ತೀರ್ಥಹಳ್ಳಿ ಸಂಚು ರೂಪಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದ, ಮೂರು ಜನರ ಬಂಧನ

ತೀರ್ಥಹಳ್ಳಿ: ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೇಸರ ಗ್ರಾಮದ ವಾಸಿಯೊಬ್ಬರು ಜಮೀನಿನ ರಸ್ತೆ ಮತ್ತು ಬೇಲಿ ವಿಚಾರದಲ್ಲಿ ತನ್ನ ಚಿಕ್ಕಮ್ಮನವರಿಗೆ ತೊಂದರೆ ಕೊಡುತ್ತಿದ್ದಾನೆಂದು ಆತನಿಗೆ ಹೆದರಿಸುವ ಉದ್ದೇಶದಿಂದ, ಆರೋಪಿಗಳು ಸಂಚು ರೂಪಿಸಿ ಸದರಿ ವ್ಯಕ್ತಿಯನ್ನು ದಿನಾಂಕಃ-08-01-2022 ರಂದು ರಾತ್ರಿ ಮಲ್ಲೇಸರದ MPM ಗುಡ್ಡಕ್ಕೆ ಕರೆಸಿಕೊಂಡು ಗಲಾಟೆ ತೆಗೆದು ದೊಣ್ಣೆಗಳಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿರುತ್ತಾರೆ.ಇದು ಸಾಂದರ್ಭಿಕ ಚಿತ್ರ

ಮೇಲ್ಕಂಡ ದೂರಿನ ಮೇರೆಗೆ ತೀರ್ಥಹಳ್ಳಿ ಠಾಣೆ ಗುನ್ನೆ ಸಂಖ್ಯೆ 0007/2022 ಕಲಂ 143, 147, 504,148, 324, 307 ಸಹಿತ149 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿದೆ.

ತನಿಖೆ ಕೈಗೊಂಡು ಪಿಐ ತೀರ್ಥಹಳ್ಳಿ ಮತ್ತು ಪಿಎಸ್ಐ ನಗರ ಠಾಣೆ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು ದಿನಾಂಕಃ-24-01-2022 ರಂದು ಸದರಿ ಪ್ರಕರಣದ ಆರೋಪಿಗಳಾದ 1)ಪ್ರತಾಪ, 26 ವರ್ಷ, ಬಿಜ್ಜಳಗ್ರಾಮ, ತೀರ್ಥಹಳ್ಳಿ, 2)ಮನೋಜ, 24 ವರ್ಷ, ಬಿಜ್ಜಳಗ್ರಾಮ, ತೀರ್ಥಹಳ್ಳಿ, 3)ಪ್ರವೀಣ, 26 ವರ್ಷ, ಕೋಳಿಮಕ್ಕಿ ಗ್ರಾಮ, ತೀರ್ಥಹಳ್ಳಿ ಮತ್ತು 4)ಸಂಜಯ, 22 ವರ್ಷ, ಅಲುಗೊಳ್ಳಿ ಗ್ರಾಮ, ತೀರ್ಥಹಳ್ಳಿ ರವರುಗಳನ್ನು ದಸ್ತಗಿರಿ ಮಾಡಿರುತ್ತಾರೆ.ತನಿಖೆ ಮುಂದುವರಿದಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.