ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ 08 ಮಂದಿ ಬಂಧನ 750 ಗ್ರಾಂ ತೂಕದ ಗಾಂಜಾ ಹಾಗೂ ದ್ವಿಚಕ್ರ ವಾಹನ ವಶ

ಶಿವಮೊಗ್ಗ;ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ 08 ಮಂದಿಯನ್ನು ಬಂಧಿಸಿ,   750 ಗ್ರಾಂ ತೂಕದ  ಗಾಂಜಾ ಹಾಗೂ 3 ದ್ವಿ ಚಕ್ರ ವಾಹನಗಳನ್ನು ವಶಪಡಿಸಿ  ಪೊಲೀಸರು  ಪ್ರತ್ಯೇಕ 03 ಪ್ರಕರಣಗಳನ್ನು ದಾಖಲಿಸಿದ್ದಾರೆ.

 ಶಿವಮೊಗ್ಗ ನಗರ,  ಭದ್ರಾವತಿ ನಗರ ಹಾಗೂ ಶಿಕಾರಿಪುರ ನಗರದಲ್ಲಿ ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ 

ಶ ಕೆ ಟಿ ಗುರುರಾಜ್, ಪಿ.ಐ. ಸಿಇಎನ್ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಹಾಗೂ ಶ್ರೀನಿವಾಸ್, ಪಿಎಸ್ಐ ಹಳೆನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು ಪ್ರತ್ಯೇಕ ಕಾರ್ಯಾಚರಣೆ ನಡೆಸಿತ್ತು.

ಸದರಿ ಆರೋಪಿಗಳ ವಿರುದ್ದ NDPS  ಕಾಯ್ದೆ ರೀತ್ಯ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ 02 ಪ್ರಕರಣಗಳು ಹಾಗೂ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯಲ್ಲಿ 01 ಪ್ರಕರಣ, ಒಟ್ಟು ಪ್ರತ್ಯೇಕ 03  ಪ್ರಕರಣಗಳನ್ನು ದಾಖಲಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಮಾದಕ ವಸ್ತು ಗಾಂಜಾ ಮಾರಾಟದ ಬಗ್ಗೆ ಸಾರ್ವಜನಿಕರು ಶಿವಮೊಗ್ಗ ಜಿಲ್ಲಾ ಪೊಲೀಸ್ ದೂರವಾಣಿ ಸಂಖ್ಯೆ 9480803301 ಗೆ ಕರೆ ಮಾಡಿ ಮಾಹಿತಿಯನ್ನು ನೀಡಬಹುದು. ಮಾಹಿತಿಯನ್ನು ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು  ಕೆ.ಎಂ ಶಾಂತರಾಜು, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ  ತಿಳಿಸಿರುತ್ತಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.