ಆಲ್ಕೊಳ ಸರ್ಕಲ್ ನಲ್ಲಿ ಸಿಐಡಿ ಎಸ್.ಪಿ ಕಾರು ಮೊಪೆಡ್ ಗೆ ಡಿಕ್ಕಿ ಮೊಪೆಡ್ನಲ್ಲಿದ್ದವರಿಗೆ ತೀವ್ರ ಪೆಟ್ಟು ಆಸ್ಪತ್ರೆಗೆ ಶಿಪ್ಟ್
ಶಿವಮೊಗ್ಗ; ಇಂದು ಬೆಳಿಗ್ಗೆ ಆಲ್ಕೊಳ ಸರ್ಕಲ್ ನಲ್ಲಿ ಸಿಐಡಿ ಎಸ್.ಪಿ ಕಾರು ಮೊಪೆಡ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೊಪೆಡ್ನಲ್ಲಿದ್ದ ಮೂವರಿಗೆ ತೀವ್ರ ಪೆಟ್ಟು ಬಿದ್ದು ಆಸ್ಪತ್ರೆಗೆ ಶಿಫ್ಟ್ ಮಾಡಿದ ಘಟನೆ ವರದಯಾಗಿದೆ
ಬೆಂಗಳೂರಿನ ಸಿಐಡಿ ಎಸ್.ಪಿ ಭೀಮಾ ಶಂಕರ್ ಗುಳೆದ್. ರವರ ka 04 g 920 ಕಾರು ಆಲ್ಕೊಳ ಸರ್ಕಲ್ ಬಳಿ ಟಿವಿಎಸ್ ಎಕ್ಸಲ್ ka 16 j 4783 ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಗೋಪಾಳ ಕಡೆಯಿಂದ ಅಡ್ಡವಾಗಿ ಬಂದ TVS ವಾಹನವನ್ನು ಅಪಘಾತ ತಪ್ಪಿಸಲು ಎಸ್.ಪಿ ಕಾರ್ ಡ್ರೈವರ್ ಬಹಳ ಪ್ರಯತ್ನ ಪಟ್ಟಿದ್ದಾರೆ ಬ್ರೇಕ್ ಸಹ ಹಾಕಲಾಗಿದ್ದು ಆದರೂ ನಿಯಂತ್ರಣ ತಪ್ಪಿ ಅಪಘಾತವಾಗಿದೆ ಎಂದು ಹೇಳಲಾಗುತ್ತಿದೆ.
ತಕ್ಷಣವೇ ಸ್ಪಂದಿಸಿದ ಸಿ ಐ ಡಿ,
ಎಸ್. ಪಿ ಭೀಮಾಶಂಕರ್ ಗುಳೇದ್ ರವರು ಗಾಯಾಳುಗಳನ್ನು ಸಾರ್ವಜನಿಕರ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲು ಮಾಡಿಸಿರುತ್ತಾರೆ ಎಂದು ತಿಳಿದು ಬಂದಿರುತ್ತದೆ.
ಮೊಪೆಡ್‌ನಲ್ಲಿ ಪ್ರಯಾಣಿಸುತ್ತಿದ್ದ ನಜೀರಾ(35), ಮುಸ್ಮಾನ್(9),ಅಮ್ರಿನ್(14), ರಜಿಯಾ(19)ಎಂಬುವರು ತೀವ್ರವಾಗಿ ಗಾಯಗೊಂಡಿದ್ದು ಎಲ್ಲರನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿದೆ. ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುದ್ದಿ ತಿಳಿದ ಪೊಲೀಸರು ಸ್ಥಳ ಕ್ಕೆ ಬಂದು ಪರಿಶೀಲಿಸಿ ಎರಡು ವಾಹನಗಳನ್ನು ಠಾಣೆಗೆ ಶಿಪ್ಟ್ ಮಾಡಿರುತ್ತಾರೆ
Leave a Comment