ವಿದ್ಯುತ್ ವ್ಯತ್ಯಯ : ಸಹಕರಿಸಲು ಮನವಿ

ಶಿವಮೊಗ್ಗ, : ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಮಂಡಳಿಯು ನಗರ ಉಪವಿಭಾಗ-2ರ ವ್ಯಾಪ್ತಿಯಲ್ಲಿನ ಸ್ಮಾರ್ಟ್‍ಸಿಟಿ ಮತ್ತು ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಡಿಸೆಂಬರ್ 05ರಂದು ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಗೋಪಿಶೆಟ್ಟಿಕೊಪ್ಪ, ಇಲಿಯಾಜ್‍ನಗರ 1 ಮತ್ತು 2ನೇ ತಿರುವು, ಚಾಲುಕ್ಯ ನಗರ, ಕೆ.ಹೆಚ್.ಬಿ.ಕಾಲೋನಿ, ಸಿದ್ಧೇಶ್ವರ ಸರ್ಕಲ್, ಮೇಲಿನ ತುಂಗಾನಗರ, ಮಲ್ಲಿಕಾರ್ಜುನ ಬಡಾವಣೆ, ಸೋಮಣ್ಣ ಫ್ಯಾಕ್ಟರಿ, ವೈಷ್ಣವಿ ಲೇಔಟ್, 80ಅಡಿ ರಸ್ತೆ, 100ಅಡಿ ರಸ್ತೆ, ಮಂಜುನಾಥ ಬಡಾವಣೆ, ಖಾಜಿ ನಗರ, ಟಿಪ್ಪುನಗರ, ಕಾಮತ್ ಲೇಔಟ್, ಹಳೇ ಗೋಪಿಶೆಟ್ಟಿಕೊಪ್ಪ, ಮಂಡಕ್ಕಿ ಭಟ್ಟಿ, ಎಫ್-6 ಕಲ್ಲೂರು ಮಂಡ್ಲಿ ಫೀಡರ್, ಎಫ್-5 ಗಾಜನೂರು ರೂರಲ್, ಗ್ರಾಮಾಂತರ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.