ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಮಸೂದೆ ರೈತರ ಪರವಾಗಿದೆ:ಸಂಸದ ಬಿ.ವೈ.ರಾಘವೇಂದ್ರ
ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ಮಸೂದೆ ರೈತರ ಪರವಾಗಿದ್ದು ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲ ವಾಗಲಿದೆ ಎಂದು ಸಂಸದ ರಾಘವೇಂದ್ರ ಹೇಳಿದರು.
ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿನಡೆಸಿ ಮಾತನಾಡಿದರು. ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು,ಕೃಷಿ ಸನ್ಮಾನ ,ಸೇರಿದಂತೆ ನೀರಾವರಿಗೆ ಹೆಚ್ಚಿನ ಒತ್ತು ನೀಡಿದೆ ಅನೇಕ ಯೋಜನೆಗಳನ್ನು ರೈತರ ಕಲ್ಯಾಣಕ್ಕಾಗಿ
ಕೇಂದ್ರದ ನರೇಂದ್ರ ಮೋದಿಯವರ ಮತ್ತು ರಾಜ್ಯದ ಬಿ ಎಸ್ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದಾರೆ ಎಂದು ಹೇಳಿದರು,
ಕೆಲವರು ರಾಜಕೀಯ ಉದ್ದೇಶಕ್ಕಾಗಿ ಹೇಳುವುದು ಸರಿಯಲ್ಲ ಎಂದರು ಈ ಸಂದರ್ಭದಲ್ಲಿ,ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಟಿ ಡಿ ಮೇಘರಾಜ್,ವಿಬಾಗ ಪ್ರಭಾರಿಗಳಾದ ಗಿರೀಶ್ ಪಟೇಲ್ ,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್ ಎಸ್ ಜ್ಯೋತಿಪ್ರಕಾಶ್, ಆರ್ಯವೈಶ್ಯ ನಿಗಮದ ರಾಜ್ಯಾಧ್ಯಕ್ಷರಾದ ಡಿ ಎಸ್ ಅರುಣ್ ,ರಾಜ್ಯ ಯೋಜನಾ ಆಯೋಗದ ನಿರ್ದೇಶಕರು ಮತ್ತು ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕೆರೆಕೈ,ಜಿಲ್ಲಾ ಬಿಜೆಪಿ ಪ್ರದಾನ ಕಾರ್ಯದರ್ಶಿ ಗಳಾದ ಶಿವರಾಜ್,ಜಿಲ್ಲಾ ಕಾರ್ಯದರ್ಶಿ,ನಿರ್ದೇಶಕ ಎನ್ ಡಿ ಸತೀಶ್, ಜಿಲ್ಲಾ ಖಜಾಂಜಿಯಾದ ಎಸ್ ರಮೇಶ್ (ರಾಮಣ್ಣ), ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ರಾಮಚಂದ್ರ ಸಾಲೆಕೊಪ್ಪ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಂಗಾಧರಪ್ಪ ಮಂಡೆನಕೊಪ್ಪ,ಮಾಧ್ಯಮ ಪ್ರಮುಖ ಅಣ್ಣಪ್ಪ ಕೆ ವಿ ಉಪಸ್ಥಿತರಿದ್ದರು
Leave a Comment