ಆಟೋರಿಕ್ಷಾದಲ್ಲಿ ಅಕ್ರಮ ಮದ್ಯ ವಶ: ಆರೋಪಿ ಬಂಧನ
ಶಿವಮೊಗ್ಗ, ಡಿಸೆಂಬರ್-02 : ಶಿವಮೊಗ್ಗ ನಗರದ ಮತ್ತೂರು ರಸ್ತೆಯಲ್ಲಿ ಕೆಎ-18-ಎ-5069 ಆಟೋರಿಕ್ಷಾದಲ್ಲಿ ಅಕ್ರಮವಾಗಿ 77.760 ಲೀಟರ್ ಅಕ್ರಮ ಮದ್ಯ ಸಾಗಾಣಿಕೆ ಮಾಡುತ್ತಿರುವುದನ್ನು ಪತ್ತೆಹಚ್ಚಿ ಶೀಲಾ ಧಾರಜ್‌ಕರ್, ಅಬಕಾರಿ ನಿರೀಕ್ಷಕರು, ಶಿವಮೊಗ್ಗ ವಲಯ-1 ಇವರು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿರುತ್ತಾರೆ.
ಈ ಪ್ರಕರಣದಲ್ಲಿ ಜಪ್ತಾದ ವಾಹನದ ಅಂದಾಜು ಮೌಲ್ಯ ರೂ-50,000 ಮತ್ತು ಅಕ್ರಮ ಮದ್ಯದ ಅಂದಾಜು ಮೌಲ್ಯ ರೂ.40,000/- ಗಳಾಗಿದ್ದು ಒಟ್ಟು ಮೌಲ್ಯ 90,000/-ಗಳಾಗಿರುತ್ತದೆ. ಈ ಪ್ರಕರಣದ ಆರೋಪಿಯಾದ ಸಂತೆಕಡೂರಿನ ಶೇಖರ್ ಕೆ. ಬಿನ್ ಕುಪ್ಪುಸ್ವಾಮಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕ್ಯಾಪ್ಟನ್ ಅಜಿತ್‌ಕುಮಾರ್ ಜಿ ಎ, ಅಬಕಾರಿ ಉಪ ಆಯುಕ್ತರು, ಶಿವಮೊಗ್ಗ ಜಿಲ್ಲೆ ರವರ ನಿರ್ದೇಶನದ ಕಾರ್ಯಾಚರಣೆಯಲ್ಲಿ ಶೀಲಾ ಧಾರಜ್‌ಕರ್, ಅಬಕಾರಿ ನಿರೀಕ್ಷಕರು, ದಿವ್ಯಾ ಯು, ಅಬಕಾರಿ ಉಪ ನಿರೀಕ್ಷರು ಮತ್ತು ಅಬಕಾರಿ ರಕ್ಷಕರಾದ ರಂಜನ್, ನಾಗಪ್ಪ ಶಿರೋಳ್ ಹಾಗೂ ವಾಹನ ಚಾಲಕ ನ್ಯಾನರಾಜ್ ಇತರ ಅಬಕಾರಿ ಸಿಬ್ಬಂಧಿಗಳು ಭಾಗವಹಿಸಿರುತ್ತಾರೆ.


Leave a Comment