ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಮೆಸ್ಕಾಂ ಪ್ರಕಟಣೆ

 


ಶಿವಮೊಗ್ಗ :  : ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿಯು ಸಾರ್ವಜನಿಕ ಹಿತದೃಷ್ಟಿಯಿಂದ ವಿದ್ಯುತ್ ಬಿಲ್ ಪಾವತಿಯನ್ನು ಇನ್ನಷ್ಟು ಸರಳಗೊಳಿಸಿ ವಿವಿಧ ವಿಧಾನಗಳನ್ನು ಜಾರಿಗೆ ತಂದಿದೆ ಎಂದು ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಆನ್‌ಲೈನ್, ನೆಫ್ಟ್/ಆರ್.ಟಿ.ಜಿ.ಎಸ್, ನಗದು ಮುಂಗಡ, ಆಪ್ ಮೂಲಕ, ಎ.ಟಿ.ಪಿ, ಅಂಚೆ ಕಚೇರಿ, ಎನ್.ಎಸಿಹೆಚ್, ಕರ್ನಾಟಕ ಒನ್, ಪೇಟಿಎಂ ಹಾಗೂ ಬಿಬಿಪಿಎಸ್ ಗಳ ಮೂಲಕ ಪಾವತಿಸಬಹುದಾಗಿದೆ.  

ಮೆಸ್ಕಾಂ ಬಿಲ್ ಪಾವತಿಗಾಗಿ ವಸೂಲಾತಿ ಕಾರ್ಯಚರಣೆಯನ್ನು ಸೆ.21 ರಿಂದ 30 ರವರೆಗೆ ಹಮ್ಮಿಕೊಳ್ಳಲಾಗಿದೆ.. 

ಮಾಹಿತಿಗಾಗಿ  ಹತ್ತಿರದ ಮೆಸ್ಕಾಂ ಉಪವಿಭಾಗ ಕಚೇರಿಗಳನ್ನು ಸಂಪರ್ಕಿಸಿ ಅಥವಾ ಉಚಿತ ದೂರವಾಣಿ ಸಂಖ್ಯೆ 1912ಗೆ ಸಂಪರ್ಕಿಸುವುದು. 

ವಿದ್ಯುತ್ ಬಗ್ಗೆ ಜಾಗ್ರತೆ ಇರಲಿ, ಸದಾ ಸುರಕ್ಷತಾ ಕ್ರಮಗಳನ್ನು ಪಾಲಿಸಿ: ವಿದ್ಯುತ್ ತಂತಿಗಳ ಹತ್ತಿರ ಆಡಬಾರದು. ವಿದ್ಯುತ್ ಕಂಬಗಳನ್ನು ಹತ್ತವುದು, ಸ್ವತಃ ದುರಸ್ಥಿ ಕಾರ್ಯ ಮಾಡುವುದು ಅಪಾಯಕಾರಿ.  ತೋಟಗಳಲ್ಲಿ ಅಲ್ಯುಮಿನಿಯಂ ಏಣಿಗಳನ್ನು ಹಾಗೂ ಕೋಲುಗಳನ್ನು ಬಳಸುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸಿ.  ವಿದ್ಯುತ್ ಸ್ವಿಚ್ ಹಾಗೂ ಉಪಕರಣಗಳನ್ನು ಒದ್ದೆ ಕೈಗಳಿಂದ ಮುಟ್ಟಬೇಡಿ.  ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಮರದ ರೆಂಬೆಗಳನ್ನು ತೆಗೆಯಲು ಪ್ರಯತ್ನಿಸಬೇಡಿ.  ಸಾಕು ಪ್ರಾಣಿಗಳನ್ನು ವಿದ್ಯುತ್ ಕಂಬಗಳಿಗೆ  ಅಥವಾ ಗೈತಂತಿಗಳಿಗೆ ಕಟ್ಟಬೇಡಿ.  ವಿದ್ಯುತ್ ಲೈನ್‌ಗಳ ಕೆಳಗೆ ಸರಕು ಸಾಗಣಿಕೆ ಸಮಯದಲ್ಲಿ ಸೂಕ್ತ ಸುರಕ್ಷ ಕ್ರಮಗಳನ್ನು ಅನುಸರಿಸಿ. ವಿದ್ಯುತ್ ಉಪಕರಣಗಳನ್ನು ಪರಿಣಿತರಿಂದ ದುರಸ್ತಿಗೊಳಿಸಿ, ಮುರಿದುಬಿದ್ದ ತಂತಿಗಳನ್ನು ಬರಿಗೈಯಿಂದ ಮುಟ್ಟಬೇಡಿ.  ಕಂಬ ಅಥವಾ ಗೈ ತಂತಿಗಳ ಮೇಲೆ ಅಥವಾ ಸನಿಹದಲಿ ಬ್ಟೆಗಳನ್ನು ಒಣಗಿಸಬೇಡಿ.  ವಿದ್ಯುತ್ ಕಂಬಗಳಿಗೆ ಬ್ಯಾನರ್ ಅಥವಾ ಪ್ರಚಾರ ಫಲಕಗಳನ್ನು ಕಟ್ಟಬೇಡಿ ಹಾಗೂ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯದಿರಿ.

"ದ್ಯುತ್ ಮಾರ್ಗದ ಕೆಳಗೆ ಅಥವಾ ಪಕ್ಕದಲ್ಲಿರುವ ಕೊಳವೆ ಬಾ" ದುರಸ್ಥಿ ಕೆಲಸಗಳನ್ನು ಮಾಡುವ ಮುನ್ನ ಮೆಸ್ಕಾಂ ಕಚೇರಿಗೆ ತಿಳಿಸಿ.  ಕಟ್ಟಡ ಕಾಮಗಾರಿಯ ವೇಳೆಯಲ್ಲಿ ಕಬ್ಬಿಣದ ಸರಳುಗಳನ್ನು ಸಾಗಿಸುವಾಗ "ದ್ಯುತ್ ಲೈನ್‌ಗೆ ತಾಗದಂತೆ ಎಚ್ಚರವ"ಸಿ.  ತುಂಡಾದ ಅಥವಾ ಇನ್ಸುಲೇಷನ್ ಇಲ್ಲದ "ದ್ಯುತ್ ತಂತಿಗಳನ್ನು ಮುಟ್ಟಬೇಡಿ.  ಸ್ವಿಚ್ ಬೋರ್ಡ್‌ಗಳನ್ನು ಮಕ್ಕಳ ಕೈಗೆ ಸಿಗದಂತೆ ಎಚ್ಚರವ"ಸಿ. ಟ್ರಾನ್ಸ್‌ಫಾರ್ಮರ್‌ಗಳ ಸುತ್ತಲಿನ ತಂತಿ ಬೇಲಿ ಮಟ್ಟದಿರಿ, ನೀರು ಕಾುಸಲು ತೆರೆದ ಕಾಯ್ಲಗಳನ್ನು ಬಳಸಬೇಡಿ.  ಐಎಸ್‌ಐ ಗುರುತು ಹೊಂದಿರುವ "ದ್ಯುತ ಉಪಕರಣಗಳನ್ನು ಬಳಸಿ.  ಒಂದೆ ಸರ್ಕ್ಯೂಟ್‌ಗೆ ಹಲವಾರು ಉಪಕರಣಗಳನ್ನು ಜೋಡಿಸಬೇಡಿ.  ಇಲೆಕ್ಟ್ರಿಕಲ್ ಉಪಕರಣಗಳ/ಸಾಕೆಟ್‌ಗಳ ಹತ್ತಿರ ಸುಲಭವಾಗಿ ಬೆಂಕಿ ಹತ್ತಿಕೊಳ್ಳುವಂತಹ ಸಾಮಾಗ್ರಿಗಳನ್ನು ಇಡಬೇಡಿ.  ಸರ್ಕಾರದ ಪರವಾನಗಿ ಪಡೆದ ತಾಂತ್ರಿಕ ಪರಿಣಿತರ ಮೂಲಕವೇ ವೈರಿಂಗ್ ಕೆಲಸಗಳನ್ನು ಮಾಡಿಸಿ.  "ದ್ಯುತ್ ಲೈನ್‌ಗಳ ಮೇಲೆ ಮರದ ಕೊಂಬೆಗಳು ಬಿದ್ದಲ್ಲಿ ತೆಗೆಯಲು ಪ್ರಯತ್ನಿಸಬೇಡಿ.  ಕೂಡಲೇ ಸ್ಥಳೀಯ ಮೆಸ್ಕಾಂ ಕಚೇರಿಗೆ ಅಥವಾ ಮೆಸ್ಕಾಂ ಲೈನ್‌ಮ್ಯಾನ್‌ರವರಿಗೆ ತಿಳಿಸಿ.  "ದ್ಯುತ್ ಲೈನ್‌ಗಳ ಕೆಳಗಡೆ ಗಿಡಗಳನ್ನು ನೆಡಬೇಡಿ.  ಕಟ್ಟಡ ನಿರ್ಮಾಣ ಮಾಡುವ ನಿಯಮಗಳ ಪ್ರಕಾರ "ದ್ಯುತ್ ಮಾರ್ಗ ಹಾಗೂ ಕಟ್ಟಡದ ನಡುವ ಅಂತರವನ್ನು ಕಾಯ್ದುಕೊಳ್ಳಿ ಎಂದು ಕಾರ್ಯಪಾಲಕ ಇಂಜಿನಿಯರ್ ಸಾರ್ವಜನಿಕರಿಗೆ ಎಚ್ಚರಿಕಾ ಕ್ರಮಗಳನ್ನು ತಿಳಿಸಿದ್ದಾರೆ.

ಸಾರ್ವಜನಿಕ ಪ್ರಕಟಣೆ:  ನಗರ ಉಪ "ಭಾಗ-3 ರ ಮೆಸ್ಕಾಂ ವ್ಯಾಪ್ತಿಯ ಆಲ್ಕೊಳ ಸರ್ಕಲ್‌ನಿಂದ ಲಕ್ಷ್ಮೀ ಟಾಕೀಸ್‌ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಮೆಸ್ಕಾಂ ಮತ್ತು ಆಲ್ಕೊಳ ಸರ್ಕಲ್‌ನಿಂದ ಬಿ.ಎಸ್.ಎನ್.ಎಲ್ ಭವನದವರೆಗೆ ಸ್ಮಾರ್ಟ್‌ಸಿಟಿ ವತಿುಂದ ಭೂಗತ ಕೇಬಲ್ ಚೇತನಗೊಂಡಿರುವುದರಿಂದ ಸಾರ್ವಜನಿಕರು ಅಗೆಯದ ಹಾಗೂ ಫ್ಲೇಕ್ಸ್‌ಗಳನ್ನು ನಿಲ್ಲಿಸದಂತೆ ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಎಚ್ಚರಿಸಿದ್ದಾರೆ.  

ಸಹಾಯಕ್ಕಾಗಿ ಮೊಬೈಲ್ ಸಂ.: 9448289664/9448289679/9448289676 ಗಳನ್ನು ಸಂಪರ್ಕಿಸುವುದು. 



ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.