ಪಾಲಿಕೆ ಆವರಣದಲ್ಲಿನ ಡಾ/ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆ

 ಶಿವಮೊಗ್ಗ; ಇಂದು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಹಿನ್ನೆಲೆಯಲ್ಲಿ ಮಹಾಪೌರ ರಾದ ಶ್ರೀಮತಿ ಸುವರ್ಣ ಶಂಕರ್ ಹಾಗೂ ಉಪಮಹಾಪೌರರಾದ  ಶ್ರೀಮತಿ ಸುರೇಖ ಮುರಳೀಧರ್ ರವರು ಮಹಾನಗರ ಪಾಲಿಕೆಯ ಆವರಣದಲ್ಲಿರುವ ಡಾ/ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ನಮನ ಸಲ್ಲಿಸಿದರು.

 ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಶ್ರೀ ಯೋಗೀಶ್, ಸದಸ್ಯರಾದ ಧೀರಾಜ್ಹ ಹೊನ್ನವಿಲೆ, ಆಯುಕ್ತ ಚಿದಾನಂದ್ ವಟಾರೆ, ಉಪ ಆಯುಕ್ತರಾದ  ಪ್ತಮೋದ್, ಎಇಇ ಅಕ್ಷತ್ , ಸುನಿಲ್, ನಾಗೇಶ್, ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.