ಭಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ ಮುಸ್ಲಿಂ ಗೂಂಡಾಗಳ ವಿರುದ್ದ ಕಾನೂನು ಕ್ರಮ- ಶೀಘ್ರ ಬಂಧನ: ಸಚಿವ ಕೆ.ಎಸ್ ಈಶ್ವರಪ್ಪ ಭರವಸೆ
ಶಿವಮೊಗ್ಗ; ಬಜರಂಗದಳ ಸಹ ಸಂಚಾಲಕನ ಮೇಲೆ ನಡೆದಿರುವ ಹಲ್ಲೆ ಪೂರ್ವ ನಿಯೋಜಿತ ಕೃತ್ಯವಾಗಿದ್ದು ಮುಸ್ಲೀಂ ಮುಖಂಡರು ಹಲ್ಲೆ ಮಾಡಿದ ಗೂಂಡಾಗಳಿಗೆ ಕರೆದು ಬುದ್ದಿ ಹೇಳದಿದ್ದರೆ ಸರ್ಕಾರವೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಖಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.
ಇಂದು ಮೆಟ್ರೋ ಆಸ್ಪತ್ರೆಯಲ್ಲಿ ಗಾಯಾಳು ಬಜರಂಗದಳದ ಸಹ ಸಂಚಾಲಕ ನಾಗೇಶ್ ನ ಆರೋಗ್ಯ ಕುರಿತು ವಿಚಾರಿಸಲು ಭೇಟಿ ನೀಡಿದ ಸಚಿವ ಈಶ್ವರಪ್ಪ ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತಾ,ಮುಸ್ಲಿಂ ಕುತಂತ್ರಿಗಳು ಈ ತರಹದ ಗಲಭೆಗಳನ್ನು ಮಾಡುತ್ತಾ ಬಂದಿದ್ದಾರೆ. 4 ಜನ ಮುಸಲ್ಮಾನ ಗುಂಡಾಗಳು ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ ಎಂದರು
ನಾಗೇಶ್ ನಿಗೆ ತೀವ್ರತರನಾದ ಹಲ್ಲೆ ನಡೆಸಲಾಗಿದೆ. ಇದು ಮುಸ್ಲೀಂ ಗೂಂಡಾಗಳ ಕೃತ್ಯವೆಂಬುದು ಸ್ಪಷ್ಟಗೊಂಡಿದೆ. ಹಿಂದೂ ಸಮಾಜ ಬಹಳ ಸಹಿಷ್ಣತೆಯಿಂದ ಈ ಗೂಂಡಾಗಿರಿಯನ್ನ ತಡೆದು ಕೊಂಡು ಬಂದಿದೆ. ಒಬ್ಬನ ಮೇಲೆ ನಾಲ್ಕೈದು ಗೂಂಡಾಗಳು ಹಲ್ಲೆ ನಡೆಸಿದರೆ ಅದು ದೌರ್ಜನ್ಯವೆಸಗಿದಂತೆ ಎಂದು ತಿಳಿಸಿದರು.
ಮುಸ್ಲಿಮ್ ಮುಖಂಡರು ತಮ್ಮ ಯುವಕರಿಗೆ ಸರಿಯಾದ ಬುದ್ದಿ ಹೇಳಲಿ ಎಂದರು.
ಪೊಲೀಸ್ ಇಲಾಖೆ ಶೀಘ್ರದಲ್ಲಿಯೇ ನಾಗೇಶನ ಮೇಲೆ ಹಲ್ಲೆ ನಡೆಸಿದ ಗೂಂಡಾಗಳನ್ನ ಪೊಲೀಸರು ಬಂಧಿಸಲಿದ್ದಾರೆ ಎಂದರು.

Leave a Comment