ಲೋಕಾಯುಕ್ತರಿಂದ ಅಹವಾಲು ಸ್ವೀಕಾರ ಸಭೆ
ಶಿವಮೊಗ್ಗ, : ಜಿಲ್ಲಾ ಕರ್ನಾಟಕ ಲೋಕಾಯುಕ್ತ ಪೋಲಿಸ್ ಅಧಿಕಾರಿಗಳು ಸೆಪ್ಟಂಬರ್-2020ರ ಮಾಹೆಯಲ್ಲಿ ಈ ಕೆಳಕಂಡ ದಿನಗಳಂದು ಸಾರ್ವಜನಿಕರಿಂದ ಕುಂದು ಕೊರತೆ ಬಗ್ಗೆ ಅಹವಾಲು ಸ್ವೀಕರಿಸುವರು.
ಲೋಕಾಯುಕ್ತ ಅಧಿಕಾರಿಗಳು ಆಯಾ ದಿನಗಳಂದು ನಿಗಧಿಪಡಿಸಿದ ತಾಲೂಕು ಕೇಂದ್ರದ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಸರ್ಕಾರಿ ಕರ್ತವ್ಯ ನಿರ್ವಹಿಸಲು ವಿಳಂಬ ಹಾಗೂ ನಿರ್ಲಕ್ಷ್ಯ ತೋರುವ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಸಾರ್ವಜನಿಕರಿಂದ ಲಿಖಿತ ದೂರು ಪಡೆಯುವರು. ಸೆಪ್ಟಂಬರ್-08 ರಂದು ಹೊಸನಗರ, ಸೆಪ್ಟಂಬರ್ -11 ರಂದು ತೀರ್ಥಹಳ್ಳಿ, ಸೆಪ್ಟಂಬರ್ -15ರಂದು ಸೊರಬ, ಸೆಪ್ಟಂಬರ್ -22 ರಂದು ಸಾಗರ, ಸೆಪ್ಟಂಬರ್ -25 ರಂದು ಶಿಕಾರಿಪುರ ಹಾಗೂ ಸೆಪ್ಟಂಬರ್ - 29ರಂದು ಭದ್ರಾವತಿಯ ಮಿಲಿಟರಿ ಕ್ಯಾಂಪ್‍ನ ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕರಿಸುವರು ಎಂದು ಜಿಲ್ಲಾ ಕರ್ನಾಟಕ ಲೋಕಾಯುಕ್ತ ಪೋಲಿಸ್ ಉಪಾಧೀಕ್ಷಕರು ತಿಳಿಸಿದ್ದಾರೆ.


Leave a Comment