ಮಹಿಳೆಯರೆ ಎಚ್ಚರ..ಎಚ್ಚರ..ಒಂದು ವಾರದಲ್ಲಿ ಮೂವರು ಮಹಿಳೆಯರ ಸರ ಅಪಹರಿಸಿ ಪರಾರಿಯಾದ ಕಳ್ಳರು
ಶಿವಮೊಗ್ಗ;ಮಾಂಗಲ್ಯ ಸರ ಕಳ್ಳತನದ ಸರಣಿ ಮುಂದುವರೆದಿದೆ.ಒಂದು ವಾರದಲ್ಲಿ ಮೂವರು ಮಹಿಳೆಯರ ಸರ ಅಪಹರಿಸಿ ಕಳ್ಳರು ಪರಾರಿಯಾದ ಘಟನೆ ನಡೆದಿದೆ.
ಸೆ.5 ರಂದು ಶಿಕ್ಷಕಿಯೋರ್ವರ ಮಾಂಗಲ್ಯ ಸರ ಕಳುವಾದರೆ, ನಿನ್ನೆ ವೆಂಕಟೇಶ್ ನಗರ 3 ನೇ ತಿರುವಿನಲ್ಲಿ ಎಸಿ ಕಚೇರಿಯ ಎಫ್ ಡಿಸಿಯವರ ಮಾಂಗಲ್ಯ ಸರ ಕಳುವಾಗಿದೆ
ಇಂದು ಓಲ್ಡ್ ಬಾರ್ ಲೈನ್ ರಸ್ತೆಯಲ್ಲಿ ಆರ್ ಡಿ ಸಂಗ್ರಹಿಸಿಕೊಂಡು ಮನೆಗೆ ವಾಪಾಸಾಗುತ್ತಿದ್ದಾಗ ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ಮಹಿಳೆಯ ಮಾಂಗಲ್ಯ ಸರವನ್ನ ಅಪಹರಿಸಿದ್ದಾರೆ.
ಜಾಹ್ನಾವಿ ಎಂಬ ಮಹಿಳೆ ಓಲ್ಡ್ ಬಾರ್ ಲೈನ್ ರಸ್ತೆಯಲ್ಲಿರುವ ಸಂಬಂಧಿಕರ ಮನೆಯಿಂದ ಆರ್ ಡಿ ಹಣ ಸಂಗ್ರಹಿಸಿ ಕೋಟೆ ರಸ್ತೆಯಲ್ಲಿರುವ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ. 24 ಗ್ರಾಂ ಚಿನ್ನದ ಮಾಂಗಲ್ಯ ಸರ ಕಳವಾಗಿದ್ದು, ಈ ಸಂಭಂದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಒಂದು ವಾರದಲ್ಲಿ ನಗರದಲ್ಲಿ ಮೂರು ಸರ ಅಪಹರಣ ಪ್ರಕರಣಗಳು ದಾಖಲಾಗಿರುವುದರಿಂದ ಸರಧರಿಸಿಕೊಂಡು ಓಡಾಡುವ ಮಹಿಳೆಯರು ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

Leave a Comment