ಕೋವಿಡ್ 19 ಜಾಗೃತಿ ಕಾರ್ಯಕ್ರಮ:ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಣೆ
ಶಿವಮೊಗ್ಗ-;ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿಯ ಡಿ. ಎಸ್. ದಿನಕರ್ ಪಾಲಿಟೆಕ್ನಿಕ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ದಿನಾಂಕ: 31-01-2022 ರಂದು ಕೋವಿಡ್ 19 ಜಾಗೃತಿ ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗ ಮುಖ್ಯ ಬಸ್ ನಿಲ್ದಾಣ, ಗೋಪಿ ಸರ್ಕಲ್, ಹಾಗೂ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೈಜರ್ ವಿತರಣೆ ಮಾಡಿ ಜನ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ದಿನಕರ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರು, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಮುಖ್ಯಸ್ಥರು, ಪದಾಧಿಕಾರಿಗಳು, ಇತರೆ ವಿಭಾಗಗಳ ಉಪನ್ಯಾಸಕರು, ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಶಿಕ್ಷಣ ಸಮಿತಿಯ ಉಪಾಧ್ಯಕ್ಷರು, ಶ್ರೀನಿಧಿ ಸಿಲ್ಕ್ಸ್ ಜವಳಿ ಅಂಗಡಿ ಮಾಲೀಕರಾದ ಶ್ರೀಯುತ ಅಶ್ವತ್ಥನಾರಾಯಣ ಶೆಟ್ಟಿ ಇವರು ಕೈ ಜೋಡಿಸುವ ಮೂಲಕ ಮಾಸ್ಕ್ ವಿತರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಪ್ರಾಂಶುಪಾಲರಾದ ಶ್ರೀ ಚಿದಂಬರ ಬಿ. ರವರು ಅಭಿನಂದನೆ ಸಲ್ಲಿಸಿದರು.
Leave a Comment