ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಗೆ ಸಂಘಸಂಸ್ಥೆಗಳಿಂದ ಸನ್ಮಾನ*

ಶಿವಮೊಗ್ಗ, ಸೆ.19: ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಪ್ರದರ್ಶನ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್'ಗೆ ವಿವಿಧ ಸಂಘಸಂಸ್ಥೆಗಳು ಸನ್ಮಾನ ಸಮಾರಂಭ ಆಯೋಜಿಸಿದ್ದವು.

ಶಿವಮೊಗ್ಗ ನಗರ ಪರಿಸರ ಪ್ರೇಮಿಗಳ ಒಕ್ಕೂಟ ಹಾಗೂ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಿವಮೊಗ್ಗ ನಗರ ಪರಿಸರ ಪ್ರೇಮಿಗಳ ಒಕ್ಕೂಟದ ಅಧ್ಯಕ್ಷ ಪರಿಸರ ಸಿ. ರಮೇಶ್'ರವರು ಮಾತನಾಡಿ, ಶಿವಮೊಗ್ಗ ನಾಗರಾಜ್'ರವರು ಅಪರೂಪದ ಛಾಯಾಗ್ರಾಹಕರಾಗಿದ್ದಾರೆ. ದೆಹಲಿಯ ಪ್ರತಿಷ್ಠಿತ ವೈಲ್ಡ್ ಲೈಫ್ ಫೋಟೋಗ್ರಫಿ
ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿದ್ದ
ಅಂತಾರಾಷ್ಟ್ರೀಯ ಮಟ್ಟದ ಸಾಮ್ ಸರ್ಕಿಟ್‌ 2020 ಛಾಯಾಚಿತ್ರ
ಸ್ಪರ್ಧೆಯಲ್ಲಿ ಬಹುಮಾನ ಪಡೆದುಕೊಂಡಿದ್ದಾರೆ. ಹಲವು ರಾಜ್ಯ,
ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿವಿಧ
ಬಹುಮಾನಗಳಿಗೆ ಭಾಜನರಾಗಿರುವುದು ಅವರ ಸಾಧನೆಗೆ ಸಾಕ್ಷಿಯಾಗಿದೆ ಎಂದರು.
ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯ ಅಧ್ಯಕ್ಷ ಪತಂಜಲಿ ನಾಗರಾಜ್'ರವರು ಮಾತನಾಡಿ, ಸೃಜನಶೀಲ ಹಾಗೂ ಪ್ರತಿಭಾನ್ವಿತ
ಛಾಯಾಗ್ರಾಹಕ ನಾಗರಾಜ್'ರವರು ಜಿಲ್ಲೆಗೆ ಉತ್ತಮ ಹೆಸರು ತರುವ ಕಾರ್ಯ ನಡೆಸಿದ್ದಾರೆ.  ಅವರಿಂದ ಭವಿಷ್ಯದಲ್ಲಿ ಬಹಳಷ್ಟು
ಕ್ರಿಯಾತ್ಮಕ ಛಾಯಾಚಿತ್ರಗಳು ಮೂಡಿಬರಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಹಾದೇವಪ್ಪ, ಶಿಕ್ಷಕ ಹೇಮಂತ್ ಕುಮಾರ್, ಛಾಯಾಗ್ರಾಹಕ ಹೊಸುಮ, ಮಂಜುನಾಥ, ಸೇರಿದಂತೆ ಮೊದಲಾದವರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.