ಸುಮಾರು 14 ಕೋಟಿ ರೂ.ಗಳ ವೆಚ್ಚದಲ್ಲಿ ವಾರ್ಡ್ ನಂ.3 (ಶಾಂತಿ ನಗರ) ರ ಲ್ಲಿ ಅಭಿವೃದ್ದಿ ಮಾಡಲಾಗಿದೆ : ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ
ಶಿವಮೊಗ್ಗ: ಸುಮಾರು 14 ಕೋಟಿ ರೂ.ಗಳ ವೆಚ್ಚದಲ್ಲಿ ವಾರ್ಡ್ ನಂ.3 (ಶಾಂತಿ ನಗರ) ರ ಲ್ಲಿ ಅಭಿವೃದ್ದಿ ಮಾಡಲಾಗಿದೆ ಎಂದು ಪಾಲಿಕೆ ಸದಸ್ಯ ಧೀರರಾಜ್ ಹೊನ್ನವಿಲೆ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಕಳೆದ 2 ವರ್ಷಗಳ ಅವಧಿಯಲ್ಲಿ ಪ್ರಮುಖವಾಗಿ ರಸ್ತೆಗಳ ನಿರ್ಮಾಣವಾಗಿದೆ. ಚರಂಡಿ, ಬಾಕ್ಸ್ ಚರಂಡಿ, ಕಾಂಕ್ರಿಟ್ ರಸ್ತೆ, ತಡೆಗೋಡೆ, ವಿವಿಧ ತಿರುವುಗಳಲ್ಲಿ ಡಾಂಬರ್ ರಸ್ತೆ ಮಾಡಲಾಗಿದೆ. ಕಳೆದ 30 ವರ್ಷಗಳಲ್ಲಿ ಆಗದ ಕೆಲಸಗಳನ್ನು ನನ್ನ ಎರಡು ವರ್ಷಗಳ ಅವಧಿಯಲ್ಲಿ ಮಾಡಿದ್ಧೇನೆ ಎಂದರು.
ಇದಲ್ಲದೇ ಕುಡಿಯುವ ನೀರು, ಪಾರ್ಕ್ ಅಭಿವೃದ್ದಿ, ಯುಜಿಡಿ, ಸರ್ಕಾರಿ ಶಾಲೆಗಳ ಅಭಿವೃದ್ದಿ, ಸ್ಮಶಾನ ಅಭಿವೃದ್ದಿ, ಹೈಮಾಸ್ಕ್ ಲೈಟ್ ಅಳವಡಿಕೆ, ಸಮುದಾಯ ಭವನ, ಅಂಗನವಾಡಿಗಳಿಗೆ ನೀರು ಮುಂತಾದ ಹಲವು ಅಭಿವೃದ್ದಿ ಮಾಡಲಾಗಿದೆ. ಹಾಗೆಯೇ ರಾಗಿಗುಡ್ಡದ ಪಕ್ಕದಲ್ಲಿ ಇಎಸ್‌ಐ ಆಸ್ಪತ್ರೆ ಸುಮಾರು 100 ಕೋಟಿ ರೂ.ವೆಚ್ಚದಲ್ಲಿ ಸ್ಥಾಪನೆಯಾಗಲಿದ್ದು, ಶಂಕು ಸ್ಥಾಪನೆ ಮಾಡಲಾಗಿದೆ ಎಂದರು.
ತಮ್ಮೆಲ್ಲ ಸಾಧನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆಯನೂರು ಮಂಜುನಾಥ್ ಮುಂತಾದ ಹಿರಿಯರು ಕಾರಣರಾಗಿದ್ದಾರೆ ಇವರೆಲ್ಲರಿಗೂ ನನ್ನ ಅಭಿನಂದನೆಗಳು, ಅಭಿವೃದ್ದಿಯೇ ನನ್ನ ಗುರಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ನಾಗರಾಜ್, ಅರವಿಂದ್, ನಾಗಣ್ಣ, ಮಂಜಪ್ಪ, ತಿಮ್ಮಣ್ಣ, ಜಿತೇಂದ್ರ, ಲಿಂಗರಾಜು ಸೇರಿದಂತೆ ಹಲವರಿದ್ದರು.
.
Leave a Comment