ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾರಕ್ಷಣಾಧಿಕಾರಿಗಳಲ್ಲಿ ಒಂದು ಮನವಿ...Crpc 144 ನಿಷೇದಾಜ್ಞೆ ಜಾರಿ ಅಂದರೆ, ಪೋಲೀಸರು ಅಂಗಡಿ ವಹಿವಾಟುಗಳನ್ನು ಬಾಗಿಲು ಹಾಕಿಸುವುದಾ?

Crpc 144  ನಿಷೇದಾಜ್ಞೆ ಜಾರಿ ಅಂದರೆ,  ಪೋಲೀಸರು ಅಂಗಡಿ ವಹಿವಾಟುಗಳನ್ನು ಬಾಗಿಲು ಹಾಕಿಸುವುದಾ?

ನನಗೆ ಕೆಲವೊಮ್ಮೆ ಪೊಲೀಸರ ವರ್ತನೆ ನೋಡಿದರೆ ಭಿನ್ನವಾಗಿರುತ್ತವೆ. ಇವರು ಕಾನೂನು ಪಾಲಕರು, ಆದರೆ ಇವರೇ ಕಾನೂನು ಉಲ್ಲಂಘನೆ ಮಾಡಿದರೇ ಹೇಗೆ?

Crpc 144 section ಯಾವಾಗ ಜಾರಿ ಮಾಡುತ್ತಾರೆ? 144 ಸೆಕ್ಷನ್ ಏನು ಹೇಳುತ್ತೆ ನೋಡೋಣ..

ನಗರದಲ್ಲಿ  ಅಹಿತಕರ ಘಟನೆಗಳು ನಡೆದಾಗ   ಮುಂಜಾಗ್ರತಾ ಕ್ರಮವಾಗಿ ಯಾವುದೇ ಗಲಾಟೆ ಆಗದಂತೆ ಸಾರ್ವಜನಿಕರ ಆಸ್ತಿ ಪಾಸ್ತಿ  ಮತ್ತು ಪ್ರಾಣ ರಕ್ಷಣೆ ಅಹಿತಕರ ಘಟನೆ ನಡೆಯದಂತೆ  ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಈ ಸೆಕ್ಷನ್ ನನ್ನು ತಾಲ್ಲೂಕು ದಂಡಾಧಿಕಾರಿಗಳು ಜಾರಿ  ಜಾರಿಗೊಳಿಸುತ್ತಾರೆ OK.

 ಸೆಕ್ಷನ್ ಜಾರಿ ಸಂದರ್ಭದಲ್ಲಿ 5 ಕ್ಕಿಂತ ಹೆಚ್ಚು ಜನರು ಗುಂಪು ಸೇರುವಂತಿಲ್ಲ. ಪ್ರತಿಭಟನಾ ಮೆರವಣಿಗೆ, ಸಭೆ ಸಮಾರಂಭಗಳನ್ನು ಏರ್ಪಡಿಸುವಂತಿಲ್ಲ. ಮಾರಕಾಸ್ತ್ರಗಳನ್ನು ಹಿಡಿದು ಕೊಂಡು ಓಡಾಡುವಂತಿಲ್ಲ. ಇದೆಲ್ಲ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ತಹಶೀಲ್ದಾರ್ ರವರು ನಿಷೇದಾಜ್ಞೆ ಜಾರಿಗೊಳಿಸುತ್ತಾರೆ. ಅದನ್ನು ಪೊಲೀಸರು ನಿಯಂತ್ರಿಸುತ್ತಾರೆ OK.
  
ಶಿವಮೊಗ್ಗದಲ್ಲಿ ಅಹಿತಕರ ಘಟನೆ ನಡೆದಿತ್ತು, ಒಂದು ದಿನ ಪ್ರಕ್ಷುಬ್ಧ  ಸ್ಥಿತಿ ಇತ್ತು ಪೊಲೀಸರು  ಅಂಗಡಿಗಳನ್ನು ಬಾಗಿಲು ಹಾಕಿಸಿದರು ಅದು OK.   

ಆದರೆ ಇಂದು 6 ನೇ ದಿವಸ  ಕೂಡ ಸುಖಾಸುಮ್ಮನೆ   ಕೆಲವು ಕಡೆ ಪೊಲೀಸರು ಅಂಗಡಿಗಳನ್ನು  ಬಾಗಿಲು ಹಾಕಿಸುವುದು ಎಷ್ಡು ಸರೀ.. ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. 

ಬಿಸಿನೆಸ್ ಎಲ್ಲಾ ಕೊರಾನಾದಿಂದ ಹಾಳಾಗಿದೆ. ಮತ್ತೆ 2-3 ದಿನ ಬುಧವಾರದವರೆಗೆ ಅಂಗಡಿ ವಹಿವಾಟು ಬಾಗಿಲು ಹಾಕಿದರೆ ವ್ಯಾಪಾರಸ್ಥರ ಗತಿ ಏನು? ಎಂಬುದು ಪ್ರಶ್ನೆ..

ನಗರದ ಬಿ.ಹೆಚ್ ರಸ್ತೆ ಯಲ್ಲಿ ಐದು ದಿನದಿಂದ ಒಂದು ಸೈಡ್ ರಸ್ತೆಗೆ ಬ್ಯಾರಿಕೇಡ್ ಇಟ್ಟು ಬಂದ್ ಮಾಡಲಾಗಿದೆ. ಸುಗಮ ಸಂಚಾರಕ್ಕೆ ವ್ಯಾಪಾರಕ್ಕೆ ಅಡಚಣೆಯಾಗಿದೆ. ವ್ಯಾಪಾರಸ್ಥರಿಗೂ ಅನಾನುಕೂಲವಾಗಿದೆ.

ಇದೇ ರೀತಿ ನೆಹರು ರಸ್ತೆ , ಗಾಂಧೀಬಜಾರ್ ರಸ್ತೆ ಸಹ ವಾಹನಗಳ ಸಂಚಾರಕ್ಕೆ ಮತ್ತು ವ್ಯಾಪಾರಕ್ಕೆ ತೊಂದರೆಯಾಗಿದೆ.
 
ಸಾರ್ವಜನಿಕರು ಕೆಲವು ಕಡೆ ಪೊಲೀಸರು ಬಲವಂತವಾಗಿ ಬಾಗಿಲು ಹಾಕಿಸುತ್ತಿದ್ದಾರೆ ಮತ್ತು  ಬಸ್ ಸ್ಟ್ಯಾಂಡ್  ಸುತ್ತಮುತ್ತಲಿನ ಕಡೆ ಅಂಗಡಿ ಬಾಗಿಲು ಹಾಕಿ ಇಲ್ಲದಿದ್ದರೆ ಅಂಗಡಿ ಸೀಜ್  ಮಾಡಲಾಗುತ್ತೆ ಅಂತಾ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ರಿಕೆಗೆ ಸಾರ್ವಜನಿಕರು ತಿಳಿಸುತ್ತಾ ಪೋಲೀಸರ ಈ ವರ್ತನೆಗೆ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾತ್ರಿ ಅಂಗಡಿ  ಬಾಗಿಲು OK .
ಹಗಲು ಬಾಗಿಲು ಹಾಕಿಸುವುದು ಯಾಕೆ?
 
ಇದಕ್ಕೆ ಶಿವಮೊಗ್ಗ ಜಿಲ್ಲಾ ಎಸ್.ಪಿ.ಶಾಂತರಾಜುರವರು  ಉತ್ತರಿಸಬೇಕು....

ಶಿವಮೊಗ್ಗ ಟ್ರಾಫಿಕ್ ವ್ಯವಸ್ಥೆ ದೇವರೇ ಬಲ್ಲ!

ಶಿವಮೊಗ್ಗ ನಗರದಲ್ಲಿ ಕೆಲವು ಸರ್ಕಲ್ ನಲ್ಲಿ ಮತ್ತು ರಸ್ತೆಯಲ್ಲಿ ವಾಹನ ಸಂಚರಿಸಿ ಬೇಕು ಅಂದರೆ ನರಕಯಾತನೆ...

ಟ್ರಾಫಿಕ್ ವ್ಯವಸ್ಥೆ ಯಂತೂ ಶಿವಮೊಗ್ಗದಲ್ಲಿ ಹಳ್ಳ ಹಿಡಿದಿದೆ. ಕೇಸ್ ಹಾಕುವುದಕ್ಕೆ ಮತ್ತು ಎಲ್ಲೆಂದರಲ್ಲಿ ಬ್ಯಾರಿಕೇಡ್ ಇಡುವುದಕ್ಕೆ ಟ್ರಾಫಿಕ್ ಪೊಲೀಸರು ಮುಂದಾಗುತ್ತಿದ್ದಾರೆ ವಿನಃ ವಾಹನಗಳು ಮತ್ತು ಜನರ ಸುಗಮ ಓಡಾಟಕ್ಕೆ ಗಮನ ಹರಿಸುತ್ತಿಲ್ಲ.
ಎಲ್ಲೆಂದರಲ್ಲಿ ಬ್ಯಾರಿಕೇಡ್ ಗಳು ರಾರಜಿಸುತ್ತಿವೆ ಅವುಗಳನ್ನು ದಾಟಿ ಬರಬೇಕೆಂದರೆ ಬಹಳ ಕಷ್ಟ ಕಷ್ಟ...

ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ಗಳು ಜೀಪ್ ಬಿಟ್ಟು ಕೆಳಗೆ ಇಳಿಯಲ್ಲ. ಪೋಲೀಸರು ಕೇಸ್ ಹಾಕುತ್ತಾರೆ ಅವರೇ ರಶೀದಿಯನ್ನು ಸಹ ಬರೆದು ಕೊಡುತ್ತಾರೆ. ನಗರದಲ್ಲಿ  ಫೀಕ್ ಅವರ್ ಸಂಜೆ ಹೊತ್ತಿನಲ್ಲಿ  ಸರ್ಕಲ್ ನಲ್ಲಿ ಬಂದು ಅಧಿಕಾರಿಗಳು ಗಮನಿಸಿದರೆ ಗೊತ್ತಾಗುತ್ತದೆ. 
ಈ ಹಿಂದೆ ಪ್ರಮುಖ ಸರ್ಕಲ್ ನಲ್ಲಿ  ಅಧಿಕಾರಿಗಳು ಸಂಜೆ ಯಾಗುತ್ತಿದ್ದಂತೆ ಬಂದು ವೀಕ್ಷಣೆ ಮಾಡುತ್ತಿದ್ದರು. ಈಗ ಕಾಲ ಬದಲಾಗಿದೆ. ಅಧಿಕಾರಿಗಳು ಠಾಣೆ ಬಿಟ್ಟು ಬರುತ್ತಿಲ್ಲ. 

ಮೊದಲು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸಂಭಂದಿಸಿದ ಪೊಲೀಸ್ ಅಧಿಕಾರಿಗಳು ಗಮನಹರಿಸಲಿ ಎಂಬುದು ನಮ್ಮಗಳ ಕೋರಿಯಾಗಿರುತ್ತದೆ....

 ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲವು ಠಾಣಾ ಅಧಿಕಾರಿಗಳು  ರಸ್ತೆಯಲ್ಲಿ ಬಡಾವಣೆಯಲ್ಲಿ ಹೆಚ್ಚು ಸಂಚರಿಸಬೇಕು,ಕಿಡಿಗೇಡಿಗಳಿಗೆ ಪೊಲೀಸ್ ಅಧಿಕಾರಿಗಳ ಭಯವಿಲ್ಲವಂತಾಗಿದೆ. ಕೆಲವು ಅಧಿಕಾರಿಗಳ  ಜೀಪ್ ಗಳು ಚಿತಾ,ಕ್ರೈಮ್ ಪೊಲೀಸರ ಬೈಕ್ ಗಳು ಅವರ ವೈಯಕ್ತಿಕ ಕೆಲಸಕ್ಕೆ ಮಾತ್ರ ಉಪಯೋಗ ವಾಗುತ್ತಿವೆ ಎನ್ನಲಾಗುತ್ತಿದೆ.

ಶಿವಮೊಗ್ಗ ನಗರದಲ್ಲಿ ರೋಟಿನ್ ಡ್ಯೂಟಿ ಪೊಲೀಸರಿಗೆ ಇಲ್ಲವಾಗಿದೆ. ಕ್ರೈಮ್ ಪೊಲೀಸರ ಬದಲಾವಣೆ ಆಗಬೇಕು. ಬಕೇಟ್ ಪೊಲೀಸರಿಗೆ ಕೆಲಸ ಹಚ್ಚಬೇಕು.ಕೆಲವರು ಡ್ರೆಸ್ ಹಾಕಿಕೊಂಡು  ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಾರೆ. ಕೆಲವರಿಗೆ ಒಂದೇ ರೀತಿಯ ಕರ್ತವ್ಯ.ಹಲವು ಲೋಪಗಳು ಪೊಲೀಸ್ ಇಲಾಖೆಯಲ್ಲಿ ಇದೆ .ಇದನ್ನು ಗಮನಿಸಬೇಕು.
 
ಜಿಲ್ಲಾ ರಕ್ಷಣಾಧಿಕಾರಿಗಳು ಇತ್ತ ಕಡೆ ಗಮನ ಹರಿಸಿ, ಕೆಲವು ಠಾಣೆ ಯ ಅಧಿಕಾರಿಗಳ ನ್ನು ಠಾಣೆ ಬಿಟ್ಟು ಸಂಜೆ ಹೊತ್ತು ರಸ್ತೆಯಲ್ಲಿ ಸಂಚರಿಸುವ ನಿಟ್ಟಿನಲ್ಲಿ ತಾಕೀತು ಮಾಡಬೇಕು.. ಆಗ ಕಿಡಿಗೇಡಿಗಳಿಗೆ ಭಯ ಇರುತ್ತದೆ.. 

 ಪೊಲೀಸ್ ಇಲಾಖೆ  ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ  ದುಷ್ಕರ್ಮಿಗಳನ್ನು, ಕಿಡಿಗೇಡಿಗಳಿಗೆ,ರೌಡಿಗಳಿಗೆ  ಬಿಸಿ ಮುಟ್ಟಿಸಲಿ..ಅವರ ಮೇಲೆ ಇವರ ಸಿಟ್ಟು ಕೋಪವಿರಲಿ ....ಅದು ಬಿಟ್ಟು ಅಂಗಡಿ ವಹಿವಾಟು ಬಂದ್ ಮಾಡಿ ನಾವು ಜನರಿಗೆ ರಕ್ಷಣೆ ನೀಡುತ್ತೆವೆ ಅಂತಾ ಹೇಳುತ್ತಿರುವುದು ಜನರು ಪೊಲೀಸ್  ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಅಂಗಡಿ ವಹಿವಾಟು, ಹೊಟೇಲ್ ನವರಿಗೆ ಬೀದಿ ಬದಿ  ವ್ಯಾಪಾರ ಸ್ಥರಿಗೆ ಯಾವುದೇ ತೊಂದರೆ ಯಾಗದಂತೆ ಬಾಗಿಲು ತೆರೆದು ವ್ಯಾಪಾರ ಮಾಡಲು ರಕ್ಷಣೆ ನೀಡುವತ್ತ ಜಿಲ್ಲೆಯ ಜಿಲ್ಲಾಧಿಕಾರಿ ಗಳು ಮತ್ತು ಜಿಲ್ಲೆಯ ರಕ್ಷಣಾಧಿಕಾರಿಗಳು ಗಮನಹರಿಸಲಿ ಎಂಬುದು  ಶಿವಮೊಗ್ಗ ನಗರದ ವ್ಯಾಪಾರಸ್ತರ ಮತ್ತು ಸಾರ್ವಜನಿಕರ ಮನವಿ... ಒತ್ತಾಸೆಯಾಗಿರುತ್ತದೆ. ಈ ಬಗ್ಗೆ ಪೊಲೀಸ್ ಇಲಾಖೆಯ ವರಿಷ್ಟರು ಗಮನಹರಿಸಲಿ.......

4 ಕಾಮೆಂಟ್‌ಗಳು:

Blogger ನಿಂದ ಸಾಮರ್ಥ್ಯಹೊಂದಿದೆ.