ರಾಜ್ಯದಲ್ಲಿ ನಿಗಮ ಮಂಡಳಿಗಳಿಗೆ ನೇಮಕರಾದ ಜಿಲ್ಲೆಯ ಅಧ್ಯಕ್ಷ ಮತ್ತು ಸದಸ್ಯರಿಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸನ್ಮಾನ
ಶಿವಮೊಗ್ಗ: ರಾಜ್ಯದಲ್ಲಿ ನಿಗಮ ಮಂಡಳಿಗಳಿಗೆ ನೇಮಕರಾದ ಜಿಲ್ಲೆಯ ಅಧ್ಯಕ್ಷ ಮತ್ತು ಸದಸ್ಯರಿಗೆ ಇಂದು ಬಿಜೆಪಿ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ವೈ.ರಾಘವೇಂದ್ರ, ಬಿಜೆಪಿಯಲ್ಲಿ ಮಾತ್ರ ಕಾಂರ್ಕರ್ತರನ್ನು ಗೌರವಿಸುವ, ಅವರಿಗೆ ಜವಾಬ್ದಾರಿ ನೀಡುವ ಹೊಣೆಗಾರಿಕೆ ಹೊತ್ತುಕೊಂಡಿರುತ್ತದೆ. ನಿಗಮ ಮಂಡಳಿ ನೇಮಕಕ್ಕೆ ಸಂಬಂಧಿಸಿದಂತೆ ಹೆಚ್.ಡಿ. ದೇವೇಗೌಡರು ಕಣ್ಣೀರು ಹಾಕಿದ್ದರು. ಆದರೆ ನಮ್ಮಲ್ಲಿ ಹಾಗಿಲ್ಲ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಅತಿ ಹೆಚ್ಚು ಪ್ರಮಾಣದಲ್ಲಿ ಜಿಲ್ಲೆಯ ಕಾರ್ಯಕರ್ತರಿಗೆ ನಿಗಮ, ಮಂಡಳಿಗಳಿಗೆ ನೇಮಕ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿಯೇ 73 ಕ್ಕಿಂತ ಹೆಚ್ಚು ಬೇರೆ ಬೇರೆ ನಿಗಮ, ಸಮಿತಿಗಳಿಗೆ ಅಧ್ಯಕ್ಷರನ್ನಾಗಿ ಮತ್ತು ಸದಸ್ಯರನ್ನಾಗಿ ಮಾಡಲಾಗಿದೆ ಎಂದರು.
ತಮಗೆ ನೀಡಿದ ಅವಕಾಶಗಳನ್ನು ಬಳಿಸಿಕೊಂಡು ನಾಮನಿರ್ದೇಶಿತ ಅಧ್ಯಕ್ಷರು ಮತ್ತು ಸದಸ್ಯರುಗಳು ಜಿಲ್ಲೆಯ ಪ್ರಗತಿ ಜೊತೆಗೆ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಬೇಕು. ಅಟಲ್ ಜೀ ಅಂತಹ ಹಿರಿಯರು ಕಟ್ಟಿದ ಪಕ್ಷವನ್ನು ಮತ್ತಷ್ಟು ಬೆಳೆಯುವಂತೆ ಮಾಡಬೇಕು. ಅಟಲ್ ಜೀ ಹೇಳುತ್ತಿದ್ದರು ಕಾರ್ಯಕರ್ತರೇ ಶಕ್ತಿ ಎಂದು ಆ ಮಾತನ್ನು ನಮ್ಮ ಬಿಜೆಪಿ ಪಕ್ಷದ ನಾಯಕರು ಉಳಿಸಿಕೊಳ್ಳುತ್ತಿದ್ದಾರೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಅವಕಾಶಗಳನ್ನು ಬಳಸಿಕೊಂಡು ಅವರು ಮತ್ತಷ್ಟು ಸೇವೆ ಸಲ್ಲಿಸಲಿ. ಕಾರ್ಯಕರ್ತರಿಗೆ ಆಧ್ಯತೆ ಕೊಟ್ಟ ಪಕ್ಷವಿದು. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಕೂಡ ಕಾರ್ಯಕರ್ತರು ಮತ್ತು ನಾಮನಿರ್ದೇಶಿತ ಅಧ್ಯಕ್ಷರು, ಸದಸ್ಯರು ಜವಾಬ್ದಾರಿಯುತವಾಗಿ ಕೆಲಸ ಮಾಡಲಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ಬೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್, ಆರ್ಯವೈಶ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ಕೃಷಿ ಸಮಾಜದ ಅಧ್ಯಕ್ಷ ಮಹೇಂದ್ರನಾಥ್, ವಕ್ಪ್ ಬೋರ್ಡ್ ಜಿಲ್ಲಾಧ್ಯಕ್ಷ ಅಬ್ದುಲ್‌ಗನಿ ಸೇರಿದಂತೆ ಅಧ್ಯಕ್ಷರು ಮತ್ತು ಸದಸ್ಯರನ್ನು ಸನ್ಮಾನಿಸಲಾಯಿತು. ವಿವಿಧ ಕಾರಣಗಳಿಂದ ಇನ್ನೂ ಹಲವು ಅಧ್ಯಕ್ಷರು ಮತ್ತು ಸದಸ್ಯರು ಸನ್ಮಾನ ಕಾಂರ್ಕ್ರಮದಲ್ಲಿ ಭಾಗವಹಿಸಲು ಆಗಿರಲಿಲ್ಲ.
ಕಾರ್ಯಕ್ರಮದಲ್ಲಿ ಪ್ರಮುಖರಾದ ಎಂ.ಬಿ.ಭಾನುಪ್ರಕಾಶ್, ಆರ್.ಕೆ.ಸಿದ್ದರಾಮಣ್ಣ, ಗಿರೀಶ್ ಪೇಲ್ ಸೇರಿದಂತೆ ಹಲವರಿದ್ದರು.
Leave a Comment