆಯ ವಿರುದ್ದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತಿದೆ, ಯಾರೆಲ್ಲಾ ಜನರು ಈ ಅವೈಜ್ಞಾನಿಕ ಮೀಟರ್ ಸಮಸ್ಯೆಗೆ ಸಿಲುಕಿಕೊಂಡಿದ್ದಾರೋ ಅವರು ಹಾಗೂ ಮುಂದೆ ಈ ಸಮಸ್ಯೆ ಹೆಚ್ಚು ಮನೆಗಳಿಗೆ ತಲುಪುವ ಮುನ್ನವೇ ಉಳಿದಿರೋ ಜನರೂ ಕೂಡ ಎ.ಎ.ಪಿ ಪಕ್ಷದ ಈ ಹೋರಾಟದಲ್ಲಿ ಕೈ ಜೋಡಿಸಿ ಅಹಂಕಾರದಲ್ಲಿ ಮೆರೆಯುತ್ತಿರೋ ಬಿ.ಜೆ.ಪಿ ಸರ್ಕಾರ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಗೆ ಹೋರಾಟದ ಬಿಸಿ ಮುಟ್ಟಿಸಬೇಕು ಎಂದು ಮನೋಹರ ಗೌಡ ತಿಳಿಸಿದ್ದಾರೆ.
ಈ ಕಾರಣಕ್ಕೆ ಯಾರೆಲ್ಲ ಜನರು ಹೋರಾಟಕ್ಕೆ ಬೆಂಬಲ ನೀಡಲು ಬಯಸುತ್ತಿರೋ ಅವರುಗಳು ಕೆಳಕ್ಕೆ ನೀಡಿರೋ ಈ ನಂಬರ್ ಗಳಿಗೆ ಸಂಫರ್ಕಿಸಬಹುದು.
ಮನೋಹರ್ ಗೌಡ- 8310379315
ಕಿರಣ್.ಕೆ-8147753783
ಶಶಿಧರ್-7259343111
ಸುಕೇಶ್ ಕೋಟೇಕರ್-8095040758
ಅಮೃತ್-9886602381
Leave a Comment