ಭಜರಂಗದಳದ ಕಾರ್ಯಕರ್ತ ನಾಗೇಶ್ ಮೇಲಿನ ಹಲ್ಲೆಯ ಹಿನ್ನೆಲೆಯಲ್ಲಿ ಗಾಂಧೀಬಜಾರ್ ಬಂದ್
ಗಾಂಧಿ ಬಜಾರ್, ಚೋರ್ ಬಜಾರ್ ನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣಗೊಂಡಿದೆ. ಭಜರಂಗದಳದ ಮುಖಂಡರು ನಾಗೇಶ್ ಮೇಲಿನ ಹಲ್ಲೆಯನ್ನು ಖಂಡಿಸಿದ್ದಾರೆ.ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಗಾಂಧೀಬಜಾರ್ ನಲ್ಲಿ ಮೊದಲು ಪಾರ್ಕಿಂಗ್ ವಿಚಾರದಲ್ಲಿ ಪ್ರಕ್ಷುಬ್ದತೆ ವಾತಾವರಣ ನಿರ್ಮಾಣ ಗೊಂಡರೆ ಚೋರ್ ಬಜಾರ್ ನಲ್ಲಿ ಮೂವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
ಮೊದಲು ಬಜಾರ್ ನಲ್ಲಿ ದ್ವಿಚಕ್ರವಾಹನ ನಿಲುಗಡೆ ಸಂಬಂಧ ವಿಚಾರ ಸಣ್ಣಪುಟ್ಟ ಮಾತಿನಚಕಮಕಿ ಅದರ ಬೆನ್ನಲ್ಲೇ ಚೋರ್ ಬಜಾರ್ ನಲ್ಲಿ ಮೂವರು ವ್ಯಾಪಾರಸ್ಥರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಗೊಂದಲದ ವಾತಾವರಣ ನಿರ್ಮಾಣ ಗೊಂಡಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ.
ಸಂಸದ ರಾಘವೇಂದ್ರ ಸಹ ಆಸ್ಪತ್ರೆ ಗೆ ಬೇಟಿ ನೀಡಿ ಭಜರಂಗ ದಳದ ಕಾರ್ಯಕರ್ತ ನಾಗೇಶ್ ಆರೋಗ್ಯದ ಬಗ್ಗೆ ಮತ್ತು ಹಲ್ಲೆಯ ಘಟನೆ ಸಂಭಂದ ವಿಚಾರಿಸಿದ್ದಾರೆ.
ಸ್ಥಳಕ್ಕೆ ಎಸ್ಪಿ ಶಾಂತರಾಜು, ಡಿವೈಎಸ್ಪಿ ಉಮೇಶ್ ಈಶ್ವರ್ ನಾಯ್ಕ್, ಸಿಪಿಐ ವಸಂತ್ ಕುಮರ್ ಭೇಟಿ ನೀಡಿ ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಸೂಕ್ತ ಪೋಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತಿದೆ.

Leave a Comment