ಬಜರಂಗದಳದ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ : ಆಸ್ಪತ್ರೆಗೆ ದಾಖಲು

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ.‌ ನೆಹರೂ ಕ್ರೀಡಾಂಗಣಕ್ಕೆ ವಾಕಿಂಗ್ ಬರುವ ವೇಳೆ  ದೀಪಕ್ ಪೆಟ್ರೋಲ್ ಪಂಪ್ ಬಳಿ ಕಾರ್ಯಕರ್ತನ ಮೇಲೆ ನಾಲ್ವರು ಹಲ್ಲೆ ನಡೆಸಿದ್ದು ಮೂಗು ಬಾಯಿ ಹಾಗೂ ತಲೆಗೆ ಪೆಟ್ಟು ಬಿದ್ದಿದೆ.ನಾಗೇಶ್ ದಿನಾಲು ನೆಹರೂ ಕ್ರೀಡಾಂಗಣಕ್ಕೆ ವಾಕ್ ಮಾಡಲು ಬರುತ್ತಿದ್ದು ಇಂದು ಬೆಳಿಗ್ಗೆ ಸ್ಕೂಟರ್ ನಲ್ಲಿ ಬರುತ್ತಿದ್ದಾಗ ಪೆಟ್ರೋಲ್ ಪಂಪ್ ಬಳಿ ದಾಳಿ ನಡೆಸಿದ್ದಾರೆ. ನಾಗೇಶ್ ಮನೆ ಅಶೋಕ ರಸ್ತೆಯಲ್ಲಿದ್ದು ಅಲ್ಲಿಂದ ನೆಹರೂ ಕ್ರೀಡಾಂಗಣಕ್ಕೆ ಬರುವ ವೇಳೆ ಹಲ್ಲೆ ಮಾಡಲಾಗಿದೆ.

ಗೋವುಗಳ ರಕ್ಷಣೆ, ಹಿಂದೂ ಸಂಘಟನೆಯ ಕೆಲಸದಲ್ಲಿ ನಾಗೇಶ್ ಮುಂಚೂಣಿಯಲ್ಲಿದ್ದರು. ಸಧ್ಯಕ್ಕೆ ನಾಗೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣವೇ ಮೆಟ್ರೋಗೆ ದಾಖಲಿಸಲಾಗಿದೆ. 

ಮೆಟ್ರೋ ಆಸ್ಪತ್ರೆಯಲ್ಲಿ ಬಿಜೆಪಿ ಮುಖಂಡರು ಭೇಟಿ ನೀಡಿ ನಾಗೇಶ್ ನ ಅರೋಗ್ಯ ವಿಚಾರಿಸಿದ್ದಾರೆ. ಡಿಎಸ್ ಅರುಣ್, ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಬಿಜೆಪಿಯ ದೀನ್ ದಯಾಳು ಹಾಗೂ ಕಾರ್ಯಕರ್ತರು ಮೆಟ್ರೋಗೆಭೇಟಿ ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.