ಮತ್ತೆ ಶಿವಮೊಗ್ಗದಲ್ಲಿ ಕರ್ಪ್ಯೂ ಮತ್ತು 144 ನಿಷೇದಾಜ್ಞೆ ಡಿಸೆಂಬರ್12 ರವರೆಗೆ ಮುಂದುವರಿಕೆ!! ಮತ್ತೆ ವ್ಯಾಪಾರಸ್ಥರಿಗೆ ನಷ್ಟ..ಕಷ್ಟ...

ಶಿವಮೊಗ್ಗದ ಕೋಟೆ, ದೊಡ್ಡಪೇಟೆ ಮತ್ತು ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಡಿಸೆಂಬರ್ 12 ರ ಶನಿವಾರ ಬೆಳಿಗ್ಗೆ 10 ರ ವರೆಗೆ ಕರ್ಫ್ಯೂ ಜಾರಿ ಇರಲಿದೆ.
ಮೂರೂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಿಗ್ಗೆ 7 ರಿಂದ ಬೆಳಿಗ್ಗೆ 11 ರ ವರೆಗೆ ಕರ್ಫ್ಯೂ ಸಡಿಲಿಕೆ ಇದ್ದು, ಸಾರ್ವಜನಿಕರು ಕೊಳ್ಳುವ ಅಥವಾ ತಮ್ಮ ಅಂಗಡಿಗಳನ್ನು ತೆರೆಯುವ ಅವಕಾಶಕ್ಕೆ ಅವಕಾಶ ಮಾಡಿಕೊಡಲಾಗಿದೆ.ನಂತರ ವೇಳೆಯಲ್ಲಿ ಕರ್ಪ್ಯೂ ಮುಂದುವರಿಯಲಿದೆ.

ಶಿವಮೊಗ್ಗ ನಗರದಾದ್ಯಂತ ಡಿಸೆಂಬರ್ 12 ರ ಬೆಳಿಗ್ಗೆ 10 ರ ವರೆಗೆ 144 ಸೆಕ್ಷನ್ ನಿಷೇದಾಜ್ಞೆ  ಜಾರಿ ಇರಲಿದೆ...

ಡಿ. 12 ರ ವರೆಗೆ ಅಂಗಡಿ ವ್ಯಾಪಾಸ್ಥರಿಗೆ,ವಹಿವಾಟುದಾರರಿಗೆ ಮತ್ತೆ  ತೊಂದರೆ ನಷ್ಟ,ಸಂಕಷ್ಟ ತಪ್ಪಿದ್ದಲ್ಲ..ಈಗಾಗಲೇ ಕೊರಾನಾದಿಂದ ಹೊಡೆತ ಬಿದ್ದಿರುವ ವ್ಯವಹಾರಸ್ಥರಿಗೆ ಮತ್ತೆ ಸ್ವಲ್ಪ ದಿವಸ ತೊಂದರೆ ಅನುಭವಿಸುವಂತಾಗಿದೆ.

ಈಗಾಗಲೇ ಸಾರ್ವಜನಿಕರು ಮತ್ತು ವ್ಯವಹಾರಸ್ಥರು ಅಂಗಡಿ ಬಾಗಿಲು ಹಾಕಿಸುವ ಬಗ್ಗೆ  ಪೊಲೀಸ್ ಇಲಾಖೆ ವಿರುದ್ದ,ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಇದೀಗ ಮತ್ತೆ ಕರ್ಪ್ಯೂ ಮತ್ತು ನಿಷೇದಾಜ್ಞೆ ಮುಂದುವರಿಕೆ ಯಾಗಿದೆ. ಮುಂದೆನಾಗುವುದು ಕಾದು ನೋಡಬೇಕು.

ಗಲಾಟೆ ಮಾಡಿದ್ದು ಯಾರೋ ....ತೊಂದರೆ ಅನುಭವಿಸರೋ ಯಾರೋ. ಇದೇ ಸತ್ಯ..ನಿತ್ಯ.... 
 
ಸದರಿ ಮೆಲ್ಕಂಡ ಮಾಹಿತಿ ಪೊಲೀಸ್ ಇಲಾಖೆಯ ಬಲ್ಲಮೂಲಗಳಿಂದ ತಿಳಿದು ಬಂದಿರುತ್ತದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.