ಡಿಸೆಂಬರ್ 10 ರಂದು CCF ಕಚೇರಿಗೆ ಅಕೇಶಿಯಾ ವಿರೋಧಿ ಹೋರಾಟ ಒಕ್ಕೂಟದವರಿಂದ ಮುತ್ತಿಗೆ!
ಪ್ರೆಸ್ ಟ್ರಸ್ಟ್ ಶಿವಮೊಗ್ಗದಲ್ಲಿ ಇಂದು ಸಂಜೆ ನಡೆದ ಅಕೇಶಿಯಾ ವಿರೋಧಿ ಹೋರಾಟ ಒಕ್ಕೂಟದ ಸಭೆ.
ಎಂಪಿಎಂ ನೆಡುತೋಪು ಭೂಮಿಯನ್ನು ಖಾಸಗೀಕರಣ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಡೆ ವಿರುದ್ಧ ಒಕ್ಕೂಟ ಡಿಸೆಂಬರ್ 10ರಂದು ಹಮ್ಮಿಕೊಂಡಿರುವ ಶಿವಮೊಗ್ಗ ಸಿಸಿಎಫ್ ಕಚೇರಿ ಮುತ್ತಿಗೆ ಹೋರಾಟದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ವಿವಿಧ ಸಾಮಾಜಿಕ, ರಾಜಕೀಯ, ಪರಿಸರ ಸಂಘಟನೆಗಳ ಪ್ರಮುಖರು, ಪರಿಸರ ಹೋರಾಟಗಾರರು, ಲೇಖಕರು, ಪತ್ರಕರ್ತರು ಸಭೆಯಲ್ಲಿ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಿದರು.
ಒಕ್ಕೂಟದ ಪ್ರಮುಖರಾದ ಡಾ ರಾಜೇಂದ್ರ ಚೆನ್ನಿ, ಕೆ ಪಿ ಶ್ರೀಪಾಲ್, ಡಿ ಎಸ್ ಎಸ್ ಗುರುಮೂರ್ತಿ, ಶಶಿ ಸಂಪಳ್ಳಿ, ಶಿಜು ಪಾಶ, ಶೇಖರ್ ಗೌಳೇರ, ಅಕ್ಷತಾ ಹುಂಚದಕಟ್ಟೆ, ನಾಗರಾಜ ಪರಿಸರ, ಬಾಲಕೃಷ್ಣ ನಾಯ್ಡು, ಚನ್ನವೀರಪ್ಪ ಗಾಮನಗಟ್ಟಿ, ಕಿರಣ್ ಕುಮಾರ್, ಸುರೇಶ್ ಅರಸಾಳು , ಶಿವಮೊಗ್ಗ ಪೀಸ್ ಆರ್ಗ ನೈಸೇಷನ್ ನ ರಿಯಾಝ್ ಅಹಮದ್ ,ನವೀನ್ ತಲಾರಿ, ವಸೀಂ ಅಲಿ ಖಾನ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
Leave a Comment