ಕೆಎಸ್ಆರ್ ಟಿಸಿ ಬಸ್ ಮತ್ತು ಬೈಕ್ ಡಿಕ್ಕಿ, ಬೈಕ್ ಸವಾರ ಸಾವು!
ಶಿವಮೊಗ್ಗ;ಸಾಗರ ತಾಲೂಕು ಆನಂದ ಪುರದ ಹೊಸೂರು ಗ್ರಾಮದ ಬಳಿ ಕೆಸ್ಆರ್ ಟಿಸಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಉಂಟಾಗಿದ್ದು ಡಿಕ್ಕಿಯಲ್ಲಿ ಬೈಕ್ ಸವಾರ ಸಾವನ್ಬಪ್ಪಿದ ಘಟನೆ ವರದಿಯಾಗಿದೆ.
ಬೆಂಗಳೂರಿನಿಂದ ಶಿವಮೊಗ್ಗದ ಮೂಲಕ ಸಾಗರ ಕಡೆಗೆ ಬಸ್ಸು ಸಾಗುತ್ತಿದ್ದು ಬೈಕ್ ಸವಾರ ಶಿವಮೊಗ್ಗದ ಕಡೆ ಬರುತ್ತಿದ್ದಾಗ ಆನಂದ ಪುರದ ಹೊಸೂರಿನಲ್ಲಿ ಈ ಅಪಘಾತವುಂಟಾಗಿದೆ.
ಬೈಕ್ ಸವಾರನನ್ನ ಸಾಗರದ ಆಸ್ಪತ್ರೆಗೆ ಸಾಗಿಸಲಾಗಿದ್ದು ಸಾವನ್ನಪ್ಪಿರುವುದು ಖಚಿತಗೊಂಡಿದೆ.
ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿ ಅಮಿತ್ ಎಂದು ಗುರುತಿಸಲಾಗಿದೆ. ಅಮಿತ್ ತರೀಕೆರೆ ಮೂಲದವನು ಎಂದು ಹೇಳಲಾಗುತ್ತಿದ್ದರೂ ಸಹ ಸಾಗರದಲ್ಲಿದ್ದ ಅಕ್ಕ ಮತ್ತು ಭಾವನೊಂದಿಗೆ ಅಮಿತ್ ಅನೇಕ ದಿನಗಳಿಂದ ಜೊತೆಗೆ ಇದ್ದನು ಎಂದು ತಿಳಿದುಬಂದಿದೆ..
ಬಸ್ ನಲ್ಲಿ ಸುಮಾರು 20 ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಬಸ್ ನ್ನ ಆನಂದಪುರದ ಉಪ ಪೊಲೀಸ್ ಠಾಣೆಯಲ್ಲಿ ಬಸ್ ನ್ನ ನಿಲ್ಲಿಸಲಾಗಿದೆ. ಪ್ರಯಾಣಿಕರಿಗೆ ಬದಲೀ ವ್ಯವಸ್ಥೆ ಮಾಡಲಾಗಿದೆ.
ಸಾಗರ ಗ್ರಾಮಾಂತರ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ
Leave a Comment