ಶಿವಮೊಗ್ಗ ನಗರದ ಮೂರು ಠಾಣಾ ವ್ಯಾಪ್ತಿಯಲ್ಲಿ,ಇಂದು ಕರ್ಪ್ಯೂ... ನಿಷೇದಾಜ್ಞೆ...ಇದೆ ಅಂತಾರೆ... full confused!!

ಶಿವಮೊಗ್ಗ ;ನಗರದ ಮೂರು ಠಾಣೆಯ ವ್ಯಾಪ್ತಿಯಲ್ಲಿ ಇಂದು ಕರ್ಪ್ಯೂ ಇದೆ  ಅಂತಾರೆ...ಇತ್ತು ಅಂದರೇ 0 ಟ್ರಾಫಿಕ್ ಯಾವುದೇ ವಾಹನ ಮತ್ತು ಜನರು ಸಹ ಓಡಾಡುವಂತಿಲ್ಲ.

ನಗರದ ಮೂರು ಠಾಣೆ ಯ ವ್ಯಾಪ್ತಿಯಲ್ಲಿ ಜನರು ಓಡಾಡುತ್ತಿದ್ದಾರೆ. ವಾಹನಗಳು ಸಹ ಓಡಾಡುತ್ತಿವೆ. O traffic ಆಗಿಲ್ಲ.    
ಕರ್ಪ್ಯೂ ಜಾರಿ ಇದೆ ಅಂದ ಮೇಲೆ  144 ನಿಷೇದಾಜ್ಞೆ ಯಾಕೆ? Crpc 144 ನಿಷೇದಾಜ್ಞೆ ಜಾರಿಯನ್ನು ತಾಲ್ಲೂಕು ದಂಡಾಧಿಕಾರಿಗಳು ಹೊರಡಿಸುತ್ತಾರೆ. ಕರ್ಪ್ಯೂ ವನ್ನ ಜಿಲ್ಲಾದಂಡಾಧಿಕಾರಿಗಳು ಅಂದರೆ ಜಿಲ್ಲಾಧಿಕಾರಿ ಗಳು ಹೊರಡಿಸುತ್ತಾರೆ. 

ತಹಶಿಲ್ದಾರರ ನಿಷೇದಾಜ್ಞೆ ಆದೇಶ ನಾನು ನೋಡಿದ್ದೆನೆ.ಆದರೇ ಜಿಲ್ಲಾಧಿಕಾರಿ ಗಳ ಕರ್ಪ್ಯೂ ಆದೇಶದ ಪ್ರತಿಯನ್ನು  ಇದುವರೆಗೂ ನಾನು ನೋಡಿಲ್ಲ. 

ಕರ್ಪ್ಯೂ ಜಾರಿ ಇದೆ ಅಂದ ಮೇಲೆ ಅದನ್ನು ಸರಿಯಾಗಿ ಪೊಲೀಸ್ ಅಧಿಕಾರಿಗಳು ಇಂಪ್ಲಿಮೆಂಟೇಷನ್ ಮಾಡಬೇಕು. 0 Traffic ಮಾಡಬೇಕು. ಜನರು ಓಡಾಡುವುದನ್ನು ಸಹ ನಿಯಂತ್ರಿಸಬೇಕು ಇಲ್ಲದಿದ್ದರೆ ಕರ್ಪ್ಯೂ ಇಲ್ಲ ಅಂತಾ ಹೇಳಬೇಕು.

ಸದರಿ ಮೇಲ್ಕಂಡ ವಿಷಯ ಸಾರ್ವಜನಿಕ ವಲಯದಲ್ಲಿ ಬಹಳ ಚರ್ಚೆಯಾಗುತ್ತಿದೆ. ನನಗೆ ಹಲವಾರು ಜನರು ಪೋನ್ ಮಾಡಿ ಕೇಳುತ್ತಿದ್ದಾರೆ.

 ಈಗ ಪೊಲೀಸ್ ಅಧಿಕಾರಿಗಳು ಕರ್ಪ್ಯೂ ಇದೆ ಮತ್ತು 144 ನಿಷೇದಾಜ್ಞೆ ಜಾರಿ ಇದೆ ಅಂತಾ ಹೇಳುತ್ತಿರುವುದು ನಗೆಪಾಟಿಲಿಗೆ ಕಾರಣವಾಗಿದೆ. ಇಷ್ಟ ಬಂದ ಹಾಗೇ ಕಾನೂನನ್ನು ಉಪಯೋಗಿಸಬಾರದು.

  ನಗರದ ಮೂರು ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿಗಳು  ಕರ್ಪ್ಯೂ ಇದೆ ಅಂತಾರೆ! ನಿಷೇದಾಜ್ಞೆ ಇದೆ ಅಂತಾರೆ! Full confused.

ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಟಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಯಾವುದಾದರು ಒಂದು ನಿಷೇದಾಜ್ಞೆ ಅಥವಾ ಕರ್ಪ್ಯೂ ಜಾರಿ ತರಲಿ ಅದರಂತೆ ಸರಿಯಾಗಿ ಕರ್ತವ್ಯ ನಿರ್ವಹಿಸಲಿ ಎಂಬುದು ನಮ್ಮ ಕೋರಿಕೆ ಆಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.