ಶಿವಮೊಗ್ಗದಲ್ಲಿ ಗಲಭೆಗೆ ಸಂಭಂದ 10 ಪ್ರಕರಣ ದಾಖಲು-62 ಜನರ ಬಂಧನ, ಶಾಂತಿ ನೆಲೆಸಲು ಸೂಕ್ತ ಬಿಗಿ ಪೊಲೀಸ್ ಬಂದೋಬಸ್ತ್ ; ಐಜಿಪಿ ರವಿ
ಶಿವಮೊಗ್ಗ;ನಿನ್ನೆ ನಡೆದ ಗಲಭೆಗೆ ಸಂಬಂಧ ಪಟ್ಟಂತೆ ಕೋಟೆ ಮತ್ತು ದೊಡ್ಡ ಪೇಟೆಯಲ್ಲಿ 10 ಪ್ರಕರಣ ದಾಖಲಾಗಿದ್ದು. ಶಾಂತಿ ನೆಲೆಸಲು ಹಲವಾರು ಕ್ರಮ ಕೈಗೊಳ್ಳಲಾಗಿದೆ ಎಂದು ದಾವಣಗೆರೆ ಪೂರ್ವವಲಯ ಐ.ಜಿ .ಪಿ.ರವಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು.ಶಾಂತಿ ನೆಲಸಲು ಈ ನಿಟ್ಟಿನಲ್ಲಿ ಪೊಲೀಸರು ನಿಯೋಜಿಸಲಾಗಿದೆ. ಚಿತ್ರದುರ್ಗ ಹಾವೇರಿ ದಾವಣಗೆರೆಯಿಂದ ಪೊಲೀಸರನ್ನ ಕರೆಸಲಾಗಿದೆ ಎಂದರು.
148 ಪ್ರದೇಶಗಳನ್ನ ಸೂಕ್ಷ ಹಾಗೂ ಅತಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. 9 ಚೆಕ್ ಪೋಸ್ಟ್ ಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಹೊರಗಿನಿಂದ ಜನರು ಬಂದು ದೊಂಬಿ ಮಾಡದಂತೆ ಚೆಕ್ ಪೋಸ್ಟ್ ನ್ನ ಬಂದೋಬಸ್ತ್ ಮಾಡಲಾಗಿದೆ, 22 ಚೀತಾ, 19 ಮೊಬೈಲ್ ಗಸ್ತು ಕಿರು ಸಂಚಾರದಲ್ಲೂ ಬಂದೋಬಸ್ತ್ ನಡೆಸಲಾಗುತ್ತಿದೆ ಎಂದರು.
ಯಾವುದೇ ತರದ ವದಂತಿಗಳಿಗೆ ಕಿವಿ ಕೊಡಬಾರದು, ವಾಟ್ಸ್ ಮತ್ತು ಸಾಮಾಜಿಕ ಜಾಲತಾಣದ ವಿಷಯಗಳಿಗೆ ಸಾರ್ವಜನಿಕರು ಮನ್ನಣೆ ನೀಡಬಾರದು, ಕೋಮುಗಲಭೆ ಕುರಿತು ಮಾಹಿತಿ ಇದ್ದರೆ ಹತ್ತಿರ ಪೊಲೀಸ್ ಠಾಣೆಗೆ ನೀಡಬೇಕು ಎಂದು ಕೋರಿದರು.
ಗಲಭೆ ಸಂಬಂಧ ಈಗಾಗಲೇ 62 ಜನರನ್ನ ಬಂಧಿಸಲಾಗಿದೆ. ನಾಗೇಶ್ ಮೇಲೆ ಹಲ್ಲೆ ಮಾಡಿದವರು ಮಾಸ್ಕ್ ಧರಿಸಿದ್ದಾರೆ ಎಂದು ಹೇಳುತ್ತಿದ್ದಾರೆ ಆದರೆ ಗುರುತು ಪತ್ತೆ ಮಾಡುತ್ತೇನೆಂದು ಹೇಳುತ್ತಾರೆ. ಆರೋಗ್ಯವಾಗಿ ಬಂದ ಮೇಲೆ ಹಲ್ಲೆ ಮಾಡಿದವರನ್ನ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದು ವರೆಯಲಿದೆ ಎಂದರು.
ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾತನಾಡಿ ಗಲಭೆಗೆ ಪೊಲೀಸ್ ಇಲಾಖೆಯೊಂದಿಗೆ ಜಿಲ್ಲಾಡಳಿತ ಸಹಕಾರ ನೀಡುತ್ತಿದ್ದು, ಶಾಂತಿ ನೆಲೆಸಲು ಕ್ರಮ ಜರುಗಿಸಲಾಗಿದೆ. ಮುಂಜಾಗ್ರತ ಕ್ರಮಕ್ಕೆ ಇಂದು ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಲಾಗಿದೆ ಎಂದರು.
ಆಸ್ಪತ್ರೆ ಗಳ ಬಳಿ ಇರುವ ಹೋಟೆಲ್, ನಂದಿನಿ ಹಾಲುಗಳ ಮಾರಾಟಕ್ಕೂ ಕರ್ಫ್ಯು ಅಡ್ಡಬಂದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಅವಶ್ಯಕತೆ ಇರುವ ಅಂಗಡಿಗಳನ್ನ ಹೊರತು ಪಡಿಸಿ ಉಳಿದ ಅಂಗಡಿಗಳನ್ನ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

Leave a Comment