ಚಿನ್ನ ಬೆಳ್ಳಿ ಅಂಗಡಿಯಲ್ಲಿ ಚಿನ್ನಾಭರಣ ಕಳ್ಳತನ ಆರೋಪಿತನ ಬಂಧನ
ಶಿವಮೊಗ್ಗ ನಗರದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ತಿರುಪಳಯ್ಯನಕೇರಿಯ ಪಿರ್ಯಾದಿರವರ ಚಿನ್ನ-ಬೆಳ್ಳಿ ತಯಾರು ಮಾಡಿ ಮಾರಾಟ ಮಾಡುವ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು, ಅವರ ಮನೆಯಲ್ಲಿ ವಾಸವಿದ್ದ ಪಶ್ಚಿಮ ಬಂಗಾಳ ಮೂಲದ ಅಬ್ದುಲ್ ದಿಲಾವರ್ ಮಲ್ಲಿಕ್ ಎಂಬ ವ್ಯಕ್ತಿಯು, ದಿನಾಂಕಃ-11-11-2020 ರಂದು ಬಂಗಾರವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ, ಪಿರ್ಯಾದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಸದರಿ ಪ್ರಕರಣದಲ್ಲಿ ಆರೋಪಿ ಹಾಗೂ ಮಾಲು ಪತ್ತೆಗಾಗಿ ಉಮೇಶ್ ಈಶ್ವರ್ ನಾಯಕ್, Dysp ಶಿವಮೊಗ್ಗ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ, ಚಂದ್ರಶೇಖರ್, CPI, ಕೋಟೆ ವೃತ್ತ ರವರ ನೇತೃತ್ವದ, ಶಿವಾನಂದ ಕೋಳಿ, PSI ಕೋಟೆ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಗಳಾದ ಸಿ.ಹೆಚ್.ಸಿ ಅಶೋಕ್, ಕಲ್ಲನಗೌಡ, ಸಿ.ಪಿ.ಸಿ ಅಂಡ್ರೋನ್ ಜೋನ್ಸ್ ರವರುಗಳನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ, *ಆರೋಪಿ ಅಬ್ದುಲ್ ದಿಲಾವರ್ ಮಲ್ಲಿಕ್ @ ಹುಸೇನ್ 31 ವರ್ಷ ವಾಸ ಹೂಗ್ಲಿ, ಪಶ್ಚಿಮ ಬಂಗಾಳ ರಾಜ್ಯ* ಈತನನ್ನು ವಶಕ್ಕೆ ಪಡೆದು, ಕೂಲಂಕುಷ ವಿಚಾರಣೆ ಮಾಡಿ ಆರೋಪಿತನಿಂದ
*72 ಗ್ರಾಂ ತೂಕದ ರೂ 3,47,000/- (ರೂಪಾಯಿ ಮೂರು ಲಕ್ಷ ನಲವತ್ತೇಳು ಸಾವಿರ ) ಮೌಲ್ಯದ* ಚಿನ್ನಾಭರಣವನ್ನು ವಶಕ್ಕೆ ಪಡೆದು, ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ನೀಡಿರುತ್ತದೆ ಎಂದು ಶ್ರೀ ಕೆ.ಎಂ. ಶಾಂತರಾಜು, ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ತಿಳಿಸಿರುತ್ತಾರೆ.

Leave a Comment