ಬೆಂಗಳೂರು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅರಣ್ಯ ವಿಭಾಗದ ನಿಗಮದ ನಿರ್ದೆಶಕರಾಗಿ ಶಿವಮೊಗ್ಗದ ಎನ್.ಡಿ. ಸತೀಶ್ ನೇಮಕ
ಬೆಂಗಳೂರು :ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅರಣ್ಯ ವಿಭಾಗದ ನಿಗಮದ ನಿರ್ದೆಶಕರಾಗಿ ಶಿವಮೊಗ್ಗದ ಎನ್.ಡಿ. ಸತೀಶ್ ರವರನ್ನು ಮತ್ತು ಬೇರೆ ಜಿಲ್ಲೆಯ ಇತರೇ ಮೂವರನ್ನು ನೇಮಕ ಮಾಡಿ ಸರ್ಕಾರದ ಉಪಕಾರ್ಯದರ್ಶಿ ಅರಣ್ಯ ಪರಿಸರ ಮತ್ತು ಜೀವಿ ಶಾಸ್ತ್ರ ಬೆಂಗಳೂರು ಇವರು ಆದೇಶ ಹೊರಡಿಸಿದ್ದಾರೆ.
ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅರಣ್ಯ ವಿಭಾಗದ ವ್ಯಾಪ್ತಿಗೆ ಒಳಪಡುವ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತದ ಇದರ ಆರ್ಟಿಕಲ್ಸ್ 23(1) ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ತಕ್ಷಣ ಜಾರಿಗೆ ಬರುವಂತೆ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶ ದವರೆಗೆ ಕರ್ನಾಟಕ ರಾಜ್ಯ ಅರಣ್ಯ ನಿಗಮದ ನಿರ್ದೇಶಕ ರ ಮಂಡಳಿಯ ಅಧಿಕಾರೇತರ ನಿರ್ದೇಶಕ ರಾಗಿ ಶ್ರೀ ಎನ್.ಡಿ.ಸತೀಶ್ .ಅಶೋಕನಗರ ಶಿವಮೊಗ್ಗ ಇವರನ್ನು ನೇಮಕ ಮಾಡಲಾಗಿದೆ. ಅದೇರೀತಿ ಇನ್ನು ಮೂವರನ್ನು ನೇಮಕ ಮಾಡಲಾಗಿದೆ.

Leave a Comment