ಮನಸ್ಸಿನ ಸದೃಢತೆಗೆ ವ್ಯಾಯಾಮ ಅತ್ಯಂತ ಅವಶ್ಯಕ-ಸಹಕಾರಿ:ರಾಜ್ಯ ಆರ್ಯವೈಶ್ಯ ಸಮುದಾಯು ಅಭಿವೃದ್ಧಿ ನಿಗಮದ ಅಧ್ಯಕ್ಷಡಿ.ಎಸ್.ಅರುಣ್


ಶಿವಮೊಗ್ಗ: ದೇಹ ಹಾಗೂ ಮನಸ್ಸಿನ ಸದೃಢತೆಗೆ ವ್ಯಾಯಾಮ ತುಂಬಾ ಅಗತ್ಯ, ನಮ್ಮದೇಹ ಸದೃಢ ಆಗಿರಬೇಕಾದರೆ ದೈಹಿಕ ಚಟುವಟಿಕೆಗಳು ಅತ್ಯಂತ ಸಹಕಾರಿ ಎಂದು ರಾಜ್ಯಆರ್ಯವೈಶ್ಯ ಸಮುದಾಯುಅಭಿವೃದ್ಧಿ ನಿಗಮದ ಅಧ್ಯಕ್ಷಡಿ.ಎಸ್.ಅರುಣ್ ಹೇಳಿದರು.

ಜೆಎನ್‌ಎನ್‌ಸಿಇ ಕ್ರೀಡಾಂಗಣದಲ್ಲಿ ಫಿಟ್‌ಅರೆನಾ ಸಂಸ್ಥೆಯ ನಾಲ್ಕನೇ ರ್ವಾಕೋತ್ಸವ ಸಂದರ್ಭದಲ್ಲಿ ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ಹಮ್ಮಿಕೊಳ್ಳಲಾದ ಏರೋಬಿಕ್ಸ್, ಫಿಟ್‌ನೆಸ್‌ಎಕ್ಸಸೈಸ್ ಹಾಗೂ ವಿಶೇಷ ವ್ಯಾಯಾಮಗಳ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಕಾರ್ಯಕ್ರಮದಲ್ಲಿ ಮಾತನಾಡಿದರು.


ರಾಷ್ಟ್ರಿಯ ಶಿಕ್ಷಣ ಸಮಿತಿ ಕಾರ್ಯದರ್ಶಿ ನಾಗರಾಜ್ ಮಾತನಾಡಿ ಒತ್ತಡದಜೀವನಶೈಲಿಯಿಂದ ಸಮಸ್ಯೆ ಣಿಸುತ್ತವೆ. ಆರೋಗ್ಯ ನಿರ್ಲಕ್ಷ್ಯಿಸದೇ ಉತ್ತಮವಾಗಿಟ್ಟುಕೊಳ್ಳಬೇಕು.ಅದಕ್ಕಾಗಿ ವ್ಯಾಯಾಮವನ್ನು ನಿರಂತರವಾಗಿ ಮಾಡುವುದು ಒಳ್ಳೆಯದು ಎಂದು ತಿಳಿಸಿದರು.

ದಿನನಿತ್ಯದಜೀವನದಲ್ಲಿ ಮಹಿಳೆಯರು ಹೆಚ್ಚಿನಕೆಲಸ ಮಾಡುತ್ತಿರುತ್ತಾರೆ.ಅವರುಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮಕ್ಕೂ ಸ್ವಲ್ಪ ಸಮಯ ಮೀಸಲಿಡಬೇಕು.ಇದರಿಂದಒತ್ತಡಮುಕ್ತರಾಗಲು ಸಾಧ್ಯವಿದ್ದು  ಮಹಿಳೆಯರು ದಿನದ ಸ್ವಲ್ಪ

ಸಮಯದಲ್ಲಿ ವ್ಯಾಯಾಮ ನಡೆಸಬೇಕುಎಂದರು.

ಫಿಟ್‌ಅರೇನಾ ಸಂಸ್ಥೆಯ ಪ್ರಸಿದ್ಧ ತರಬೇತುದಾರ ಸುನೀತಾಚೇತನ್, ಅಕ್ಷತಾಅವರು ವ್ಯಾಯಾಮತರಬೇತಿ ನೀಡಿದರು.ರಾಷ್ಟ್ರಿಯ ಶಿಕ್ಷಣಸಂಸ್ಥೆ ಉಪಾಧ್ಯಕ್ಷಅಶ್ವತ್ಥ ನಾರಾಯಣ್, ಶ್ರೀನಿಧಿ ವೆಂಕೇಶ್, ಚೇತನ್ ಉಪಸ್ಥಿತರಿದ್ದರು.ನೂರಕ್ಕೂ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.