ಸರಗಳ್ಳತನ,ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ!
ಶಿವಮೊಗ್ಗ;ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 4 ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣದಲ್ಲಿ ಅಪಹರಿಸಲಾಗಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆ.24 ರಂದು ವಿನೋಬನಗರದ ಮುನಿಸಿಪಲ್ ಪಾರ್ಕ್ ನಲ್ಲಿ ವ್ಯಕ್ತಿಯೊಬ್ಬರಿಂದ 10 ಗ್ರಾಂ ತೂಕದ ಒಂದು ಬಂಗಾರದ ಸರ ಕಳವು.
ಜುಲೈ 30ರಂದು APMC ಮಾರ್ಕೇಟ್ ನಲ್ಲಿ ವ್ಯಕ್ತಿಯೊಬ್ಬರಿಂದ 01 ಮೊಬೈಲ್ ಫೋನ್ ಕಳವು.
ಏಪ್ರಿಲ್ ರಂದು APMC ಮಾರ್ಕೇಟ್ ನಲ್ಲಿ ವ್ಯಕ್ತಿಯೊಬ್ಬರಿಂದ ಮತ್ತೊಂದು ಮೊಬೈಲ್ ಫೋನ್ ರಾಬರಿ ಮಾಡಿದ್ದ.
ಆಲ್ಕೊಳದ ಮಂಗಳ ಮಂದಿರ ರಸ್ತೆಯಲ್ಲಿನ ವಾಸದ ಮನೆಯೊಂದರಲ್ಲಿ ಕಳ್ಳತನ ಮಾಡಿದ 02 ಗ್ಯಾಸ್ ಸಿಲಿಂಡರ್ ಗಳನ್ನು ಕಳವು ಮಾಡಿದ್ದ ಪ್ರಕರಣದಲ್ಲಿ ಎಎ ಕಾಲೋನಿಯ ಉಮೇಶ್ ಯಾನೆ ಕಡ್ಡಿ ಹಾಗೂ ಸಂತೋಷ್ ಇಬ್ಬರು ಆರೋಪಿ ಗಳು ಭಾಗಿದ್ದರು ಎನ್ನಲಾಗಿದೆ.
ಈ ಪ್ರಕರಣವನ್ನ ಭೇಧಿಸಲು ಡಿವೈಎಸ್ಪಿ ಉಮೇಶ್ ಈಶ್ವರ್ ನಾಯಕ್ ಮಾರ್ಗದರ್ಶನದಲ್ಲಿ ಸಿಪಿಐ ವಸಂತ್ ಕುಮಾರ್, ವಿನೋಬ ನಗರ ಪೊಲೀಸ್ ಠಾಣೆಯ ಪಿಎಸ್ಐ ಉಮೇಶ್ ಕುಮಾರ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು.
ಬಂಧಿತರಿಂದ 10 ಗ್ರಾಂ ತೂಕದ ಬಂಗಾರದ ಒಂದು ಸರ, 02 ಮೊಬೈಲ್ ಫೋನ್ ಗಳು, 02 ಗ್ಯಾಸ್ ಸಿಲಿಂಡರ್ ಗಳು ಒಟ್ಟು ಅಂದಾಜು ಮೌಲ್ಯ ರೂ 90,000/- (ರೂಪಾಯಿ ತೊಂಬತ್ತು ಸಾವಿರ) ಮತ್ತು ಕೃತ್ಯಕ್ಕೆ ಬಳಸಿದ ಒಂದು ದ್ವಿ ಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಉಮೇಶ್(20) ಮತ್ತು ಸಂತೋಷ್(22) ಬಂಧಿಸಿದ ಇಬ್ಬರನ್ನ ಆರೋಪಿಗಳನ್ನು ವಿಚಾರಣೆಯ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
Leave a Comment