ಶಿವಮೊಗ್ಗ ನಗರದಲ್ಲಿ ಪೊಲೀಸರು ಅಂಗಡಿಗಳನ್ನು ಬಾಗಿಲು ಹಾಕಿಸುತ್ತಿರುವುದಕ್ಕೆ ವಾಣಿಜ್ಯ ವಹಿವಾಟುದಾರರಿಂದ ಬಾರಿ ವಿರೋದ-ಆಕ್ರೋಶ; ಡಿಸಿಗೆ ಮನವಿ

ಶಿವಮೊಗ್ಗ; ಶಿವಮೊಗ್ಗ ನಗರದಲ್ಲಿ ಒಂದುವಾರದ ಹಿಂದೆ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ ಕಲಂ 144 crpc ರೀತ್ಯ ನಿಷೇದಾಜ್ಞೆ ಜಾರಿ ಮಾಡಿ  ಅಂಗಡಿಗಳನ್ನು ಬಾಗಿಲು ಮುಚ್ಚಿಸುತ್ತಿರುವ ಪೊಲೀಸರ ಕ್ರಮಕ್ಕೆ ವ್ಯಾಪಕವಾಗಿ ಸಾರ್ವಜನಿಕರಿಂದ ವಿರೋದ ವ್ಯಕ್ತವಾಗಿದೆ.ಸಾರ್ವಜನಿಕರು ಮತ್ತು ವಾಣಿಜ್ಯ ವಹಿವಾಟುಗಳನ್ನು ನಡೆಸುವರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅಂಗಡಿಗಳನ್ನು ಬಂದ್ ಮಾಡುವುದನ್ನು ನಿಲ್ಲಿಸುವಂತೆ,  ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಇಂದು 
ಜಿಲ್ಲಾ ರಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಂಘದ ಅದ್ಯಕ್ಷರಾದ ಜಿ.ಆರ್.ವಾಸುದೇವ ಇವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಖದ್ದು ಭೇಟಿಯಾಗಿ ಒಂದು ವಾರದಿಂದ ವಹಿವಾಟು ಬಂದ್ ಮಾಡಿಸುತ್ತಿರುವುದರಿಂದ ಲಕ್ಷಂತರ ಉದ್ದಿಮೆ ದಾರರು ತೊಂದರೆ ನಷ್ಟ ಕಷ್ಟ ಅನುಭವಿಸುವಂತಾಗಿದೆ ಎಂದು ದೂರಿದ್ದಾರೆ.ರಕ್ಷಣಾ ಇಲಾಖೆ ಹಲವಾರು ರಕ್ಷಣ ಕ್ರಮಗಳನ್ನು ಕೈಗೊಂಡು ವ್ಯಾಪಾರ ಮಾಡಲು ವರ್ತಕರಿಗೆ ರಕ್ಷಣೆ ನೀಡಬೇಕು.ಪೊಲೀಸ್ ಇಲಾಖೆ ತಮ್ಮ ವೈಫಲ್ಯ ವನ್ನು ಸರಿಮಾಡಿಕೊಳ್ಳುವ ಬದಲು ವ್ಯಾಪಾರಸ್ಥರನ್ನು ಬಲಿಪಶುಗಳ ನ್ನಾಗಿ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.

ಕೂಡಲೇ ಪೊಲೀಸ್ ಇಲಾಖೆ ಬಂದೋಬಸ್ತ್ ಗೆ ಹೆಚ್ಚಿನ ರಕ್ಷಣಾ ಸಿಬ್ಬಂದಿ ಗಳನ್ನು ನೇಮಕ ಮಾಡಿಕೊಳ್ಳಬೇಕು.ಅಹಿತಕರ ಘಟನೆಗಳು ಮರುಕಳುಹಿಸದಂತೆ ಕ್ರಮಕೈಗೊಳ್ಳಬೇಕು. ಅದು ಬಿಟ್ಟು ವಾಣಿಜ್ಯ ವಹಿವಾಟು ದಾರರಿಗೆ ಅವಾಚ್ಯವಾಗಿ ಬೈದು ಬಾಗಿಲು ಹಾಕಿಸುವುದನ್ನು ಪೊಲೀಸರು ಕೂಡಲೇ ನಿಲ್ಲಿಸಬೇಕು. ಪೊಲೀಸರು ಅಮಾನವೀಯ ವಾಗಿ ವರ್ತಿಸಿ ದೌರ್ಜನ್ಯ ದಬ್ಬಾಳಿಕೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ವಾಣಿಜ್ಯ ಸಂಘದ ಸದಸ್ಯರು ಮತ್ತು ವಹಿವಾಟು ನಡೆಸುವರು ಹಲವಾರು ಜನರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.