ಕೃಷಿಕ್ ಎಂಡೋಮೆಂಟ್ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಆಹ್ವಾನ
ಶಿವಮೊಗ್ಗ, ಡಿಸೆಂಬರ್-01;ಬೆಂಗಳೂರಿನ
ಕೃಷಿಕ್ ಸರ್ವೋದಯ ಫೌಂಡೇಶನ್ ಸಂಸ್ಥೆಯು ಭಾರತೀಯ ಆಡಳಿತ ಸೇವೆ/ಕರ್ನಾಟಕ ಆಡಳಿತ ಸೇವೆ/ಬ್ಯಾಂಕಿಂಗ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆ 2021ರ ಪರೀಕ್ಷೆಗಾಗಿ ನುರಿತ ವಿಷಯ ತಜ್ಞರಿಂದ ಡಿ. 10 ರಿಂದ ಆನ್‍ಲೈನ್/ಆಫ್‍ಲೈನ್ ಮಾರ್ಗದರ್ಶನ ಮತ್ತು ತರಬೇತಿ ನೀಡುತ್ತಿದ್ದು, ಆಸಕ್ತ ಅರ್ಹ ಆಕಾಂಕ್ಷಿಗಳಿಂದ ಆನ್‍ಲೈನ್ ಅರ್ಜಿ ಆಹ್ವಾನಿಸಿದೆ.
ವಿಷಯ ಸಾಮಗ್ರಿಗಳು ಜೊತೆಗೆ ಹಾಸ್ಟೆಲ್ ಸೌಲಭ್ಯ ನೀಡಲಾಗುತ್ತಿದ್ದು, ಕೆ.ಸ್.ಎಫ್. ವತಿಯಿಂದ ಆರ್ಥಿಕ ದುರ್ಬಲ ಮತ್ತು ಪ್ರತಿಭಾವಂತರಿಗೆ ಎಂಡೋಮೆಂಟ್ ವಿದ್ಯಾರ್ಥಿವೇತನವನ್ನು ತರಬೇತಿಗೆ ಸೇರ್ಪಡೆಯಾದಲ್ಲಿ ಕೊಡಲಾಗುವುದು.
ಆಸಕ್ತರು www.krishiksarvodayafoundation.org ವೆಬ್‍ಸೈಟ್ ಮುಖಾಂತರ ಡಿಸೆಂಬರ್ 07 ರೊಳಗಾಗಿ ತಮ್ಮ ಹೆಸರನ್ನು ನೊಂದಾಯಿಸುವುದು ಅಥವಾ ಮೊಬೈಲ್ ನಂ.: 7625000990 ಸಂಖ್ಯೆಗೆ ವಾಟ್ಸ್‍ಪ್ ಮಾಡುವಂತೆ ಫೌಂಡೇಶನ್ ಕಾರ್ಯದರ್ಶಿ ಟಿ. ತಿಮ್ಮೇಗೌಡ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ನಂ.15, 2ನೇ ಹಂತ, ಹಳೆ ವಿಮಾನ ನಿಲ್ದಾಣ ರಸ್ತೆ, ಕೋಡಿಹಳ್ಳಿ, ಬೆಂಗಳೂರು-08, ದೂ.ಸಂ.: 080-25202299 ನ್ನು ಸಂಪರ್ಕಿಸುವುದು.
------------

Leave a Comment