ಅರಣ್ಯ ಸಂಚಾರಿ ದಳದ ಕಾರ್ಯಾಚರಣೆ; ಚಿರತೆ ಚರ್ಮ ವಶ ಆರೋಪಿಯ ಬಂಧನ
ಶಿವಮೊಗ್ಗ;. ಚನ್ನಗಿರಿ ಪೊಲೀಸ್ ಅರಣ್ಯ ಸಂಚಾರಿ ದಳದ ವರು ಕಾರ್ಯಾಚರಣೆ ನಡೆಸಿ ಚಿರತೆ ಚರ್ಮ ವಶಪಡಿಸಿಕೊಂಡು ಆರೋಪಿಯನ್ನು ಬಂಧನ ಮಾಡಿದ ಘಟನೆ ವರದಿಯಾಗಿದೆ.
ಚನ್ನಗಿರಿ ವ್ಯಾಪ್ತಿಯಲ್ಲಿ ಭದ್ರಾವತಿ ತಾಲೂಕಿನ ದೊಡ್ಡೇರಿ ಬಾಳೆಕಟ್ಟೆ ಗ್ರಾಮದ ವಾಸಿ ಪ್ರೇಮನಾತ ರೆಡ್ಡಿ ತಂದೆ ತಿಮ್ಮರೆಡ್ಡಿ ಇವರು ಚಿರತೆಯನ್ನು ಬೇಟೆಯಾಡಿ ಚಿರತೆ ಚರ್ಮವನ್ನು ಇಟ್ಟುಕೊಂಡಿದ್ದ ಆರೋಪಿಯನ್ನು ವಶಕ್ಕೆ ಪಡೆದು ಭದ್ರಾವತಿ ವಲಯಾರಣ್ಯಧಿಕಾರಿಗಳಿಗೆ ಒಪ್ಪಿಸಿರುತ್ತಾರೆ.
ಈ ದಾಳಿಯಲ್ಲಿ ಚೆನ್ನಗಿರಿ ಪಿಎಸ್ಐ ಶ್ರೀಮತಿ ಭಾರತಿ ಮತ್ತು ಸಿಬ್ಬಂದಿಗಳಾದ ಪ್ರಕಾಶ. ರವಿ ಕೃಷ್ಣ ಶಿವಲಿಂಗ ನೀಲಾವತಿ ಇವರುಗಳು ಭಾಗಿಯಾಗಿದ್ದರು.

Leave a Comment